ಬಳ್ಳಾರಿ / ಕಂಪ್ಲಿ : ಕನ್ನಡ ಉಳಿವಿಗೆ ಹಾಗೂ ಏಳಿಗೆಗೆ ಕಂಕಣ ಬದ್ಧವಾಗಿ ಶ್ರಮಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಕರವೇ ತಾಲೂಕು ಅಧ್ಯಕ್ಷ ಸಿ.ಡಿ. ರಾಜಶೇಖರ ಅಭಿಪ್ರಾಯ ಪಟ್ಟರು.
ಪಟ್ಟಣದ ಅಂಬೇಡ್ಕರ್ ವೃತ್ತದ ಉಪ ನೋಂದಣಾಧಿಕಾರಿಗಳ ಕಛೇರಿ ಮುಂಭಾಗದ ಡಾ.ರಾಜಕುಮಾರ ರಸ್ತೆ ಬಳಿಯಲ್ಲಿ ಕರವೇ (ನಾರಾಯಣಗೌಡ ಬಣ) ತಾಲೂಕು ಘಟಕದಿಂದ ಶನಿವಾರ ಹಮ್ಮಿಕೊಂಡಿದ್ದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿ, ಪ್ರತಿಯೊಬ್ಬ ಕನ್ನಡಿಗನು ನಾಡು, ನುಡಿ ಬಗ್ಗೆ ಅಭಿಮಾನ ಹೊಂದಿದಾಗ ಮಾತ್ರ ಕನ್ನಡ ಭಾಷೆ ಉಳಿಯಲು ಸಾಧ್ಯ. ದೇಶದಲ್ಲಿ ಕರ್ನಾಟಕ ರಾಜ್ಯ ಹಲವು ವೈವಿಧ್ಯತೆಗಳ ತವರೂರಾಗಿದ್ದು. ಇಂತಹ ನಾಡಿನಲ್ಲಿ ಜನಸಿದ ನಾವುಗಳು ಧನ್ಯರಾಗಿದ್ದು. ಪರಭಾಷೆ ಮೋಹಕ್ಕೆ ಒಳಗಾಗದೆ ನಮ್ಮ ಭಾಷೆ ಉಳಿವಿಗೆ ಮುಂದಾಗಬೇಕು. ಕನ್ನಡ ನಾಡಿನಲ್ಲಿ ಕನ್ನಡ ಅಸ್ಮಿತೆ ಕಾಪಾಡಲು ಎಲ್ಲರೂ ಕಟಿ ಬದ್ಧರಾಗಬೇಕು ಎಲ್ಲಾ ಹಂತಗಳಲ್ಲಿ ಕನ್ನಡ ಭಾಷೆ ಬಳಕೆಯಾಗಬೇಕು. ಕನ್ನಡ ರಾಜ್ಯೋತ್ಸವ ಒಂದು ತಿಂಗಳಿಗೆ ಸೀಮಿತವಾಗದೆ ನಿತ್ಯೋತ್ಸವವಾಗಬೇಕು’ ಎಂದರು.
ಪುರಸಭೆ ಮುಖ್ಯಾಧಿಕಾರಿ ಬಿ. ಮಲ್ಲಿಕಾರ್ಜುನ ಧ್ವಜಾರೋಹಣ ನೆರವೇರಿಸಿದರು. ಸಮಾಜ ಸೇವಕಿ ಮಂಗಳಮುಖಿ ರಾಜಮ್ಮಗೆ ಸನ್ಮಾನಿಸಿ ಗೌರವಿಸಿದರು. ತದ ನಂತರ ಮೈಕಲ್ ಜಾಕ್ಸನ್ ಡ್ಯಾನ್ಸ್ ತರಬೇತಿ ಕೇಂದ್ರದ ಮಕ್ಕಳು ರಸ್ತೆಯಲ್ಲಿ ಕನ್ನಡ ಹಾಡುಗಳಿಗೆ ಹೆಜ್ಜೆ ಹಾಕಿದರ. ತದನಂತರ ಡ್ಯಾನ್ಸ್ ವಿದ್ಯಾರ್ಥಿಗಳಿಗೆ ಗೌರವ ನೃತ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ್ಯಾಲಿ ನಡೆಸಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್, ಸದಸ್ಯ ಎನ್. ರಾಮಾಂಜನೇಯಲು, ಸಹಕಾರ ಸಂಘದ ನಿರ್ದೇಶಕ ವಿ.ಬಿ.ನಾಗರಾಜ, ತಾಲೂಕು ಉಪಾಧ್ಯಕ್ಷರಾದ ಬಳ್ಳಾಪುರ ಮೌನೇಶ, ರವಿಶಂಕರ್, ಪ್ರಧಾನ ಕಾರ್ಯದರ್ಶಿ ಪಿ.ಶಂಭುಲಿಂಗ, ಖಜಾಂಚಿ ಪ್ರಕಾಶ ಶೇಟ್, ಸಂಘಟನಾ ಕಾರ್ಯದರ್ಶಿ ದೊಡ್ಡಮನೆ ಗಣೇಶ, ಕಾರ್ಯದರ್ಶಿ ಹರೀಶ್, ನಗರ ಘಟಕ ಅಧ್ಯಕ್ಷ ಜಂಗಲಿ ನಾಗರಾಜ, ತಾಲೂಕು ಯುವ ಘಟಕ ಅಧ್ಯಕ್ಷ ರಾಘವೇಂದ್ರ, ವಿದ್ಯಾರ್ಥಿ ಘಟಕ ಅಧ್ಯಕ್ಷ ಎಂ.ಎಸ್.ಮುನ್ನಾ, ಮುಖಂಡರಾದ ಬಿ.ನಾರಾಯಣಪ್ಪ, ಗಾದಿಲಿಂಗಪ್ಪ, ಎಂ.ರಂಜೀತ್, ಹೂಗಾರ ಗಣೇಶ, ಮಣ್ಣೂರು ವಿರೇಶ, ಮುದ್ದಾಪುರ ಹೆಚ್.ಉಮೇಶ, ಫ್ಯಾಕ್ಟಿ ಶೇಖರ ಸೇರಿದಂತೆ ಪದಾಧಿಕಾರಿಗಳು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















