ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹೃದಯಾಘಾತದಿಂದ ಯೋಧ ಚಂದ್ರು ಶೆಟ್ಟಪ್ಪ ಕಾಶಿದ ಹುತಾತ್ಮ

ಪಂಜಾಬಿನಲ್ಲಿ ಕರ್ತವ್ಯ ನಿರತವಾಗಿದ್ದ ಸಂದರ್ಭದಲ್ಲಿ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದ ಯೋಧ ಚಂದ್ರು ಶೇಟ್ಟಪ್ಪ ಕಾಶಿದ ಅವರು ಮಂಗಳವಾರ ನಸುಕಿನ ಜಾವದಲ್ಲಿ ಅಕಸ್ಮಾತ್ ಹೃದಯಾಘಾತಕ್ಕೊಳಗಾಗಿ ಸಾವು ಹೊಂದಿದ್ದರು. ದೇಶಸೇವೆಯಲ್ಲಿ ತೊಡಗಿದ್ದ ಯೋಧನ ಅಕಾಲಿಕ ನಿಧನದ ಸುದ್ದಿ ಊರಿನಲ್ಲೇ ಅಲ್ಲ, ಸಮಗ್ರ ಪ್ರದೇಶದಲ್ಲೂ ಶೋಕಸಹಿತ ವಾತಾವರಣ ನಿರ್ಮಿಸಿತ್ತು.

ಮೃತ ಯೋಧನ ಪಾರ್ಥಿವ ಶರೀರವು ಅವರ ಮೂಲ ಹಳ್ಳಿಯಾದ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮಕ್ಕೆ ಆಗಮಿಸಿ, ಗ್ರಾಮದ ನೂರಾರು ಜನರು ಕಣ್ಣೀರಿನ ನೋಟದಲ್ಲಿ ತಮ್ಮ ಪ್ರಿಯ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.
ಗ್ರಾಮದ ಹೆಮ್ಮೆಯ ಯೋಧನನ್ನು ಕಳೆದುಕೊಂಡ ನೋವಿನಲ್ಲಿ ಇಡೀ ಗ್ರಾಮವೇ ಕ್ಷಣಮಾತ್ರ ಮೌನಕ್ಕೆ ಜಾರಿತು.

ಅಂತಿಮ ದರ್ಶನಕ್ಕೆ ಪಾರ್ಥಿವ ಶರೀರವನ್ನು ಸುಟ್ಟಟ್ಟಿ ಗ್ರಾಮದ ಪ್ರಾಥಮಿಕ ಶಾಲೆಯ ಆವರಣದಲ್ಲಿ ಇಡಲಾಗಿತ್ತು, ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.

ನಂತರ ಸರ್ಕಾರಿ ಗೌರವಗಳ ನಡುವೆ, ಸೈನ್ಯ ಕವಾಯತು ಮತ್ತು ಗೌರವ, ಸೇನಾಧಿಕಾರಿಗಳು ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿದರು, ಮೃತ ಯೋಧ ಚಂದ್ರು ಕಾಶಿದ ಅವರ ಅಂತ್ಯ ಸಂಸ್ಕಾರ ಗ್ರಾಮದಲ್ಲೇ ನೆರವೇರಿಸಲಾಯಿತು.

ವರದಿ. ವಿಠ್ಠಲ ಖೋಕಾಟೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!