ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶ್ರೀ ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ

ಚಾಮರಾಜನಗರ ಜಿಲ್ಲೆಯ ಹನೂರು
ತಾಲೂಕಿನ ಹುತ್ತೂರು ಗ್ರಾಮಕ್ಕೆಸುಮಾರು 5 ಕಿಲೋ ಮಿಟರ್ ಬೈಕ್ ರ್ಯಾಲಿಯ ಮುಖಾಂತರ ತೆರಳಿ ಶ್ರೀ ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣಗೊಳಿಸಿ ನಂತರ ವೇದಿಕೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಶಾಸಕರು,
ನಾವು ಹನೂರು ತಾಲೂಕು ಕೇಂದ್ರದಲ್ಲಿ ಅದ್ದೂರಿಯಾಗಿ ಮಾಡಬೇಕು ಎಂದುಕೊಂಡಿದ್ದ ವಾಲ್ಮೀಕಿ ಜಯಂತಿಯನ್ನು ತಾವು ಹುತ್ತೂರು ಗ್ರಾಮದಲ್ಲಿ ಬಹಳ ಅರ್ಥ ಪೂರ್ಣವಾಗಿ ಅದ್ದೂರಿಯಾಗಿ ಆಚರಣೆ ಮಾಡಿದ್ದೀರಿ, ಮಹರ್ಷಿ ವಾಲ್ಮೀಕಿಯವರು ಬರೆದಿರುವ ರಾಮಾಯಣವನ್ನು ನಾವೆಲ್ಲರೂ ಓದಬೇಕು ಅದರಲ್ಲಿರುವ ಪ್ರತಿಯೊಂದು ವಿಚಾರಗಳನ್ನು ತಿಳಿದುಕೊಳ್ಳಬೇಕು.

ಮುಂದಿನ ಪೀಳಿಗೆಯೂ ರಾಮಾಯಣವನ್ನು ಅರ್ಥ ಮಾಡಿಕೊಂಡು ಅದರಂತೆಯೇ ಜೀವನ ಸಾಗಿಸಬೇಕು ಮಕ್ಕಳಿಗೆ ಯಾಕೆ ಶಿಕ್ಷಣ ನೀಡಬೇಕು ಎಂದರು. ನಂತರ ಮಾತನಾಡಿದ ಅವರು ಬದುಕಿಗಾಗಿ ನಾವು ಉತ್ತಮ ಶಿಕ್ಷಣ ಪಡೆದುಕೊಳ್ಳಬೇಕು, ಮಹದೇಶ್ವರರು ನಡೆದು ಹೋಗಿರುವ ಜಾಗಕ್ಕೆ ಸ್ವಾಮೀಜಿಗಳು ಬಂದಿದ್ದಾರೆ ಅದು ನಮ್ಮ ಪುಣ್ಯ ಸ್ವಾಮೀಜಿಗಳ ಮಾರ್ಗದರ್ಶನ ನಮಗೆ ತುಂಬಾ ಮುಖ್ಯ ಅವರು ತೋರಿದ ಮಾರ್ಗದಲ್ಲಿ ನಾವು ಸಾಗೋಣ ಎಂದು ಹೇಳಿದರು.

ನಾಯಕ ಸಮಾಜದ ಬೇಡಿಕೆಯಾದ ಹನೂರು ಪಟ್ಟಣದಲ್ಲಿ ಸಮುದಾಯ ಭವನ ನಿರ್ಮಾಣ ಹಾಗೂ ಧಾರ್ಮಿಕ ಶೈಕ್ಷಣಿಕ ಕೇಂದ್ರವನ್ನಾಗಿ ಮಾಡಲು ಐದು ಎಕರೆ ಜಾಗ ಕೇಳುತ್ತಿದ್ದೀರಿ ಜಾಗ ಗುರುತಿಸಲಾಗಿದೆ ಸಂಕ್ರಾಂತಿ ಬರುವ ಒಳಗಡೆ ನಿಮ್ಮ ಸಮುದಾಯಕ್ಕೆ ಜಾಗ ನೀಡುತ್ತೇನೆ ಹಾಗೂ ಹುತ್ತೂರು ಗ್ರಾಮದಲ್ಲಿ ವಿಶೇಷ ಅನುದಾನದಲ್ಲಿ 25 ಲಕ್ಷ ರೂಪಾಯಿ ವೆಚ್ಚದಲ್ಲಿ ಭವನ ನಿರ್ಮಾಣ ಮಾಡಲು ಬದ್ಧನಿದ್ದೇನೆ ತಾವು ನನಗೆ ನೀಡಿರುವ ಅವಕಾಶವನ್ನು ನಾನು ಸಮರ್ಥವಾಗಿ ನಿಭಾಯಿಸುತ್ತೇನೆ ಮುಂದಿನ ದಿನಗಳಲ್ಲಿ ಈ ಭಾಗದ ಹಾಡಿಗಳ ರಸ್ತೆ ಸುಮಾರು 20 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಯಾಗಲಿದೆ ಎಂದರು.

ಇದೇ ಸಮಯದಲ್ಲಿ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ವಾಲ್ಮೀಕಿ ಜನಾಂಗದ ಅಧ್ಯಕ್ಷರಾದ ರಾಮಚಂದ್ರ, ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ದತ್ತೆಶ್, ಶ್ರೀನಿವಾಸ್ ನಾಯಕರು, ಮಾಜಿ ಚುಡಾ ಅಧ್ಯಕ್ಷರಾದ ಸುಂದರಣ್ಣ, ಬಿಜೆಪಿ ಯುವ ಮುಖಂಡರಾದ ನಿಶಾಂತ್, ಜೈ ಸುಂದರ, ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷರಾದ ಚಂದ್ರು, ಲೆಕ್ಕ ಪತ್ರ ಇಲಾಖೆಯ ಜಂಟಿ ನಿರ್ದೇಶಕರಾದ ಮಹದೇವನಾಯಕ, ಚಾಮರಾಜನಗರದ ಜಿಲ್ಲಾ ವೈದ್ಯಧಿಕಾರಿ ಡಾ. ಸೋಮಣ್ಣ, ಶ್ರೀನಿವಾಸ್,ಬೆಲ್ತೂರು ಲಿಂಗರಾಜು, ಬೈಲೂರು ಗ್ರಾಂ. ಪಂ. ಅಧ್ಯಕ್ಷರಾದ ಸದಾನಂದ ಮೂರ್ತಿ, ಪಿಜಿ ಪಾಳ್ಯ ಗ್ರಾಮ ಪಂ. ಸದಸ್ಯರುಗಳಾದ ಮಹದೇವಸ್ವಾಮಿ, ಜಿ. ಎಂ ಮಾದೇಶ್,ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಮಂಜೇಶ್ ಗೌಡ, ಹಾಗೂ ಸಮುದಾಯದ ಮುಖಂಡರುಗಳು ಇದ್ದರು.

ವರದಿ :ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!