ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಎಂ. ದಾಸರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ನಿನ್ನೆ ಪೋಷಕ ಶಿಕ್ಷಕರ ಮಹಾಸಭೆಯನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರು ಶ್ರೀಮತಿ ರತ್ನಮ್ಮ ಅವರು ಈ ಕಾರ್ಯಕ್ರಮವನ್ನು ಕುರಿತು ಮಾತನಾಡುತ್ತಾ ಬಾಲ್ಯ ವಿವಾಹ ಮಕ್ಕಳ ಹಕ್ಕು ಬಾಧ್ಯತೆಗಳು ಮಕ್ಕಳ ಸುರಕ್ಷತೆ ಶಾಲೆಯ ಸುರಕ್ಷತೆ ಹಳೆಯ ವಿದ್ಯಾರ್ಥಿ ಸಂಘದ ವಿದ್ಯಾರ್ಥಿಗಳು ಶಾಲೆಯ ಹಳೆಯ ವಿದ್ಯಾರ್ಥಿಗಳು ಕುರಿತು ಶಾಲೆಯ ಸುರಕ್ಷತೆ ಶಾಲೆಯ ಸ್ಥಿತಿಗತಿಗಳು ಮುಂತಾದ ವಿಚಾರಗಳನ್ನು ಕುರಿತು ಚರ್ಚೆ ಮಾಡಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯರು ಹಾಗೂ ಮಾಜಿ ಹಾಲಿ ಗ್ರಾಮ ಪಂಚಾಯಿತಿ ಸದಸ್ಯರು ಎಸ್ ಡಿ ಎಂ ಸಿ ಅಧ್ಯಕ್ಷರು ಸದಸ್ಯರು ಮಕ್ಕಳ ಪೋಷಕರು ಹಳೆಯ ವಿದ್ಯಾರ್ಥಿಗಳು ಹಾಗೂ ಎಂ ದಾಸರಹಳ್ಳಿ ಶಾಲೆಯ ಮುಖ್ಯ ಶಿಕ್ಷಕರು ಶ್ರೀಮತಿ ರತ್ನಮ್ಮ ಸಹ ಶಿಕ್ಷಕಿ ಜಲಜ ಹಾಗೂ ಅತಿಥಿ ಶಿಕ್ಷಕರಾದ ಕೊಟ್ಟ ಕರಿಯಣ್ಣ, ಸಣ್ಣಪ್ಪ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.
ವರದಿ ಕೊಟ್ಟ ಕರಿಯಣ್ಣ



















