
ಶಿವಮೊಗ್ಗ : ಶಿವಮೊಗ್ಗದಲ್ಲಿ ಕಳೆದೆರಡು ದಿನಗಳಿಂದ ಆರಂಭಗೊಂಡಿರುವ ಕೃಷಿ ಮೇಳವು ಕೇವಲ ಕೃಷಿ ಬಗೆಗೆ ಮಾತ್ರ ಪ್ರಾತ್ಯಕ್ಷಿಕತೆ ನೀಡದೆ ಸಾರ್ವಜನಿಕರ ವಿಭಿನ್ನ ಅಭಿರುಚಿಗಳ ಭರಪೂರ ಪ್ರಾತ್ಯಕ್ಷಿಕತೆಯನ್ನು ಪ್ರದರ್ಶಿಸಿ ಸಂಘಟಕರು ತಮ್ಮ ಜಾಣ್ಮೆ ಮತ್ತು ಕೌಶಲವನ್ನು ಅಚ್ಚಳಿಯದೆ ಉಳಿಸಿದ್ದಾರೆ.

ಪ್ರದರ್ಶನಗಳ ಸ್ಟಾಲ್ ಅವುಗಳಲ್ಲಿ ಎದ್ದು ಕಾಣುವಂತಹುದು ಕಾನೂನು ನೆರವು ಪಡೆಯುವುದು ಹೇಗೆ? ಉಳಿತಾಯ ಮಾಡಿಕೊಂಡು ಸ್ಥಿತಿವಂತರಾಗುವುದು ಹೇಗೆ? ಎಂತೆಂತಹ ಆಧುನಿಕ ಕೃಷಿ ಸಲಕರಣೆಗಳು ಇವೆ ಎನ್ನುವ ಸ್ಟಾಲ್ ಗಳು ಪ್ರಮುಖವಾಗಿವೆ.
ವರದಿ: ಕೊಡಕ್ಕಲ್ ಶಿವಪ್ರಸಾದ್.




















