ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದ ರಿವರ್ಸ್ ಸೈಡ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಚಿಂಚಲಿ ಇಲ್ಲಿಯ ಶಿಕ್ಷಣ ಸಂಸ್ಥೆಯ ಶಾಲೆಯ ವಿದ್ಯಾರ್ಥಿಗಳು ಸ್ವರೂಪ ದೇಸಾಯಿ /ವೈಷ್ಣವಿ ದಂಡಾಪುರೆ, ವಸುಂಧರಾ ಜಾದವ್ ಇವರು ನವೆಂಬರ್ 7 ರಂದು ಕೊಡಗಿನ ಅಮ್ಮತ್ತಿ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಫುಟ್ಬಾಲ್ ಆಟದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರಿಗೆ ರಿವರ್ ಸೈಡ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ವಿವೇಕ್ ಅಣ್ಣಾ ಪಾಟೀಲ್, ಶಿಕ್ಷಣ ಕ್ಷೇತ್ರ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರು, ಶಾಲೆಯ ಪ್ರಾಚಾರ್ಯರಾದ ಮಂಜುಳಾ ಪಾಟೀಲ್ , ದೈಹಿಕ ಶಿಕ್ಷಕರಾದ ಅಜಿತ್ ಹಾರೂಗೇರಿ ಸೇರಿದಂತೆ ಎಲ್ಲಾ ಶಾಲಾ ಸಿಬ್ಬಂದಿ ಶುಭ ಕೋರಿದ್ದಾರೆ.
- ಕರುನಾಡ ಕಂದ ಪತ್ರಿಕೆ




















