ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಆಂಗ್ಲರಿಗೆ ಸಿಂಹ ಸ್ವಪ್ನವಾಗಿದ್ದ ಕಿತ್ತೂರು ರಾಣಿ ಚನ್ನಮ್ಮ :ಡಾ. ಗಣಪತಿ ಲಮಾಣಿ

ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಗುರುವಾರ ದಂದು ವೀರವನಿತೆ ಕಿತ್ತೂರು ರಾಣಿ ಚನ್ನಮ್ಮ ಜಯಂತಿಯನ್ನು ಆಚರಿಸಲಾಯಿತು.
ಕಿತ್ತೂರು ರಾಣಿ ಚನ್ನಮ್ಮ ಆಂಗ್ಲರಿಗೆ ಸಿಂಹ ಸ್ವಪ್ನ ವಾಗಿದ್ದರು. ಭಾರತ ಸ್ವಾತಂತ್ರಕ್ಕಾಗಿ ಹೋರಾಡಿದ ಕನ್ನಡನಾಡಿನ ವೀರವನಿತೆ ಮತ್ತು ಕನ್ನಡನಾಡಿನ ಸ್ವಾಭಿಮಾನವುಳ್ಳರಾಗಿದ್ದರು ಎಂದು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಲಮಾಣಿ ಯವರು ತಿಳಿಸಿದರು.
ಅವರು ಮುಂದುವರೆದು ಮಾತನಾಡುತ್ತಾ ಕಿತ್ತೂರು ರಾಣಿ ಚನ್ನಮ್ಮ ಅವರು ತನ್ನ ರಾಜ್ಯಕ್ಕಾಗಿ, ಸ್ವಾತಂತ್ರ್ಯ ರಕ್ಷಣೆಗಾಗಿ ಬ್ರಿಟಿಷರ ದೊಡ್ಡ ಸೈನ್ಯದ ವಿರುದ್ದ ಸೆಟೆದು ನಿಂತು ನಡೆಸಿದ ಹೋರಾಟವನ್ನು ನಾವು ಸ್ಮರಿಸಬೇಕು ಚನ್ನಮ್ಮ ತೋರಿದ ಧೈರ್ಯ, ಸಾಹಸ, ಕಿಚ್ಚುಗಳು ಅವರ ಅಜರಾಮವಾದ ಕೀರ್ತಿಯನ್ನು ಶಿಖರಕ್ಕೇರಿಸಿವೆ. ನಾಡಿಗಾಗಿ ಅವರು ಮಾಡಿದ ಹೋರಾಟ ಮತ್ತು ಬಲಿದಾನವನ್ನು ನಾವೆಲ್ಲರೂ ಸ್ಮರಿಸಬೇಕು, ಚನ್ನಮ್ಮ ಅವರ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳೋಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಹಿರಿಯ ಪ್ರಾಧ್ಯಾಪಕರಾದ ಡಾ. ಹುಲಿಗೆಮ್ಮ, ಶ್ರೀ ಮತಿ ನಾಗರತ್ನ ತಮ್ಮಿನಾಳ ಶ್ರೀ ವಿಠೋಬ, ಡಾ. ಮಲ್ಲಿಕಾರ್ಜುನ, ಡಾ. ಪ್ರದೀಪ್ ಕುಮರು, ಡಾ. ನರಸಿಂಹ, ಶುಭ, ಸುಮಿತ್ರಾ, ಸುಮಯ್ಯ, ಅಲ್ಲಾಭಕ್ಷಿ, ಹನುಮಂತಪ್ಪ ಮೇಟಿ, ನಿಂಗಜ್ಜ ಸೋಂಪುರ, ಕಲ್ಲಯ್ಯ ಪೂಜಾರ್, ಶ್ರೀ ಕಾಂತ್, ಮೆಹಬೂಬ್, ತಾರಮ್ಮ, ಲಕ್ಷ್ಮಿ ಹಾಗೂ ಕಾಲೇಜಿನ ಎಲ್ಲಾ ಅತಿಥಿ ಉಪನ್ಯಾಸಕರು, ಭೋಧಕ, ಭೋದಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಂಸ್ಕೃತಿ ಘಟಕದ ಸಂಚಾಲಕರಾದ ಡಾ. ಹುಲಿಗೆಮ್ಮ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!