
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪಿ ಎಂ ಶ್ರೀ ಸರಕಾರಿ ಶಾಲೆಯ ಆವರಣದಲ್ಲಿ ಇಂದು 70 ನೇ ಕನ್ನಡ ರಾಜ್ಯೋತ್ಸವ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಆಯೋಜಿಸಲಾಗಿತ್ತು, ಹನೂರು ವಿಧಾನ ಸಭಾ ಕ್ಷೇತ್ರದ ಶಾಸಕರು ಎಂ ಆರ್ ಮಂಜುನಾಥ್ ಧ್ವಜಾರೋಹಣ ನೆರವೇರಿಸಿದರು. ನಂತರ ನಾಡ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು.
ನಂತರ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿವಿಧ ಖಾಸಗಿ ಹಾಗೂ ಸರ್ಕಾರಿ ಶಾಲೆಯ ಮಕ್ಕಳಿಗೆ ಸನ್ಮಾನ ಮಾಡಿದರು. ನಂತರ ಶಾಸಕರು ಮಾತನಾಡಿ ಆತ್ಮೀಯರೇ, ಈ ನವೆಂಬರ್ ೧ ರಂದು ನಾವು ಹೆಮ್ಮೆಯಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. 1956 ರಲ್ಲಿ ನಮ್ಮ ಮೈಸೂರು ರಾಜ್ಯವನ್ನು (ಈಗಿನ ಕರ್ನಾಟಕ) ಸ್ಥಾಪನೆ ಮಾಡಿ, ಎಲ್ಲಾ ಕನ್ನಡಿಗರನ್ನು ಒಟ್ಟಿಗೆ ಸೇರಿಸುವ ಈ ದಿನ ನಮ್ಮ ಕನ್ನಡ ನಾಡಿನ ಒಂದು ಮಹತ್ವದ ಸಂಭ್ರಮವಾಗಿದೆ.ನಾವು ಕನ್ನಡ ನಾಡಿನ ಪರಂಪರೆ, ಸಾಹಿತ್ಯ, ಸಂಸ್ಕೃತಿ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ ನಡೆದ ಸಾಧನೆಗಳನ್ನು ನೆನಪಿಸಿಕೊಳ್ಳಬೇಕು. ಕನ್ನಡ ನಮ್ಮ ತಾಯಿ ನುಡಿ, ನಮ್ಮ ಹೆಮ್ಮೆ. ನಾವು ಕನ್ನಡ ಭಾಷೆಯನ್ನು ಉಳಿಸಿ, ಪ್ರೀತಿಸಿ, ಮುಂದಿನ ಪೀಳಿಗೆಗೆ ಬಲವಾಗಿ ಬಿತ್ತುವ ಹೊಣೆಗಾರಿಕೆಯನ್ನು ತೆಗೆದುಕೊಳ್ಳೋಣ. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹೃದಯ ತುಂಬಿ ಶುಭಾಶಯಗಳನ್ನು ತಿಳಿಸುತ್ತೇನೆ. ನಾವು ಕೇವಲ ನವೆಂಬರ್ ತಿಂಗಳು ಕನ್ನಡಿಗರಾಗಿ ಮಾತ್ರವಲ್ಲದೆ, 365 ದಿನಗಳಲ್ಲೂ ಕನ್ನಡ ಭಾಷೆಯ ಪ್ರಚಾರ, ಸಂಸ್ಕೃತಿಯನ್ನು ಉಳಿಸುವ ಜವಾಬ್ದಾರಿಗಳನ್ನೂ ಎತ್ತಿ ನಿಲ್ಲೋಣ ಎಂದರು. ಇದಕ್ಕಿಂತ ಮೊದಲು ಮುಖ್ಯ ಭಾಷಣಕಾರರು ತಮ್ಮ ಭಾಷಣ ಶೈಲಿಯಿಂದ ಭಾಷಣ ಮಾಡಿ ಶಾಲಾ ಮಕ್ಕಳು ಹಾಗೂ ನೆರೆದಿದ್ದಂತಹ ಜನರ ಮನಸನ್ನು ಗೆಲ್ಲುವಲ್ಲಿ ಯಶಸ್ವಿಯಾದರು.
ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಹಾಗೂ ನೆರೆದಂತ ನಾಗರಿಕರಿಗೆ ಸಿಹಿ ಹಂಚಿ ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆ ಮಾಡಲಾಯಿತು.
ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಮುಮ್ತಾಜ್ ಬಾನು, ಪಟ್ಟಣ ಪಂಚಾಯತ್ ಉಪಾಧ್ಯಕ್ಷರಾದ ಆನಂದ್ ಕುಮಾರ್,ಪಟ್ಟಣ ಪಂಚಾಯತಿ ಸದಸ್ಯರುಗಳಾದ ಮಹೇಶ್, ಗಿರೀಶ್, ಸಂಪತ್, ಮಹದೇಶ್, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಮಂಜೇಶ್ ಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್, ಮುಖ್ಯ ಭಾಷಣಕಾರರು ಗೋಪಿನಾಥಮ್ ಪ್ರೌಢಶಾಲಾ ಶಿಕ್ಷಕರ ಮಹೇಂದ್ರ ಪಾಟೀಲ್, ಕನ್ನಡಪರ ಸಂಘಟನೆಯ ಶಾಗ್ಯ ವಿನೋದ್ ಹಾಗೂ ರಾಹಿಲ್ ಬೇಗ್ ಇನ್ನಿತರರು ಇದ್ದರು.
ವರದಿ ಉಸ್ಮಾನ್ ಖಾನ್



















