ಚಾಮರಾಜನಗರ : ಕರ್ನಾಟಕ ಪ್ರಜಾಶಕ್ತಿ ವೇದಿಕೆ (ರಿ.) ಸಂಘಟನೆಯ ಬೇಗೂರಿನ ಕೇಂದ್ರ ಕಚೇರಿ ಉದ್ಘಾಟನೆಗೆ ಮಾನ್ಯ ಶಾಸಕರಾದ ಗಣೇಶ ಪ್ರಸಾದ್ ರವರು ಆಗಮಿಸಿ ಕಚೇರಿ ಉದ್ಘಾಟಿಸಿ ರಾಜ್ಯಾಧ್ಯಕ್ಷರಾದ ಅಶೋಕ್ ರಾಜ್ ಬೇಗೂರ್ ರವರಿಗೆ ಶುಭಾಶಯ ಕೋರಿದರು. ಇದೇ ಸಂದರ್ಭದಲ್ಲಿ ಸಂಘಟನೆಯ ಸದಸ್ಯರುಗಳು, ಮುಖಂಡರು, ನಂಜನಗೂಡು ತಾಲೂಕು ಅಧ್ಯಕ್ಷ ಶಿವರಾಜ್, ಚಾಮರಾಜನಗರ ಯುವ ಘಟಕದ ಅಧ್ಯಕ್ಷ ಶಿವ ನಾಗೇಂದ್ರ, ಗುಂಡ್ಲುಪೇಟೆ ತಾಲೂಕು ಯುವ ಘಟಕದ ಅಧ್ಯಕ್ಷ ನಾಗರಾಜ್, ಗ್ರಾಮದ ಮುಖಂಡರುಗಳು, ಗ್ರಾಮ ಪಂಚಾಯಿತಿಯ ಸದಸ್ಯರು ಪುನೀತ್, ಗ್ರಾಮ ಪಂಚಾಯತ್ ಅಧ್ಯಕ್ಷರು ಜಯಮ್ಮ, ಮಾಜಿ ಅಧ್ಯಕ್ಷರಾದ ರಾಜಶೆಟ್ಟಿ, ಯಜಮಾನ್ ನಾರಾಯಣ್ ರವರು, ಪ್ರತಾಪ್, ರವಿ, ಗುಂಡು ಗಣಪತಿ, ಗಣೇಶ ಸೇರಿದಂತೆ ಇತರರು ಹಾಜರಿದ್ದರು.
- ಕರುನಾಡ ಕಂದ ಪತ್ರಿಕೆ




















