ಅವರು ಕನಕ ತ್ಯಜಿಸಿ
ಕನಕದಾಸರಾದರು
ನಾವು ಕನಕ ಮೋಹಿಸಿ
“ಕನಕ” ದಾಸರಾದೆವು
ಅವರು ಕುಲ ಕುಲವೆಂದು ಬಡಿದಾಡಬೇಡಿರಿ ಹುಚ್ವಪ್ಪಗಳಿರಾ…ಎಂದರು
ನಾವು ಕುಲ ಕುಲವೆಂದು
ನಿತ್ಯ ಬಡಿದಾಡುವ ಹುಚ್ವಪ್ಪಗಳಾದೆವು
ಅವರು ಯುದ್ಧ ತ್ಯಜಿಸಿ
ಶಾಂತಿ ಸೌಹಾರ್ದತೆಯ ದಾಸರಾದರು
ನಾವು ನಿತ್ಯ ಅಂತರಂಗ, ಬಹಿರಂಗಗಳ
ಯುದ್ಧ ಮಾಡುತ ಅಶಾಂತರಾದೆವು
ಅವರು ಗುಡಿ ಗುಂಡಾರ ಕಟ್ಟದೆ ನಿಜ ಭಕ್ತಿಯಿಂದ ದೇವರನ್ನೇ ತನ್ನ ದಿಕ್ಕಿಗೆ ತಿರುಗಿಸಿದರು
ನಾವು ಪಾಪಗಳನ್ನು ಮಾಡತ್ತಾ
ಗುಡಿ ಗುಂಡಾರಗಳಿಗೆ ನಿತ್ಯ ತಿರುಗುವ ದಿಕ್ಕೇಡಿಗಳಾದೆವು.
- ಡಾ. ಶಿವಕುಮಾರ್ ಮಾಲಿಪಾಟೀಲ
ದಂತ ವೈದ್ಯರು , ಗಂಗಾವತಿ. ಜಿ. ಕೊಪ್ಪಳ.




















