
ಕ್
ಬೆಂಗಳೂರು: ಇದೇ ದಿನಾಂಕ 8-11-2025 ಶನಿವಾರ ಇಳಿಹೊತ್ತು 4 ಘಂಟೆಯಿಂದ ಬೆಂಗಳೂರಿನ ಆನಂದ ರಾವ್ ವೃತ್ತದ ಬಳಿಯಿರುವ ಕ. ವಿ. ಪ್ರ. ನಿ. ನಿ ಲೆಕ್ಕಾಧಿಕಾರಿಗಳ ಸಂಘದ ಬೆಳ್ಳಿ ಭವನದಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ, ಹುಕ್ಲಮಕ್ಕಿಯ ಶ್ರೀ ಸಿದ್ಧಿವಿನಾಯಕ ದುರ್ಗಾಂಬಾ ಯಕ್ಷಗಾನ ಮಿತ್ರ ಮಂಡಳಿಯವರ ಅಪರೂಪದ ಶಬರಾರ್ಜುನ ಯಕ್ಷಗಾನ ಪೌರಾಣಿಕ ಪ್ರಸಂಗವನ್ನು ಡಾಕ್ಟರ್ ಶ್ರೀಪಾದ ಹೆಗಡೆಯವರ ನೇತೃತ್ವದಲ್ಲಿ ಆಯೋಜಿಸಿದೆ.
ಸಂಪರ್ಕ, ಸಕಲ ಸೌಲಭ್ಯಗಳಿಂದ ದೂರದಲ್ಲಿರುವ ಗುಡ್ಡ ಬೆಟ್ಟಗಳ ನಡುವೆ ಸ್ಥಾಪಿತವಾಗಿ ಶತಮಾನೋತ್ಸವ ಆಚರಿಸುತ್ತಿರುವ, ಕನ್ನಡ ನಾಡು-ನುಡಿಗೆ ಸೇವೆ ನೀಡುತ್ತಿರುವ ಈ ಮೇಳದ ಪ್ರದರ್ಶನ ಕನ್ನಡ ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಬಹಳ ಪ್ರಸ್ತುತವಾಗಿದೆ.
ಎಲ್ಲರಿಗೂ ಆದರದ ಆಮಂತ್ರಣ ಎಂದು ಭವನದ ಕಾರ್ಯಕ್ರಮ ಆಯೋಜಕ ಶ್ರೀ ವಿಶ್ವೇಶ್ವರ ಗಾಯತ್ರಿ ಅವರು ವಿನಂತಿಸಿದ್ದು ಉಚಿತ ಪ್ರವೇಶವಿದೆಯೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಪರ್ಕ 9986596691.
ವರದಿ ಕೊಡಕ್ಕಲ್ ಶಿವಪ್ರಸಾದ್



















