ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ತಮ್ಮಡಹಳ್ಳಿ ಗ್ರಾಮದಲ್ಲಿ ನಡೆದಂತಹ ಹoಡಿತವಳ್ಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ತಾಲೂಕು ಶಿಕ್ಷಣಾಧಿಕಾರಿಯದ ರವಿ ಪ್ರಸನ್ನ ರವರು ಉದ್ಘಾಟನೆ ಮಾಡಿದರು. ನಂತರ ಈ ಕಾರ್ಯಕ್ರಮದಲ್ಲಿ ಎಲ್ಲಾ ಶಾಲೆಯಿಂದ ಬಂದಂತ ಮಕ್ಕಳು ತಮ್ಮ ಪ್ರತಿಭೆಯನ್ನು ತೋರಿಸಿದರು ನಂತರ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಅವರಿಗೆ ಬಹುಮಾನ ವಿತರಣೆಯನ್ನು ಮಾಡಲಾಯಿತು. ಬಹುಮಾನ ವಿತರಣಾ ಕಾರ್ಯಕ್ರಮವನ್ನು ಎಸ್ ಡಿ ಎಂ ಸಿ ಅಧ್ಯಕ್ಷರಾದ ವೆಂಕಟೇಶ್ ರವರು ಅಧ್ಯಕ್ಷತೆ ವಹಿಸಿದ್ದರು ನಂತರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಗೌರಮ್ಮನವರು ಪಿಡಿಒ ಅನಿಲ್ ಕುಮಾರ್ ರವರು ಸಿ ಆರ್ ಪಿ ಮಹೇಂದ್ರರವರು ಮುಖ್ಯ ಶಿಕ್ಷಕರಾದ ಗೋವಿಂದ್ ರವರು ಎಚ್ ಜಿ ಗ್ರಾಮಸ್ಥರಾದ ರಾಮಕೃಷ್ಣ ನಾಯಕ ರವರು ರವಿನಾಯಕ್ ರವರು ಪ್ರೇಮ್ ಕುಮಾರ್ ಮಹೇಶ್ ರವರು ಪಟೇಲ್ ವಿಶ್ವನಾಥ್ ರವರು ವೆಂಕಟೇಶ ಟಿ ಡಿ ಹoಡಿತವಳ್ಳಿ ಮುಖ್ಯ ಶಿಕ್ಷಕರದ ಕಾಂತಚಾರ ರವರು ಕ್ಲಸ್ಟರ್ನ ಎಲ್ಲಾ ಮುಖ್ಯ ಶಿಕ್ಷಕರು ಎಸ್ ಡಿ ಎಂ ಸಿ ಉಪಾಧ್ಯಕ್ಷರು ಸದಸ್ಯರುಗಳು ಗ್ರಾಮದ ಯಜಮಾನರು ಹಳೆ ವಿದ್ಯಾರ್ಥಿಗಳು ಯುವಕರು ಶಾಲೆಯ ಎಲ್ಲಾ ಕ್ಲಸ್ಟರ್ ನಿಂದ ಬಂದಿರುವಂತ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು. ಈ ಕಾರ್ಯಕ್ರಮದಲ್ಲಿ ವಿಜೇತರಿಗೆ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ವರದಿ ಹೆಚ್. ಆರ್ .ಶಂಕರ್



















