“ಯಾರು ಹೋಗುತ್ತೀರಿ ಸ್ವರ್ಗಕ್ಕೆ “
ಕೇಳಿದರು ಗುರುಗಳು ಶಿಷ್ಯ ಗಣಕ್ಕೆ,
ಶಿಷ್ಯ ರೆಲ್ಲರೂ ನೋಡಿಕೊಂಡರು,
ತಮ್ಮ ತಮ್ಮ ಮುಖಾರವಿಂದ,
ಎಲ್ಲರಿಗೂ ತಮ್ಮೊಳಗೇ ಅನುಮಾನ,
” ನೀ ಏನಂತಿಯೋ ಕನಕ”
ಅಂದರು, ಗುರುವರ್ಯರು,
” ನಾ ಹೋದರೆ ಹೋದೇನು”
ಅಂದರು ಕನಕ ದಾಸರು,
ಅಂದರಾಗ ಉಳಿದ ಶಿಷ್ಯರು,
ಕನಕನಿಗೆ ಕೊಬ್ಬು ಅತಿಯಾಯಿತು ಅದಕ್ಕೇ
ಹೀಗೆಲ್ಲ ಆಡತಾನೆ,
ಕನಕನನ್ನು ನೋಡಿ
ಅಪಹಾಸ್ಯ ಮಾಡಿ,
ಮಾತನಾಡಿದರು ದಾಸರನೇಕರು,
ಗುರುಗಳಿಗೆ ಮಾತ್ರ ಗೊತ್ತಾಯಿತು ಅವರಾಗ,
“ಭಲೇ ಕನಕ” ಎಂದು ಬೆನ್ನು
ತಟ್ಟಿದರು, ಅವರೇ ಮಾತಿನ
ಮರ್ಮವನು
ಬಹಿರಂಗ ಪಡಿಸಿದರು,
ಶಿಷ್ಯ ಗಣವೆಲ್ಲಾ
ತಗ್ಗಿಸಿತು ತಲೆಯ,
ತಿಳಿದರು ಕನಕನ ಮಾತಿನ
ಅಂತರಾರ್ಥ, ಬಿಡಬೇಕು
ನಾನು ಎಂಬ ಅಹಂಕಾರ,
ಆದೀತು ಆಗ
ಭಗವಂತನ ಸಾಕ್ಷಾತ್ಕಾರ.
ಸಾರಿದರು ಕನಕದಾಸರು
ಲೋಕಕ್ಕೆ ಈ ಮಾತಿನ ಸಾರ,
ಇವರಾದರು
ವ್ಯಾಸರಾಯರ ಶಿಷ್ಯರು,
ಇವರೇ ನಮ್ಮ ದಾಸ ಶ್ರೇಷ್ಠ
ಕನಕದಾಸರು.
- ಶಿವಪ್ರಸಾದ್ ಹಾದಿಮನಿ. ✍️
ಕೊಪ್ಪಳ.
ಮೊಬೈಲ್. 7996790189.




















