ಕಲಬುರಗಿ/ ಚಿತ್ತಾಪುರ; ಹಡಪದ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಕರ್ನಾಟಕ ಹಡಪದ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಆದೇಶಿಸಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಹಡಪದ ಸಮಾಜದ ನೇತೃತ್ವದಲ್ಲಿ ಮುಖಂಡರು ಲಾಡ್ಜಿಂಗ್ ಕ್ರಾಸ್ ಹತ್ತಿರ ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.
ನಂತರ ತಾಲೂಕು ಅಧ್ಯಕ್ಷ ರಮೇಶ್ ಹಡಪದ ಕೊಲ್ಲೂರು ಮಾತನಾಡಿ, ಹಡಪದ ಸಮಾಜದ ಬಹುದಿನಗಳ ಬೇಡಿಕೆಯಾಗಿದ್ದ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಆದೇಶ ಹೊರಡಿಸಿ ನಮ್ಮ ಸಮಾಜಕ್ಕೆ ನ್ಯಾಯ ಕಲ್ಪಿಸಿದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಹಿಂದುಳಿದ ವರ್ಗಗಳ ಸಚಿವ ಶಿವರಾಜ್ ತಂಗಡಗಿ ಅವರಿಗೆ ಅಭಿನಂದನೆಗಳು ಸಲ್ಲಿಸಿದರು.
ಮುಖಂಡರಾದ ಸಂಜಯ ಬುಳಕರ್, ಸಂತೋಷ ಪೂಜಾರಿ, ಅಶೋಕ ಹಡಪದ ಚಿತ್ತಾಪುರ, ಅಶೋಕ ಚಾರೆ ವಾಡಿ, ಪಂಡಿತ್ ಚಾರೆ, ಮುರುಳಿ ಹಡಪದ ಚಿತ್ತಾಪುರ, ಸೋಮನಾಥ ಹಡಪದ, ಕಾಶಿನಾಥ ಹಡಪದ, ಸಿದ್ದು ಹಡಪದ ಭೀಮನಳ್ಳಿ, ವಿಶ್ವನಾಥ ಹಡಪದ, ಸಂದೇಶ ಹಡಪದ, ಚಂದ್ರಶೇಖರ ಹಡಪದ, ಮಹೇಶ್ ಹಡಪದ, ಕಲ್ಯಾಣಿ ಹಡಪದ, ಗಣಪತಿ ಹಡಪದ ಗುಂಡಗುರ್ತಿ ಸೇರಿದಂತೆ ಇತರರು ಇದ್ದರು.
- ಕರುನಾಡ ಕಂದ ಪತ್ರಿಕೆ



















