ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಮೀಪದ ಭೈರಗಾಮದಿನ್ನೆ ಗ್ರಾಮದ ‘ಕಾರಂತ ರಂಗಲೋಕ ಕಲಾತ್ಮಕ ಮನಸ್ಸುಗಳ ತಾಣ (ರಿ.)’ ಸಂಸ್ಥೆಯು ಪ್ರತಿವರ್ಷವೂ ನಾಟಕ ಕೃತಿಗಳಿಗೆಂದೇ ಕೊಡಮಾಡುವ ‘ಕಾರಂತ ಸಾಹಿತ್ಯ ರತ್ನ’ ರಾಜ್ಯ ಮಟ್ಟದ ಪುಸ್ತಕ ಪ್ರಶಸ್ತಿಗೆ ಸತತ ೪ನೇ ವರ್ಷವೂ ಸಹ ಅರ್ಜಿ ಆಹ್ವಾನಿಸಿದೆ. ೨೦೨೦ ರಿಂದ ೨೦೨೫ರ ಅವಧಿಯಲ್ಲಿ ಮುದ್ರಣಗೊಂಡ ನಾಟಕ ಕೃತಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುತ್ತಿದೆ. ಅಲ್ಲದೆ ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ನಾಟಕಕಾರರಿಗೆ ಕೆಲವು
ನಿಯಮಗಳನ್ನು ನೀಡಲಾಗಿದೆ.
ಅವುಗಳು :
೧.ಈ ಪ್ರಶಸ್ತಿಯನ್ನು ಕೇವಲ ನಾಟಕ ಕೃತಿಗಳಿಗೆ ಮಾತ್ರ ನೀಡಲಾಗುತ್ತದೆ.
೨.ಪ್ರಶಸ್ತಿಗೆ ಎಲ್ಲಾ ವಯಸ್ಸಿನವರು ಅರ್ಜಿ ಸಲ್ಲಿಸಬಹುದಾಗಿದೆ.
೩.ಈ ಹಿಂದೆ ಪ್ರಶಸ್ತಿ ಪಡೆದವರು ಈ ವರ್ಷದ ಪ್ರಶಸ್ತಿಗೆ ಅರ್ಹರಾಗಿರುವುದಿಲ್ಲ.
೪.ತಮ್ಮ ಕೃತಿಯ ಮೂರು ಪ್ರತಿಗಳ ಜೊತೆಗೆ ಪ್ರತ್ಯೇಕ ಹಾಳೆಯಲ್ಲಿ ಸ್ವಪರಿಚಯ, ಸಂಪೂರ್ಣ ಅಂಚೆ ವಿಳಾಸ ಬರೆದು, ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಲಗತ್ತಿಸಿ ಕೆಳಗಿನ ವಿಳಾಸಕ್ಕೆ ಅಂಚೆಯ ಮೂಲಕವೇ (Printed Book Post/Registered Post) ತಮ್ಮ ಕೃತಿಗಳನ್ನು ಕಳಿಸಬಹುದಾಗಿದೆ.
೫.ಒಬ್ಬ ಲೇಖಕ ತನ್ನ ಎರಡು ಕೃತಿಗಳ ಮೂಲಕ ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದಾಗಿದೆ.
೬.ಪ್ರಶಸ್ತಿಯು ನಗದು, ನೆನಪಿನ ಕಾಣಿಕೆ, ಆಕರ್ಷಕ ಪ್ರಶಸ್ತಿ ಪತ್ರದ ಜೊತೆ ಶಾಲು, ಹಾರದ ಸನ್ಮಾನವನ್ನು ಒಳಗೊಂಡಿದೆ.
೭.ಪ್ರಶಸ್ತಿಗೆ ಕಳುಹಿಸಿದ ಕೃತಿಗಳನ್ನು ಹಿಂತಿರುಗಿಸಲಾಗುವುದಿಲ್ಲ. ಅಲ್ಲದೇ ಯಾವುದೇ ಪತ್ರ ವ್ಯವಹಾರಕ್ಕೆ ಅವಕಾಶವಿಲ್ಲ.
೮.ವಿಶೇಷ ಸೂಚನೆ : ಅರ್ಜಿದಾರರಿಂದ ಯಾವುದೇ ಹಂತದಲ್ಲಿ ನಾವು ಹಣವನ್ನು ಪಡೆಯುವುದಿಲ್ಲ.
೯.ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 30 ನವೆಂಬರ್ 2024
ಪುಸ್ತಕಗಳನ್ನು ಕಳುಹಿಸಬೇಕಾದ ವಿಳಾಸ: ಆರ್.ಪಿ.ಮಂಜುನಾಥ್.ಬಿ.ಜಿಜ.ದಿನ್ನೆ, ಕಾರ್ಯದರ್ಶಿಗಳು, ಕಾರಂತ ರಂಗಲೋಕ ಕಲಾತ್ಮಕ ಮನಸ್ಸುಗಳ ತಾಣ (ರಿ),
ಕವಿ ಸದನ, ಭೈರಗಾಮದಿನ್ನೆ ಗ್ರಾಮ, ಕೊತ್ತಲಚಿಂತ ಅಂಚೆ, ಸಿರುಗುಪ್ಪ ತಾಲ್ಲೂಕು, ಬಳ್ಳಾರಿ ಜಿಲ್ಲೆ – 583114,
ಮೊ :9379857775.




















