ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕನ್ನಡ ಹಿತರಕ್ಷಕ ಸಂಘದಿಂದ ಅದ್ದೂರಿಯಾಗಿ ಕರ್ನಾಟಕ ರಾಜ್ಯೋತ್ಸವ ಆಚರಣೆ

ಬಳ್ಳಾರಿ / ಕಂಪ್ಲಿ : ಕನ್ನಡದ ಹಿರಿಯಣ್ಣ ಸಂಸ್ಥೆ ಕನ್ನಡ ಹಿತರಕ್ಷಕ ಸಂಘದಿಂದ ಪಟ್ಟಣದ ಶಾರದಾ ಶಾಲೆಯ ವೀರಶೈವ ಸಂಘದ ಆವರಣದಲ್ಲಿ 55ನೇ ವಾರ್ಷಿಕೋತ್ಸವ ಹಾಗೂ ಅದ್ದೂರಿಯಾಗಿ 70ನೇ ಕರ್ನಾಟಕ ರಾಜ್ಯೋತ್ಸವನ್ನು ಆಚರಿಸಲಾಯಿತು.

ಸಂಘದ ಹಿನ್ನಲೆ :
ಕನ್ನಡ ನಾಡು, ನುಡಿ, ಗಡಿ, ಜಲ, ಸಂಸ್ಕೃತಿ, ಪರಂಪರೆಗಳ ರಕ್ಷಣೆಗಾಗಿ ಶ್ರಮಿಸುತ್ತಿರುವ ಕಂಪ್ಲಿ ಪಟ್ಟಣದ ಕನ್ನಡ ಹಿತರಕ್ಷಕ ಸಂಘಕ್ಕೆ ಇದೀಗ ಐವತ್ತೈದರ ಪ್ರಾಯ.
1970ರಲ್ಲಿ ಮೈಸೂರು-ಮಹಾರಾಷ್ಟ್ರ ಗಡಿ ಪ್ರತಿಭಟನೆಯಲ್ಲಿ, ಕಂಪ್ಲಿ ಬಂದ್‍ಗೆ ಕರೆ ಕೊಟ್ಟು ರಸ್ತೆ ರೋಖೋ ಚಳುವಳಿಯಲ್ಲಿ ನಿರತ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದರು. ಪಟ್ಟಣದ ಪ್ರಮುಖರಾದ ಮಹಾಂತಿನಮಠದ ಗುರುಬಸಯ್ಯನವರು ಜಾಮೀನು ನೀಡಿ ಹೋರಾಟಗಾರರನ್ನು ಬಿಡುಗಡೆಗೊಳಿಸಿದರು. ಈ ಘಟನೆಯಿಂದಾಗಿಯೇ ಕಂಪ್ಲಿಯಲ್ಲಿ ಕನ್ನಡ ಹಿತರಕ್ಷಕ ಸಂಘ ಜನ್ಮತಾಳಲು ಕಾರಣವಾಯಿತು. ದಿ‌ 21-02-1971 ರಂದು ಕನ್ನಡದ ಕಟ್ಟಾಳು ವಾಟಾಳ್ ನಾಗರಾಜ ಕನ್ನಡ ಹಿತರಕ್ಷಕ ಸಂಘವನ್ನು ಉದ್ಘಾಟಿಸಿದರು.

ಸಂಘದ ಹಿರಿಮೆ:
ಕಳೆದ ವರ್ಷಗಳಲ್ಲಿ ನಾನಾ ಕ್ರೀಡೆಗಳನ್ನು ಆಯೋಜಿಸಿ, ರಾಜ್ಯಮಟ್ಟದ ಸ್ಪರ್ಧೆಗಳಿಗೆ ಕ್ರೀಡಾಪಟುಗಳನ್ನು ಕಳುಹಿಸಿಕೊಟ್ಟಿದೆ. ರಾಜ್ಯಮಟ್ಟದ ಏಕಾಂಕ ನಾಟಕ ಸ್ಪರ್ಧೆಗಳನ್ನು ಏರ್ಪಡಿಸಿದೆ. ಭುವನೇಶ್ವರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯನ್ನು ಸ್ಥಾಪಿಸಿದೆ. 100ಕ್ಕೂ ಹೆಚ್ಚು ಕ್ರಿಯಾಶೀಲ ಮಾಸಿಕ ಕಾರ್ಯಕ್ರಮಗಳನ್ನು, 13ಕ್ಕೂ ಹೆಚ್ಚು ತ್ರೈಮಾಸಿಕ ಕಾರ್ಯಕ್ರಮಗಳನ್ನು ನೆರವೇರಿಸಿದೆ. ಕಂಪ್ಲಿ ಇತಿಹಾಸವನ್ನು ಸಂಗ್ರಹಿಸಲು 1999ರ ಮಾ. 29ರಂದು ಕಂಪ್ಲಿ ವಿಚಾರ ಸಂಕೀರ್ಣವನ್ನು ಆಯೋಜಿಸಿ, ‘ಕಂಪ್ಲಿ’ ಸಂಶೋಧನಾತ್ಮಕ ಪ್ರಬಂಧ ಸಂಕಲವನ್ನು ಪ್ರಕಟಿಸಿದೆ.

ಗಂಡುಗಲಿ ಕುಮಾರರಾಮ ಪ್ರಶಸ್ತಿ:
ಕನ್ನಡಕ್ಕಾಗಿ ಅನುಪಮ ಸೇವೆ ಸಲ್ಲಿಸಿದ ಶಿವಮೊಗ್ಗ, ಕಾಂತಾವರ, ಮಂಡ್ಯ, ರಾಯಚೂರು, ಮುಂಬೈನಲ್ಲಿನ ಕನ್ನಡಪರ ಸಂಘಟನೆಗಳ ಸಾಧನೆಯನ್ನು ಗಮನಿಸಿ, ಹಾಗೂ ಬೆಳಗಲ್ಲು ವೀರಣ್ಣ, ಮಲ್ಲೇಪುರಂ ಜಿ.ವೆಂಕಟೇಶ್, ಹುಕ್ಕೇರಿ ಶ್ರೀ, ಎಚ್.ಪಿ.ಕಲ್ಲಂಭಟ್‍ರಿಗೆ ರಾಜ್ಯಮಟ್ಟದ ‘ಗಂಡುಗಲಿ ಕುಮಾರರಾಮ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಡಾ.ರಾಜಕುಮಾರ್ ಭೇಟಿ:

ಕಾರ್ಯಕ್ರಮಗಳಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಶಿವರಾಮಕಾರಂತ, ಚಂದ್ರಶೇಖರ ಕಂಬಾರ, ಸಾಹಿತಿಗಳಾದ ಕೈಯ್ಯಾರ ಕಿಞ್ಞಣ್ಣರೈ, ಬಳ್ಳಾರಿಯ ಬೀಚಿ, ಹಾ.ಮ.ನಾಯಕ, ಶಂಭು ಬಳಿಗಾರ, ಚನ್ನವೀರ ಕಣವಿ, ಡಾ.ಎಂ.ಎಂ.ಕಲ್ಬುರ್ಗಿ, ಚಲನಚಿತ್ರ ನಟರಾದ ಡಾ. ರಾಜಕುಮಾರ್, ಮಂಜುಳಾ, ವಜ್ರಮುನಿ, ಚಿ.ಉದಯಶಂಕರ್, ಶ್ರೀನಿವಾಸಮೂರ್ತಿ, ದಿನೇಶ್ ಅನೇಕರು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದುಂಟು.
ಕಂಪ್ಲಿಯ ಗೋಕಾಕ್ ಚಳುವಳಿ ಸಂದರ್ಭದಲ್ಲಿ ಸಂಘ ಪ್ರಧಾನ ಪಾತ್ರವಹಿಸಿತ್ತು. ಕನ್ನಡ ಭವನವನ್ನೊಂದಿದ್ದು, ಸಂಘದ ಸುವರ್ಣ ಮಹೋತ್ಸವ ಸ್ಮರಣಾರ್ಥ ಕನ್ನಡ ಭವನ ಮೇಲ್ಮಳಿಗೆ ನಿರ್ಮಿಸಲು ಯೋಜಿಸಿದೆ.

ರಾಜ್ಯೋತ್ಸವ ಸಂಭ್ರಮ:
ಶಾಸಕ ಜೆ.ಎನ್.ಗಣೇಶ್ ಉದ್ಘಾಟಿಸಿ ಮಾತನಾಡಿ ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಪ್ರಾಚೀನ ಇತಿಹಾಸವಿದೆ. ಪರಕೀಯರ ಹಾಗೂ ಗಡಿ ಭಾಗದ ಅನ್ಯ ಭಾಷಿಕರ ದಾಸ್ಯತ್ವಕ್ಕೆ ಸೋತಿರುವ ಕನ್ನಡ ಉಳಿಸಿ ಬೆಳೆಸುವ ಅನಿವಾರ್ಯತೆ ಎದುರಾಗಿದೆ ’ ಎಂದರು.
ತಾಲೂಕು ವೀರಶೈವ ಸಂಘದ ಅಧ್ಯಕ್ಷ ಪಿ.ಮೂಕಯ್ಯಸ್ವಾಮಿ ಸಭಾಧ್ಯಕ್ಷತೆ ವಹಿಸಿದ್ದರು.
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿದ್ಧರಾಮ ಕಲ್ಮಠರು ‘ಕನ್ನಡ ನಾಡು, ನುಡಿ’ ಕುರಿತು ಉಪನ್ಯಾಸ ನೀಡಿ ಮಾತನಾಡಿ ಸ್ವಾತಂತ್ರ್ಯ ಪೂರ್ವದಲ್ಲೂ ಕವಿ ಮತ್ತು ಕಲಾವಿದರು ತಮ್ಮ ಶಿಷ್ಟ ಸಾಹಿತ್ಯ ರಚನೆಗಳ ಮೂಲಕ ಕನ್ನಡ ಸಾರಸ್ವತ ಲೋಕವನ್ನು ಎತ್ತರಿಸಿದ್ದಾರೆ. ನಂತರದ ದಿನಗಳಲ್ಲಿ ಭಾಷಾವಾರು ಪ್ರಾಂತ್ಯಗಳ ರಚನೆಯಾಗಿ, ರಾಜ್ಯಗಳ ಘನತೆಗೆ ಆಯಾ ಪ್ರಾದೇಶಿಕ ಭಾಷೆಗಳನ್ನೆ ಗುರುತಿಸಿ ಗೌರವಿಸಲಾಯಿತು. 1973ರಲ್ಲಿ ಮೈಸೂರು ರಾಜ್ಯ ಅಖಂಡ ಕರ್ನಾಟಕವಾಗಿ ಮನ್ನಣೆ ಪಡೆಯಿತು.
ಮಾತೃ ಭಾಷೆಗಳ ಮೇಲೆ ಇಂಗ್ಲಿಷ್ ಸವಾರಿ ಮಾಡುತ್ತಿದೆ. ವಿದ್ಯಾರ್ಥಿಗಳಲ್ಲೂ ಅನ್ಯ ಭಾಷೆಗಳ ಕಲಿಕೆ ಅನಿವಾರ್ಯ ಎಂಬಂತೆ ಬಿಂಬಿಸಲಾಗುತ್ತದೆ. ಆದರೆ. ನೆಲದ ಸಾಹಿತ್ಯ, ಸಂಸ್ಕೃತಿ, ಜನಪದ ನಿರ್ಲಕ್ಷಿಸಿದರೆ, ಮಕ್ಕಳ ಹತ್ತಾರು ಜೈವಿಕ ಕೌಶಲಗಳು ಅಳಿದುಹೋಗುತ್ತವೆ. ಈ ನಿಟ್ಟಿನಲ್ಲಿ ಪೋಷಕರು ನಮ್ಮ ಭಾಷೆಯ ಹಿರಿಮೆ, ದ್ರಾವಿಡ ಭಾಷೆಗಳಲ್ಲಿ ಕನ್ನಡಕ್ಕೆ ಧಕ್ಕಿರುವ ಶ್ರೇಷ್ಠತೆ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡಿಗರು ಮಾಡಿರುವ ಸಾಧನೆಗಳನ್ನು ಪರಿಚಯಿಸುವ ಕೆಲಸ ಮಾಡಬೇಕು ಹಾಗೂ ಕನ್ನಡ ಹಿತರಕ್ಷಕ ಸಂಘದ ಸಂಘವು ಸಾಧನೆಗಳನ್ನು ಶ್ಲಾಘಿಸಿದರು.

ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿದ ಗೌರವಿಸಲಾಯಿತು.
ನಂತರ ವಿವಿಧ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ, ಸಂಘದ ಗೌರವಾಧ್ಯಕ್ಷ ಕ.ಮ.ಹೇಮಯ್ಯಸ್ವಾಮಿ, ಅಧ್ಯಕ್ಷ ಬೂದಗುಂಪಿ ಅಂಬಣ್ಣ, ಕಾರ್ಯದರ್ಶಿ ಚ.ಯಂಕಪ್ಪ, ಕೋಶಾಧ್ಯಕ್ಷ ಮಾ.ಶ್ರೀನಿವಾಸ್, ಸಹ ಕಾರ್ಯದರ್ಶಿ ಕ.ಮೆಹಬೂಬ್, ನಿರ್ದೇಶಕ ಕ.ಯಂಕಾರೆಡ್ಡಿ, ಪ್ರಮುಖರಾದ ಎಸ್. ಡಿ. ಬಸವರಾಜ, ಅಂಬಿಗರ ಮಂಜುನಾಥ, ಎಲಿಗಾರ ವೆಂಕಟರೆಡ್ಡಿ, ಎಸ್. ಶ್ಯಾಮ್ ಸುಂದರ, ಅಶೋಕ್ ಕೂಕುನೂರ್, ಎಸ್. ರೋಷನ್ ಜಮೀರ್ ಇನ್ನಿತರರು ಉಪಸಿತರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!