ಶಿವಮೊಗ್ಗ : ನಗರದಲ್ಲಿ ಸಾರ್ವಜನಿಕರ ದಿನನಿತ್ಯದ ಜೀವನಕ್ಕೆ ಅಡ್ಡಿಯಾಗುತ್ತಿರುವ ಕೆಲವು ಪ್ರಮುಖ ಸಮಸ್ಯೆಗಳ ಕುರಿತು ಮನವಿಯನ್ನು ಸಲ್ಲಿಸಲಾಯಿತು.
ರಸ್ತೆ ಮತ್ತು ಫುಟ್ಪಾತ್ ಅತಿಕ್ರಮಣ:
ನಗರದ ಹಲವಾರು ಭಾಗಗಳಲ್ಲಿ ಆಸ್ಪತ್ರೆಗಳು, ವ್ಯಾಪಾರಸ್ಥರು ಹಾಗೂ ಹಣ್ಣು–ತರಕಾರಿ ಮಾರಾಟಗಾರರು , ಗ್ಯಾರೇಜ್ ಗಳು, ಹೋಟೆಲ್ ಗಳು, ಕ್ಯಾಂಟೀನ್ ಗಳು, ಕಾರ್ ಪಾರ್ಕಿಂಗ್ ಶೆಡ್ ಗಳು, ಪಂಚರ್ ಶಾಪಗಳು, ಸ್ಲಿಪ್ಪರ್ ಅಂಗಡಿಗಳು, ಬಟ್ಟೆ ಅಂಗಡಿಗಳು ಪಾದಚಾರಿ ಮಾರ್ಗ(Footpath) ಮತ್ತು ರಸ್ತೆಗಳನ್ನು ಆಕ್ರಮಿಸಿಕೊಂಡಿದ್ದಾರೆ. ಇದರ ಪರಿಣಾಮವಾಗಿ ಸಾರ್ವಜನಿಕರ ಸಂಚಾರ ಕಷ್ಟಕರವಾಗಿದೆ. ದಯವಿಟ್ಟು ಸಿಬ್ಬಂದಿಗಳನ್ನು ಮತ್ತು ಜೆಸಿಬಿ ಯಂತ್ರಗಳನ್ನು ಬಳಸಿಕೊಂಡು ಈ ಅತಿಕ್ರಮಣಗಳನ್ನು ತಕ್ಷಣ ತೆರವುಗೊಳಿಸಿ, ಪಾದಚಾರಿಗಳಿಗೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಬೇಕೆಂದು ವಿನಂತಿಸುತ್ತೇವೆ.
ಬೀದಿ ನಾಯಿಗಳ ಹಾವಳಿ :
ನಗರದ ಬೀದಿಗಳಲ್ಲಿ ನಾಯಿಗಳ ಹಾವಳಿ, ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಭಯಭೀತರಾಗಿದ್ದಾರೆ. ನಾಯಿಗಳ ರಸ್ತೆಗಳಲ್ಲಿ ಓಡಾಡಲು ಕಷ್ಟವಾಗುತ್ತಿದ್ದು ನಾಯಿಗಳು ದಾಳಿ ಮಾಡುತ್ತಿವೆ ನಾಯಿಗಳ ಬಂಧನ ಮತ್ತು ನಿಷ್ಕ್ರಿಯೀಕರಣ (Sterilization) ಕಾರ್ಯವನ್ನು ಗಟ್ಟಿಯಾಗಿ ಕೈಗೊಳ್ಳಬೇಕೆಂದು ವಿನಂತಿಸುತ್ತೇವೆ.
ರಸ್ತೆ ಅಪಘಾತ ನಿಯಂತ್ರಣ:
ಜಿಲ್ಲೆಯಲ್ಲಿ ವರ್ಷಕ್ಕೆ ಸರಾಸರಿ 25 ಕೊಲೆ ಪ್ರಕರಣಗಳು ದಾಖಲಾಗುತ್ತವೆ. ಆದರೆ ಪ್ರತಿದಿನ ರಸ್ತೆ ಅಪಘಾತಗಳಲ್ಲಿ ರಾಜ್ಯಾದ್ಯಂತ 20 ಜನರು ಸಾವನ್ನಪ್ಪುತ್ತಿದ್ದಾರೆ ಎಂಬ ವರದಿಯ ಬೆನ್ನಲ್ಲೇ,ಎರಡೂ ಸಾವಿನ ಪರಿಣಾಮ ಒಂದೇ ರೀತಿಯದು. ಆದ್ದರಿಂದ ಅಪಘಾತ ನಿಯಂತ್ರಣಕ್ಕೂ ನಗರಪಾಲಿಕೆ ಆಯುಕ್ತರು ಮತ್ತು ಪೊಲೀಸರು ತೀರ್ಮಾನಾತ್ಮಕ ಕ್ರಮ ಕೈಗೊಳ್ಳಬೇಕು. ಅಪಾಯಕಾರಿ ಸ್ಥಳಗಳಲ್ಲಿ ವೇಗ ನಿಯಂತ್ರಣ ಫಲಕಗಳು, ಬೆಳಕು ವ್ಯವಸ್ಥೆ, ಪಾದಚಾರಿ ಮಾರ್ಗಗಳ ಸುಧಾರಣೆ ಮತ್ತು ಟ್ರಾಫಿಕ್ ನಿಯಂತ್ರಣ ಕ್ರಮಗಳನ್ನು ಬಲಪಡಿಸಬೇಕೆಂದು ವಿನಂತಿಸುತ್ತೇವೆ.
ಈ ಮೂರು ವಿಷಯಗಳು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಮಹತ್ವದ ವಿಷಯಗಳಾಗಿದ್ದು, ದಯವಿಟ್ಟು ತುರ್ತು ಕ್ರಮ ಕೈಗೊಳ್ಳಲು ಮನವಿ ಮಾಡುತ್ತೇವೆ ಎಂದು ಶಿವಮೊಗ್ಗ ನಗರದ ನಾಗರಿಕರ ಪರವಾಗಿ ಶ್ರೀ ಪ್ರಕಾಶ್ ಎಂಬುವವರು ಮನವಿ ಮಾಡಿದ್ದಾರೆ.
ವರದಿ: ಕೊಡಕ್ಕಲ್ ಶಿವಪ್ರಸಾದ್




















