ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ದಡ ಸೇರದ ನೌಕೆ

(ಪ್ರೇಮಿಗಳ ಮನ ಮಿಡಿಯುವ ದುರಂತ ಪ್ರೇಮ ಕಥೆ )
— ಜಿ ಎಲ್ ನಾಗೇಶ್

ಇತ್ತಿಚಿನ ದಿನಗಳಲ್ಲಿ ಮರ್ಯಾದೆ ಹತ್ಯೆಯ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಮನಿಸಿ,
‘ಒಬ್ಬನಿದ್ದನು ರಾಜ!
ಒಬ್ಬಳಿದ್ದಳು ರಾಣಿ!
ರಾಜನ ಜಾತಿ ಬೇರೆಯಾಗಿತ್ತು .
ರಾಣಿಯ ಜಾತಿ ಬೇರೆಯಾಗಿತ್ತು.
ಅವರಿಬ್ಬರ ಜಾತಿ-ಧರ್ಮ ಬೇರೆ ಬೇರೆಯಾಗಿತ್ತು!
ಕಥೆ ಮುಗಿದಿತ್ತು!!’ ಎಂಬ ವಿಷಯವನ್ನು ಆಧರಿಸಿ ಒಂದು ದುರಂತ ಪ್ರೇಮಕಥೆಯನ್ನು ಬರೆದಿದ್ದೇನೆ, ಇದನ್ನು ಒಂದು ಸಲ ಓದಿ.

ಪ್ರೀತಿ ಇಲ್ಲದ ಜಗತ್ತಿಲ್ಲ!
ಪ್ರೀತಿಗಿಂತಲೂ ಮಿಗಿಲಾಗಿ ಬೇರೊಂದಿಲ್ಲ!
ಪ್ರೀತಿಯೇ ದೇವರು…
ಕೆಲವರು ಯಾಕೆ ಈ ಪ್ರೀತಿ ಎಂಬ ದೇವರನ್ನು ದ್ವೇಷಿಸುತ್ತಾರೆ!?
ಅಂಜಲಿ ಮತ್ತು ಅಮೀರ್ ಅವರಿಬ್ಬರು ಕಾಲೇಜಿನ ವಿದ್ಯಾರ್ಥಿಗಳು. ಇಬ್ಬರದ್ದೂ ಬೇರೆ ಬೇರೆ ಜಾತಿ-ಧರ್ಮ, ಆದರೇನಂತೆ, ಅವರಿಬರ ಹೃದಯಗಳು ಒಂದಾಗಿದ್ದವು. ಅವರ ಪ್ರೀತಿ ಪ್ರಕೃತಿಯ ಹಾಗೆ ಶುದ್ಧವಾಗಿ, ನಿಸರ್ಗದ ಹಾಗೆ ಆಳವಾಗಿತ್ತು. ಆದರೆ, ಅವರ ಪ್ರೇಮದ ವಿಷಯವು ಎರಡು ಕುಟುಂಬದವರಿಗೆ ಗೊತ್ತಾಗಿದ್ದಾಗ, ಅದು ದೊಡ್ಡ ಬಿರುಗಾಳಿಯನ್ನು ಸೃಷ್ಟಿಸಿತು.
ಅಂಜಲಿ ತಮ್ಮ ಧರ್ಮದ ನಿಯಮಗಳನ್ನು ಮೀರಿ ಬೇರೆ ಜಾತಿ-ಧರ್ಮಕ್ಕೆ ಸೇರಿದ ಹುಡುಗನನ್ನು ಪ್ರೀತಿಸಿದ್ದು, ಕುಟುಂಬದಲ್ಲಿ ದೊಡ್ಡ ಸಮಸ್ಯೆಯಾಯಿತು.
ಅಂಜಲಿಯ ತಂದೆ ರಾಮಭದ್ರಾಚಾರ್ಯ-
“ನಿಮ್ಮ ಈ ಪ್ರೇಮ ನಮ್ಮ ಕುಟುಂಬ ಮತ್ತು ಸಮಾಜದ ಮರ್ಯಾದೆಗೆ ಧಕ್ಕೆ ತರುತ್ತದೆ'”ಎಂದು ಅದೇನೇನೋ ಹೇಳಿದರು. ಅದೇ ಸಮಯದಲ್ಲಿ, ಅಮೀರ್ ಕುಟುಂಬದವರು ಸಹ-
“ನಮ್ಮ ಧರ್ಮದ ಘನತೆಯನ್ನು ಬೇರೆ ಜಾತಿ-ಧರ್ಮಕ್ಕೆ ಸೇರಿಸಲು ಸಾಧ್ಯವಿಲ್ಲ’ ಎಂದು ಒತ್ತಡ ಹೇರಿದರು.
ಆದರೂ, ಅಂಜಲಿ ಮತ್ತು ಅಮೀರ್ ತಮ್ಮ ಪ್ರೀತಿಯನ್ನು ಬಿಡಲು ತಯಾರಿರಲಿಲ್ಲ. ಅವರು ರಹಸ್ಯವಾಗಿ ಭೇಟಿಯಾಗುತ್ತಿದ್ದರು.
ಆ ದಿನ ಅಂಜಲಿ-
“ನನ್ನ ಭಯ ಆಗ್ತಿದೆ ಅಮೀರ್.”
“ಭಯ ಯಾಕೆ ಅಂಜಲಿ?”
“ನಮ್ಮ ಮನೆಯವರು ನನ್ನ ತಾಯಿಯ ತಮ್ಮನ ಜೊತೆಗೆ ನನ್ನ ಮದುವೆ ಮಾಡಿ ಮುಗಿಸಲು ತಯಾರಿ ಮಾಡಿಕೊಂಡಿದ್ದಾರೆ. ನಿನ್ನ ಬಿಟ್ಟು ನನಗೆ ಬದುಕಿರೋಕಾಗಲ್ಲ ಅಮೀರ್. ಈ ಕೊಳಕು ಸಮಾಜ, ಈ ದರಿದ್ರ ಜಾತಿ- ಧರ್ಮ ನಮ್ಮಿಬ್ಬರಿಗೂ ಒಂದುಗೂಡಿಸಿ ಬಾಳಲು ಬಿಡಲಾರದು ಅಮೀರ್” ಎಂದು ಹೇಳುತ್ತಾ ಅವನನ್ನು ಅಪ್ಪಿಕೊಂಡು ದುಃಖದಿಂದ ಅಳಲಾರಂಭಿಸಿದಳು ಅಂಜಲಿ.
“ಭಯ ಪಡಬೇಡ ಅಂಜಲಿ, ನಮ್ಮಿಬ್ಬರ ಪ್ರೀತಿ ಪವಿತ್ರವಾಗಿರುವಾಗ ಈ ಕೊಳಕು ಜಾತಿ ಧರ್ಮಗಳಿಂದೇಕೆ ನಮ್ಮಿಬ್ಬರನ್ನು ಬೇರ್ಪಡಿಸಲು ಆ ದೇವರಿಂದಲೂ ಸಾಧ್ಯ ಇಲ್ಲ ಅಂಜಲಿ. ನೀನು ಧೈರ್ಯವಾಗಿರು ” ಎಂದು ಅವಳಿಗೆ ಧೈರ್ಯ ಹೇಳಿದನು ಅಮೀರ್.
“ಈ ಪಾಪಿ ಪ್ರಪಂಚ ನಮ್ಮಿಬ್ಬರ ಪ್ರೀತಿ ಅಳಿಸಿ ಹೋಗುವಂತೆ ಸಂಚು ಮಾಡುತ್ತೆ. ಈ ಕೊಳಕು ಪಾಪಿ ಪ್ರಪಂಚದಿಂದ ನನ್ನನ್ನು ಬೇರೆ ಎಲ್ಲಿಗಾದರೂ ದೂರ ಕರೆದುಕೊಂಡು ಹೋಗು ಅಮೀರ್ “ಎಂದು ಹೇಳಿದಳು ಅಂಜಲಿ.
ಒಂದು ದಿನ ಪ್ರೇಮಿಗಳಿಬ್ಬರೂ ತಮ್ಮ ಮನೆ ಮಠ ಜಾತಿ ಧರ್ಮ ಎಲ್ಲವನ್ನೂ ತೊರೆದು ಎಲ್ಲಿಗಾದರೂ ದೂರ ಓಡಿ ಹೋಗಿ ಮದುವೆ ಮಾಡಿಕೊಂಡು ಸ್ವಚ್ಛಂದವಾಗಿ ಪ್ರೇಮಲೋಕದಲ್ಲಿ ವಿಹರಿಸುತ್ತ ಸುಖ ಸಂತೋಷದಿಂದ ಬಾಳಿ ಬದುಕಬೇಕೆಂಬ ಕನಸನ್ನು ಹೊತ್ತು ಕಾಡಿನ ಮಾರ್ಗವಾಗಿ ಬರುತ್ತಿದ್ದರು ಆಗ ಅಲ್ಲಿ ನಡೆಯಿತು ದುರಂತ.
ಕೈಯಲ್ಲಿ ಮಚ್ಚು ಗನ್ನು ಹಿಡಿದುಕೊಂಡು ನಾಲ್ಕೈದು ಜನ ದಾಂಡಿಗರು ದಾರಿಗೆ ಅಡ್ಡ ಬಂದರು.
ಆ ಗೂಂಡಾಗಳನ್ನು ಕಂಡು ಪ್ರೇಮಿಗಳು ಗಾಬರಿಯಿಂದ ಬೆಚ್ಚಿಬಿದ್ದರು!
ಒಬ್ಬ ಧಡಿಯ ಕೋಪ ಆವೇಶದಿಂದ ಅದೇನೇನೋ ಒದರಾಡುತ್ತಾ ಮಚ್ಚು ಬೀಸಿದನು ಅಂಜಲಿಯ ದೇಹದಾದ್ಯಂತ!
“ಅಂಜಲಿ!”ಎನ್ನುತ್ತಾ ಅಮೀರ್ ಅಡ್ಡ ಬಂದಿದ್ದನು.
ಅಂಜಲಿಯ ದೇಹಕ್ಕೆ ಬೀಳಬೇಕಾದ ಮಚ್ಚು ಅಮೀರನ ಭುಜಕ್ಕೆ ಬಿದ್ದಿತ್ತು.
ರಕ್ತ ಚಿಮ್ಮಿತ್ತು ಕಾರಂಜಿಯಂತೆ!
ಪ್ರಳಯ ಆಗಿ ಹೋದಂತೆ ಅರಚಿದಳು ಅಂಜಿಲಿ!
ಅಮೀರನಿಗೆ ಆಗುತ್ತಿರುವ ಆ ನೋವು ತನಗೆ ಆಗುತ್ತಿದೆ ಎಂಬಂತೆ ಭಾಸಗೊಂಡಳು ಅಂಜಲಿ!
ಸಂಪೂರ್ಣ ಹೌಹಾರಿದ ಅಂಜಲಿ ಅದೇ ಕ್ಷಣಗಳಲ್ಲಿಯೇ ತಾನು ತೊಟ್ಟಿರುವ ಬಟ್ಟೆಯ ಒಂದು ಭಾಗವನ್ನು ಹರಿದು ಅಮೀರನ ಭುಜಕ್ಕೆ ಕಟ್ಟಿ ಸೋರುತ್ತಿರುವ ರಕ್ತವನ್ನು ತಡೆಯಲೆತ್ನಿಸಿದಳು.
“ಅಣ್ಣ, ನಿಮಗೆ ಕೈಮುಗಿದು ಕೇಳಿಕೊಳ್ಳುತ್ತೇನೆ ದಯವಿಟ್ಟು ನಮ್ಮನ್ನು ಬಿಟ್ಟುಬಿಡಿ ಅಣ್ಣ. ನಿಮ್ಮ ಕಣ್ಣು ಮುಂದಿನಿಂದ ಎಲ್ಲಾದರೂ ದೂರ ಹೊರಟುಹೋಗಿ ಕಷ್ಟನೋ ಸುಖಾನೋ ಹೇಗೋ ಬದುಕಿಕೊಳ್ಳುತ್ತೇವೆ ನಮ್ಮನ್ನು ಬಿಟ್ಟು ಬಿಡಿ ಅಣ್ಣ”ಎಂದು ಕೈ ಮುಗಿದು ಪರಿಪರಿಯಾಗಿ ಕೇಳಿಕೊಂಡಿದ್ದಳು ಅಂಜಲಿ.
ಆದರೆ, ಆ ಪಾಪಿಗಳು ಕೇಳಲಿಲ್ಲ!
ಆ ದುಷ್ಟರಿಗೆ ಕರುಣೆ ಬರಲಿಲ್ಲ!
ಅವನು ಕೆಟ್ಟ ಪದಗಳನ್ನು ಉಪಯೋಗಿಸುತ್ತಾ ಅಂಜಲಿಗೆ ನಿಂದಿಸಿದನು.
ಸೈಕೋ ರೀತಿ ವರ್ತಿಸಿದನು.
ಕೊನೆಗೆ ತನ್ನ ಕೈಯಲ್ಲಿದ್ದ ಮಷೀನ್ ಗನ್ ಇಂದ ಗುಂಡಿನ ಸುರಿಮಳೆ ಸುರಿಸಿದನು ಪ್ರೇಮಿಗಳ ದೇಹಗಳಲ್ಲಿ.
ನೋವಿನ ಉದ್ಘಾರದೊಂದಿಗೆ ನೆಲಕ್ಕೆ ಉಳಿದರು ಪ್ರೇಮಿಗಳು.
ಗೂಂಡಾಗಳು ಜಾಗ ಖಾಲಿ ಮಾಡಿದರು.
“ಏನೇ ಎದುರಾದರೂ, ಸಾವೆ ಬಂದರೂ ಕೈ ಬಿಡಲಾರೆ ನಿನ್ನನ್ನು” ಎಂಬಂತೆ ಪ್ರೇಮಿಗಳಿಬ್ಬರೂ ಕೈಯಲ್ಲಿ ಕೈ ಬೆರೆಸಿ ಪ್ರಾಣ ಬಿಟ್ಟಿದ್ದರು.
ಪ್ರೇಮಲೋಕದ ರಾಜ ಅಮೀರನ ಜಾತಿ – ಧರ್ಮ ಬೇರೆಯಾಗಿತ್ತು!
ಪ್ರೇಮಲೋಕದ ರಾಣಿ ಆಂಜಲಿಯ – ಜಾತಿ ಧರ್ಮ ಬೇರೆಯಾಗಿತ್ತು!
ಪ್ರೇಮಲೋಕದ ಪ್ರೇಮಿಗಳಿಬ್ಬರ ಜಾತಿ ಬೇರೆ ಬೇರೆಯಾಗಿತ್ತು!
ಕಥೆ ಮುಗಿದಿತ್ತು…!
ಪ್ರೀತಿ- ಪ್ರೇಮ ಎಂಬ ನೌಕೆಯಲ್ಲಿ, ಅಂಜಲಿ ಮತ್ತು ಅಮೀರ್ ಎಂಬ ಪ್ರೇಮಿಗಳಿಬ್ಬರೂ ಪಯಣಿಸುತ್ತಿದ್ದಾಗ, ಜಾತಿ- ಧರ್ಮ ಎಂಬ ಬಿರುಗಾಳಿಗೆ ಸಿಲುಕಿ ಆ ಪ್ರೇಮ ನೌಕೆ ದಡ ಸೇರದೆ ಮಧ್ಯದಲ್ಲಿಯೇ ಮುಳುಗಿ ದುರಂತ ಅಂತ್ಯ ಕಂಡಿತ್ತು….
ಆ ಒಂದು ಪ್ರೇಮದ ಅಂತ್ಯ, ಮರ್ಯಾದೆಯ ಹೆಸರಿನಲ್ಲಿ ಬಲಿಯಾದ ಎರಡು ಜೀವನಗಳ ದುರಂತಮಯ ಕಥೆಯಾಗಿ ಉಳಿದುಹೋಯಿತು. ಪ್ರೇಮಲೋಕದ ರಾಜ ಅಮೀರನ ಪ್ರೇಮಕ್ಕೆ ಸಿಕ್ಕಿದ್ದು ಸಾವಿನ ದಾರಿ, ಪ್ರೇಮಲೋಕ ರಾಣಿ ಆಂಜಲಿಯ ಪ್ರೇಮಕ್ಕೆ ಸಿಕ್ಕಿದ್ದು ಮರಣದ ಹಾದಿ.
ಕಥೆ ಮುಗಿದಿತ್ತು… ಪ್ರೇಮಕ್ಕೆ ಜಾತಿಯ ಗಡಿ ಬೇಡ ಎಂದು ಹೇಳಲು ಯಾರಿಗೂ ಧೈರ್ಯ ಇರಲಿಲ್ಲ ಈ ದೇಶದಲ್ಲಿ.
ಈ ಕಥೆಯಲ್ಲಿ ಜಾತಿ-ಧರ್ಮದಿಂದಾದ ಮರ್ಯಾದೆ ಹತ್ಯೆ ಮತ್ತು ಪ್ರೇಮದ ನಡುವಿನ ಸಂಘರ್ಷವನ್ನು ದುರಂತದ ರೂಪದಲ್ಲಿ ತೋರಿಸಲಾಗಿದೆ. ಕಥೆ ಬರೆಯುವ ಮುಂಚೆ ಹೇಳಿದ ವಾಕ್ಯದಂತೆ, ‘ಕಥೆ ಮುಗಿದಿತ್ತು’ ಎಂಬ ಮಾತಿಗೆ ದುಃಖಕರ ಅಂತ್ಯವನ್ನು ನೀಡಲಾಗಿದೆ. ಈ ಕಥೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ತಿಳಿಸಿ.

ಧನ್ಯವಾದಗಳು.

  • ಜಿ ಎಲ್ ನಾಗೇಶ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!