ಉತ್ತರ ಕನ್ನಡ :ಹಲವಾರು ವರ್ಷಗಳಿಂದ ಬಸ್ ಸೌಲಭ್ಯ ಕಾಣದೆ ಇರುವ ಇಡಗುಂಜಿಯ ಮುಳ್ಕೋಡ ಅಡ್ಕರಿ ಕ್ರಾಸ್ ಗ್ರಾಮಸ್ಥರು ಕರುನಾಡ ವಿಜಯ ಸೇನೆಯ ಕಚೇರಿಗೆ ಬಂದು ಬಸ್ ವಿಸ್ತರಣೆ ಬಗ್ಗೆ ಸಂಘಟನೆ ಸಹಕಾರ ಬೇಕೆಂದು ಬಂದಾಗ ಕುಮಟಾ ಡಿಪೋ ಮ್ಯಾನೇಜರ್ ಹಾಗೂ ಹೊನ್ನಾವರ ತಾಲೂಕ ದಂಡಾಧಿಕಾರಿಗಳಾದ ಪ್ರವೀಣ್ ಕರಾಂಡೆ ಅವರನ್ನು ಭೇಟಿಯಾಗಿ ಮನವಿ ನೀಡಿ ಸಮಸ್ಯೆ ಕುರಿತು ಚರ್ಚೆ ಮಾಡಲಾಯಿತು ಕೂಡಲೇ ಎಚ್ಚೆತ್ತುಕೊಂಡು ಪ್ರವೀಣ್ ಕರಾಂಡೆ ರವರು ಕುಮಟಾ ಬಸ್ ವಿಭಾಗಕ್ಕೆ ಕರೆಯ ಮೂಲಕ ಕೂಡಲೇ ಸ್ಥಳವನ್ನು ಪರಿಶೀಲಿಸಿ ಆದಷ್ಟು ಬೇಗನೆ ಬಸ್ ಸಂಚಾರ ಪ್ರಾರಂಭಿಸಬೇಕು ಎಂದು ಹೇಳಿದರು. ಒಂದು ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ವಿನಾಯಕ ಆಚಾರಿ, ಸಂಚಾಲಕರಾದ ಅಲ್ತಾಫ್ ಶೇಖ, ಕುಮಟಾ ಯುವ ಘಟಕ ತಾಲೂಕ ಅಧ್ಯಕ್ಷರಾದ ಸುಹಾನ ಬಂಡಾರಿ, ಅಕ್ಷಯ್ ಉಪ್ಪಾರ್, ನಾರಾಯಣ ಅಂಬಿಗ, ಹಾಗೂ ಮುಳ್ಕೋಡ ಗ್ರಾಮಸ್ಥರು ಉಪಸ್ಥಿತರಿದ್ದರು.
- ಕರುನಾಡ ಕಂದ ಪತ್ರಿಕೆ



















