ಚಾಮರಾಜನಗರ/ ಹನೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ವತಿಯಿಂದ ಹನೂರು ತಾಲ್ಲೂಕು ಕಚೇರಿಯಲ್ಲಿ ತಹಸೀಲ್ದಾರ್ ಮುಖಾಂತರ ಸಂವಿಧಾನ ಪ್ರಜಾ ಪ್ರಭುತ್ವ ಜಾತ್ಯಾತೀತತೆ ಕೋಮು ಸಾಮರಸ್ಯ ಶಾಂತಿ ಸೌಹಾರ್ದತೆ ಸಹಬಾಳ್ವೆಯ ವಿರೋಧಿ ಜಾತಿ ಧರ್ಮದ ಹೆಸರಿನಲ್ಲಿ ಕಲಹ ಸೃಷ್ಟಿಸಿ ಬೆಂಕಿ ಹಚ್ಚುವ RSS ಸಂಘಟನೆಗೆ ಸಂವಿಧಾನ ಬದ್ಧ ಕಡಿವಾಣ ಹಾಕುವಂತೆ ಒತ್ತಾಯಿಸಿ ಮನವಿ ಪತ್ರ ನೀಡಲಾಯಿತು.
ಈ ಸಂಧರ್ಭದಲ್ಲಿ ಮಾದೇಶ್ ತಾಲೂಕು ಸಂಚಾಲಕರು ಇವರು ಮಾತನಾಡಿ RSS ಮೂಲತಃ ಸಂವಿಧಾನ ಬದ್ಧವಾಗಿ ನೋಂದಣಿಯಾಗದ ಸಂಘಟನೆ ಕಾರಣ ನೋಂದಾಣಿಯಾದರೆ ಕಾನೂನಾತ್ಮಕವಾಗಿ 18 ವರ್ಷ ಮೇಲ್ಪಟ್ಟ ವಯಸ್ಕರನ್ನು ಮಾತ್ರ ಸಂಘದ ಸದಸ್ಯರನ್ನಾಗಿ ಮಾಡಿಕೊಳ್ಳಬೇಕು. ಇದರಿಂದ ಅಪ್ರಾಪ್ತ ಎಳೆ ವಯಸ್ಸಿನ ಮಕ್ಕಳ ಮೆದುಳಿನಲ್ಲಿ ಕೋಮುವಾದ ಹಿಂದುತ್ವ ಜಾತಿ ಧರ್ಮದ ಹೆಸರಿನಲ್ಲಿ ಕಲಹ ಸೃಷ್ಟಿಸಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಇನ್ನೂ ಮುಖ್ಯವಾಗಿ ಆಯವ್ಯಯ ಲೆಕ್ಕಪತ್ರ ಆಡಿಟ್ ಮಾಡಿಸದೆ ಸರ್ಕಾರವನ್ನು ವಂಚಿಸುವ ಕಾರಣಕ್ಕೆ 1950ರ ದಶಕದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಯಾವುದೇ ಕಾರಣಕ್ಕೂ ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾದಂತಹ ಪ್ರಗತಿ ವಿರೋಧಿ ಸಂಘಟನೆಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬಾರದು ಎಂದು ತಮ್ಮ ರಾಜಕೀಯ ಪಕ್ಷ ಪರಿಶಿಷ್ಟ ಜಾತಿಗಳ ಒಕ್ಕೂಟದ ಪ್ರಣಾಳಿಕೆಯಲ್ಲಿ ಎಚ್ಚರಿಕೆ ನೀಡಿದ್ದರು ಅಷ್ಟೇ ಅಲ್ಲ ಆರ್ ಎಸ್ ಎಸ್ ಒಂದು ಅಪಾಯಕಾರಿ ಸಂಘಟನೆ ಎಂದು ಘೋಷಿಸಿದ್ದರು ಆಗಸ್ಟ್ 15, 1947 ರಂದು ಭಾರತ ಸ್ವತಂತ್ರ ಬಂದು ಜನವರಿ 26, 1950 ರಂದು ಅಂಬೇಡ್ಕರ್ ರವರು ರಚಿಸಿದ ಭಾರತ ಸಂವಿಧಾನ ಜಾರಿಗೊಂಡಾಗ ಅದೇ ಆರ್ ಎಸ್ ಎಸ್ ನ ಪತ್ರಿಕೆ ಆರ್ಗನೈಸರ್‌ನಲ್ಲಿ ಭಾರತದ ಸಂವಿಧಾನದಲ್ಲಿ ಭಾರತೀಯವಾದದ್ದು ಏನೂ ಇಲ್ಲ ವಾಸ್ತವವಾಗಿ ತಮ್ಮ ಮನಸ್ಮೃತಿ ಅತ್ಯಂತ ಪ್ರಾಚೀನವಾಗಿತ್ತು ಜಗತ್ತಿನ ಜನರೆಲ್ಲಾ ಪ್ರೇರಿತರಾಗಿ ಅದರ ಬಗ್ಗೆ ಅಪಾರ ಆಧಾರವನ್ನು ವ್ಯಕ್ತಪಡಿಸುತ್ತಾರೆ ನಮ್ಮ ಸಂವಿಧಾನ ಪಂಡಿತರಿಗೆ ಅದು ಏನು ಅಲ್ಲ ಎಂದು ಟೀಕಿಸಿತ್ತು ಆ ಮೂಲಕ ಆರ್ ಎಸ್ ಎಸ್ ವಾದಿಗಳು ಮನಸ್ಮೃತಿಯನ್ನು ಪೂಜಿಸಿ ಭಾರತದ ಸಂವಿಧಾನವನ್ನು ಅಂದಿನಿಂದಲೂ ತಿರಸ್ಕಾರ ಮನೋಭಾವದಿಂದಲೇ ನೋಡುತ್ತಾ ಬಂದಿದ್ದಾರೆ ಹಿಂದೂ ಮಹಿಳೆಯರಿಗೆ ಪುರುಷರಷ್ಟೇ ಸಮಾನ ಹಕ್ಕು ನೀಡಲು ಬಯಸಿದ್ದ ಹಿಂದೂ ಕೋರ್ಟ್ ಬಿಲ್ ಜಾರಿಯಾಗಲು ಅಂಬೇಡ್ಕರ್ ಹೋರಾಡುತ್ತಿದ್ದಾರೆ ಅವರ ಪ್ರಕೃತಿಯನ್ನು ಸುಟ್ಟುಹಾಕಿ ಆರ್ ಎಸ್ ಎಸ್ ವಿ ಕೃತಿ ಮೆರೆದಿತ್ತು ಮುಸ್ಲಿಮರ ವಿರುದ್ಧ ಅಪಪ್ರಚಾರ ಮಾಡುವುದನ್ನು ಬಿಟ್ಟರೆ ಆರ್ ಎಸ್ ಎಸ್ ಕೆ ಬೇರೇನು ಕಾಣುವುದಿಲ್ಲ ಎಂದರು.
ಭಾರತದ ಸಂವಿಧಾನದ ಮೇಲೆ ಯುದ್ಧ ಸಾರಿರುವ ಈ ಆರ್ ಎಸ್ ಎಸ್, ಬಿ ಜೆ ಪಿ ಯವರ ಆಟ ಅತಿಯಾಗಿದೆ ಇಂತಹ ದ್ವೇಷ ದ್ರೋಹಿಗಳನ್ನು ಬಯಲುಗೊಳಿಸಿ ತಕ್ಕ ಪಾಠ ಕಲಿಸದೇ ಇದ್ದರೆ ಭಾಗ್ಯವಿಧಾತ ಭಾರತವನ್ನು ಬಲಿ ಭಾರತವನ್ನಾಗಿಸುತ್ತಾರೆ. ಇದಾಗಲು ಸರ್ಕಾರ ಬಿಡಬಾರದು ಆದ್ದರಿಂದ ಸಂವಿಧಾನ ಪ್ರಜಾಪ್ರಭುತ್ವ ಜಾತ್ಯತೀತತೆ ಕೋಮು, ಸಾಮರಸ್ಯ ಶಾಂತಿ ಸೌಹಾರ್ದತೆ ಸಹಬಾಳ್ವೆ ವಿರೋಧಿ ಜಾತಿ ಧರ್ಮದ ಹೆಸರಿನಲ್ಲಿ ಕಲಹ ಸೃಷ್ಟಿಸಿ ಬೆಂಕಿ ಹಚ್ಚುವ ಬ್ರಾಹ್ಮಣ ಸ್ವಾಮ್ಯದ ಆರೆಸ್ಸೆಸ್ ಸಂಘಟನೆಗೆ ಸಂವಿಧಾನ ಬದ್ಧ ಕಡಿಮಣ ಆಗುವಂತೆ ಸಮಿತಿ ಒತ್ತಾಯಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಸಿದ್ದಯ್ಯ ಜಿಲ್ಲಾ ಸಂಚಾಲಕರು ಚಾಮರಾಜನಗರ ಫಾರೂಕ್ ಪಾಷಾ ಜಿಲ್ಲಾ ಸಂಘಟನಾ ಸಂಚಾಲಕರು ಮಾದೇಶ್ ತಾಲೂಕು ಸಂಚಾಲಕರು ಮಾರಿಯಪ್ಪ ತಾಲೂಕು ಸಂಘಟನಾ ಸಂಚಾಲಕರು ವಾಸಿಂ ಪಾಷಾ ,ಸೋಮಣ್ಣ,ಮಹಿಳಾ ಸಂಘಟನಾ ಸಂಚಾಲಕಿಯರು ಚಿಕ್ತಾಯಮ್ಮ ಮರಿಯಮ್ಮ ಇನ್ನಿತರರು ಇದ್ದರು.
ವರದಿ ಉಸ್ಮಾನ್ ಖಾನ್




















