ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಬ್ಬು ಬೆಳೆಗೆ ರಾಜ್ಯಾದ್ಯಂತ ಏಕರೂಪದ ಬೆಲೆ ನಿಗದಿಗೊಳಿಸಲು ಒತ್ತಾಯಿಸಿ ರೈತರಿಂದ ಪ್ರತಿಭಟನೆ

ಪ್ರತಿ ಟನ್‌ಗೆ 3500ರೂ ಬೆಲೆ ನಿಗಧಿಗೊಳಿಸಿ : ಸರ್ಕಾರಕ್ಕೆ ರೈತರಿಂದ 5 ದಿನಗಳ ಗಡುವು

ಬಾಗಲಕೋಟೆ/ ಹುನಗುಂದ: ರಾಜ್ಯದ ರೈತರು ಬೆಳೆದ ಕಬ್ಬು ಸರ್ಕಾರ 3,500 ರೂ ಬೆಲೆ ನಿಗಧಿಗೊಳಿಸಿ ತಕ್ಷಣವೇ ಅದೇಶ ಹೊರಡಿಸುವಂತೆ ಒತ್ತಾಯಿಸಿ ಹುನಗುಂದ ಹಾಗೂ ಇಲಕಲ್ಲ ತಾಲೂಕಗಳ ಕಬ್ಬು ಬೆಳೆಗಾರರು ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯಿಂದ ಮಂಗಳವಾರ ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮುಖಂಡ ಮಲ್ಲಣ್ಣ ತುಂಬದ ಮಾತನಾಡಿ, ಮಹಾರಾಷ್ಟ್ರ ಮತ್ತು ಸರ್ಕಾರಗಳು ಅಲ್ಲಿನ ಕಬ್ಬು ಬೆಳೆಗಾರರಿಗೆ 3,500 ರೂ ರಾಜ್ಯ 3,000 ರೂ ಹೀಗೆ ಒಂದೊಂದು ತರಹದ ಬೆಲೆ ಮಾಡಿ ಕಟ್ಟುಗಳನ್ನು ಖರೀದಿಸಿ ರೈತರಿಗೆ ಏಕರೂಪದ ಬೆಲೆ ನಿಗಧಿಗೊಳಿಸಿ ಅಲ್ಲಿನ ರೈತರಿಗೆ ಅನುಕೂಲ ಮಾಡಿದೆ. ಆದರೆ ಕರ್ನಾಟಕ ರಾಜ್ಯದಲ್ಲಿ ಒಂದು ಕಾರ್ಖಾನೆಯಲ್ಲಿ 200 ರೂ. ಇನ್ನೊಂದು ಫ್ಯಾಕ್ಟರಿಯಲ್ಲಿ 2900 ರೂ, ಮತ್ತೊಂದು ಫ್ಯಾಕ್ಟರಿಯಲ್ಲಿ ಮಾಡಲಾಗುತ್ತಿದೆ. ಸರ್ಕಾರ ರೈತರ ಹಿತಕಿಂತ ಕಾರ್ಖಾನೆ ಮಾಲೀಕರ ಹಿತ ಕಾಪಾಡುವ ಕೆಲಸ ಮಾಡುತ್ತಿದೆ ಎಂದು ಆರೋಪಿದರು. ಕಾರ್ಜಾನೆಯ ಮಾಲಿಕ ಕಬ್ಬಿನಿಂದ ಸಕ್ಕರೆ, ಬೆಲ್ಲ, ಎಥೆನಾಲ್, ವಿದ್ಯುತ್ ಸೇರಿದಂತೆ ಅನೇಕ ಅನ್ಯಾಯ ಮೂಲಗಳಿಂದ ಲಾಭ ಗಳಿಸುತ್ತಿದ್ದರೂ ಕೂಡಾ ಕಾರ್ಖಾನೆ ಮಾಲೀಕರು ಮಾತ್ರ ಸರ್ಕಾರ ಮುಂದೆ ಕಾರ್ಖಾನೆ ನಷ್ಟವನ್ನು ತೋರಿಸುವ ಮೂಲಕ ಕಬ್ಬು ಬೆಳೆಗಾರರಿಗೆ ಅನ್ಯಾಯ ಮಾಡುತ್ತಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ದಿನಗಳೊಳಗೆ ಕಬ್ಬಿಗೆ ರಾಜ್ಯಾದ್ಯಂತ 3,500 ರೂ ಏಕರೂಪದ ಬೆಲೆ ನಿಗಧಿಗೊಳಿಸಬೇಕು. ನಿಗಧಿಗೊಳಿಸಿದ್ದಿದ್ದರೆ ಹುನಗುಂದ ಇಳಕಲ್ ತಾಲೂಕಿನ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಿ ಉಗ್ರವಾದ ಪ್ರತಿಭಟನೆಯನ್ನು ಕೈಕೊಳ್ಳಲಾಗುವುದೆಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಶ್ರೀಕೃಷ್ಣ ಜಾಲಿಹಾಳ ಮಾತನಾಡಿ ಸದಾಶಿವ ಸಕ್ಕರೆ ಕಾರ್ಖಾನೆಯಲ್ಲಿ ಒಂದು ತರಹ ಬೆಲೆ ಇದ್ದರೆ, ಯರಗಲ್ಲದ ಬಾಲಾಜಿ ಫ್ಯಾಕ್ಟರಿ ಇನ್ನೊಂದು ತರ ಬೆಲೆ ನಿಗಧಿಗೊಳಿಸಿ ಕಳೆದ ನಾಲ್ಕೈದು ವರ್ಷಗಳಿಂದ ಕಡಿಮೆ ದರದಲ್ಲಿ ರೈತರ ಕಬ್ಬು ಖರೀದಿಸಿ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿದ್ದಾರೆ. ಕಾರ್ಖಾನೆಗಳ ಈ ನೀತಿಯನ್ನು ವಿರೋಧಿಸಿ ಈಗಾಗಲೇ ಬಾಗಲಕೋಟೆ, ವಿಜಯಪುರ, ಬೆಳಗಾವಿ ರೈತರು ಹೆದ್ದಾರಿ ತಡೆದು ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದಾರೆ. ಕಬ್ಬಿನಿಂದ 9 ರೀತಿ ಉತ್ಪನ್ನಗಳನ್ನು ಸಿದ್ಧಗೊಳಿಸಬಹುದು. ಉತ್ಪಾದಿಸಿದ ವಸ್ತುಗಳನ್ನು ಕೇಂದ್ರ ಸರ್ಕಾರ ಕಾರ್ಖಾನೆಗಳ ಮೂಲಕವೇ ಖರೀದಿಸುವ ಕಾರ್ಯ ಮಾಡುತ್ತಿದೆ. ಆದರೆ ಕಾರ್ಖಾನೆ ಮಾಲೀಕರಿಗೆ ಲಾಭವಿದ್ದರೂ ಕೂಡಾ ರೈತರಿಗೆ ಅನ್ಯಾಯ ಮಾಡುವಂತಹ ಕೆಲಸ ನಡೆಯುತ್ತಿದೆ. ಅದರ ಜೊತೆಗೆ ದೀಪಾವಳಿ ಪಾಡ್ಯದ ಮರುದಿನ ಕಬ್ಬು ಕಟಾವು ಕಾರ್ಯ ಆಗಬೇಕಿತ್ತು. ಸದ್ಯ 15 ದಿನಗಳ ವಿಳಂಬವಾಗಿದ್ದರಿಂದ ಕಬ್ಬಿನ ತೂಕ ಕಡಿಮೆಯಾಗುತ್ತಿದ್ದು, ತಕ್ಷಣವೇ ಸಕ್ಕರೆ ಸಚಿವರಾದಂತಹ ಶಿವಾನಂದ ಪಾಟೀಲರು ಕಬ್ಬು ಬೆಲೆ ಬೆಳೆಗಾರರ ಪ್ರತಿಭಟನಾ ಸ್ಥಳಕ್ಕೆ ಹೋಗಿ ಅವರ ಸಮಸ್ಯೆ ನಿಗಧಿಗೊಳಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ರೈತ ಮುಖಂಡರಾದ ಪಾಪನಗೌಡ ಬಾಲರೆಡ್ಡಿ, ಪರಶುರಾಮ, ರತ್ನಾಕರ, ಸೋಮಶೇಖರಗೌಡ ಸಂಗಯ್ಯ ಹಿರೇಮಠ, ಮಹಾಂತೇಶ ಪರೂತಿ ಬಸಯ್ಯ ಹಿರೇಮಠ, ಮಲ್ಲಿಕಾರ್ಜುನಗೌಡ ಪಾಟೀಲ ಸೇರಿದಂತೆ ಅನೇಕರು ಇದ್ದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!