ಬೆಳಗಾವಿ ಜಿಲ್ಲೆಯ ಕಿತ್ತೂರು ನಾಡಿನ ವೀರ ವನಿತೆ ಚೆನ್ನಮ್ಮಾಜಿಯವರ 201ನೇ ವರ್ಷದ ಜಯಂತಿ ಅಂಗವಾಗಿ ಜಿಲ್ಲಾಧಿಕಾರಿಗಳಾದ ಶ್ರೀ ಮೊಹಮ್ಮದ್ ರೋಷನ್ ಅವರು ಕಿತ್ತೂರು ತಾಲೂಕಿನ ಅಕ್ಕ ಪಕ್ಕದಲ್ಲಿರುವ ಸಾರಾಯಿ ಅಂಗಡಿಗಳನ್ನು ಮೂರು ದಿನಗಳ ಕಾಲ ಬಂದ್ ಮಾಡಲು ಆದೇಶ ಹೊರಡಿಸಿರುತ್ತಾರೆ. ಜಿಲ್ಲಾ ಆಡಳಿತ ಹಾಗೂ ಕಿತ್ತೂರ ಹಾಗೂ ಬೈಲಹೊಂಗಲ ತಾಲೂಕಿನ ಕಂದಾಯ ಇಲಾಖೆಗಳು ಮತ್ತು ಶಾಸಕರ ಸಮ್ಮುಖದಲ್ಲಿ 23, 24, 25 ರಂದು ನಡೆಯಲಿರುವ ಉತ್ಸವಕ್ಕೆ ಇವತ್ತಿನ ದಿವಸ ಚಾಲನೆ ಸಿಗಲಿದೆ.
ವರದಿ ಮಂಜು. ಎಂ. ಚಿಕ್ಕಣ್ಣವರ



















