ಯಾದಗಿರಿ/ ಗುರುಮಠಕಲ್: ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಎಲ್ಲಾ ಪಟ್ಟಣ ಹಾಗೂ ಗ್ರಾಮಗಳಲ್ಲಿ ಶಾಸಕರ ಅನುದಾನದಲ್ಲಿ ಸುಮಾರು 280 ಹೈಮಾಸ್ಟ್ ಸೋಲಾರ್ ದೀಪಗಳನ್ನು ಹಂಚಿಕೆ ಮಾಡಲಾಗಿತ್ತು, ನಿನ್ನೆಯಿಂದ ಎಲ್ಲೆಡೆ ಸೋಲಾರ್ ದೀಪಗಳ ಅಳವಡಿಸುವ ಕಾರ್ಯ ಸಾಗುತ್ತಿದೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಎಲ್ಲೆಡೆ ದೀಪಗಳು ಜಗಮಗಿಸುತ್ತಿದ್ದು, ಸಾಮಾಜಿಕ ಬದ್ಧತೆ ಹಾಗೂ ಗ್ರಾಮೀಣ ವಲಯದಲ್ಲಿ ಬೆಳಕು ತಂದಿರುವ ಕುರಿತು ಶಾಸಕ ಶರಣಗೌಡ ಕಂದಕೂರ ಅವರಿಗೆ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಜೆಡಿಎಸ್ ಯುವ ಘಟಕ ವಕ್ತಾರರಾದ ಸುರೇಶ್ ಚಿನ್ನ ರಾಥೋಡ್, ಅನಂತ ಧರ್ಮಪುರ ನಿವಾಸಿಗಳಾದ ಮಲ್ಲೇಶ್, ರಮೇಶ್, ರಾಮು ನಾಯಕ್, ಅಂಬರೀಶ್, ಅನಿಲ್ ಮತ್ತು ಅನೇಕರು ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದರು.
ವರದಿ: ಜಗದೀಶ್ ಕುಮಾರ್ ಭೂಮಾ



















