ಗುರುಮಠಕಲ್: ಅಕ್ಟೋಬರ್ 18 – ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾಜಿ ಸಚಿವ ಹಾಗೂ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ್ ಅವರು ಮಾತನಾಡಿ, “ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕ ಪ್ರಿಯಾಂಕ ಖರ್ಗೆ ಅವರು ರಾಜ್ಯದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಇತ್ತೀಚಿಗೆ ಕೆಲವರು ಉದ್ದೇಶಪೂರ್ವಕವಾಗಿ ಅವರ ವಿರುದ್ಧ ಅಪಪ್ರಚಾರ ಮತ್ತು ಬೆದರಿಕೆ ಹಾಕುತ್ತಿರುವುದು ಖಂಡನೀಯ. ಯಾವುದೇ ಕಾರಣಕ್ಕೂ ಈ ರೀತಿಯ ವರ್ತನೆ ಸಹಿಸಲಾಗುವುದಿಲ್ಲ,” ಎಂದು ಎಚ್ಚರಿಸಿದರು.
ಮುಂದುವರಿದು ಅವರು, “ಈ ರೀತಿ ಕೃತ್ಯಗಳು ಮುಂದುವರೆದರೆ ರಾಜ್ಯದಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ದಲಿತ ಸಮುದಾಯದವರು ತಕ್ಕ ಪಾಠ ಕಲಿಸುತ್ತಾರೆ,” ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಚಪೆಟ್ಲಾ ಮಾತನಾಡಿ, “ಭಾಜಪ ಹಾಗೂ ಆರ್.ಎಸ್.ಎಸ್ ನವರು ಪ್ರಿಯಾಂಕ ಖರ್ಗೆ ಅವರ ಜನಪ್ರಿಯತೆ ಸಹಿಸದೆ ಮತ್ತು ಅವರು ಪಿ ಎಸ್ ಐ ಹಗರಣ, ಭಾಜಪ 40% ಕಮಿಷನ್ ನಂತಹ ಭಾಜಪ ಹಗರಣ ಹೊರಗೆ ತಂದಿರುವ ಕಾರಣ ಉದ್ದೇಶಪೂರ್ವಕವಾಗಿ ಅವರ ನಿಂದಿಸುವದು ಹಾಗೂ ತೇಜೋವಧೆಗೆ ಯತ್ನಿಸುತ್ತಿವೆ. ಇದನ್ನು ಗುರುಮಠಕಲ್ ಕಾಂಗ್ರೆಸ್ ಕಟ್ಟುನಿಟ್ಟಾಗಿ ವಿರೋಧಿಸುತ್ತದೆ,” ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂಜೀವ ಕುಮಾರ್ ಚಂದಾಪುರ, ಪಕ್ಷದ ಮುಖಂಡರಾದ ಆಶಪ್ಪ ಗಾಜರಕೊಟ್, ಭೀಮಶಪ್ಪ ರಾಂಪುರ, ಚನ್ನಬಸಪ್ಪ ಗಾಜರಕೊಟ್, ಚಂದ್ರಯ್ಯ ಗುತ್ತೇದಾರ, ವಿಜಯಕುಮಾರ್ ನೀರೆಟಿ, ಬಾಬು ತಲಾರಿ, ಮಾಣಿಕ್ ಮುಕಡಿ ಹಾಗೂ ಭೀಮಶಪ್ಪ ಶನಿವಾರಂ, ಅಶೋಕ ಶನಿವಾರಂ ಉಪಸ್ಥಿತರಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ



















