
ಕಲಬುರಗಿ :ಕಾಳಗಿ ತಾಲೂಕಿನ ಹೊಡೆಬಿರನಳ್ಳಿ ಕ್ರಾಸ್ ಹತ್ತಿರ ಗಡಿಕೇಶ್ವರ್ ಸಮುದಾಯ ಆರೋಗ್ಯ ಕೇಂದ್ರ ಹೋರಾಟ ಸಮಿತಿ ವತಿಯಿಂದ ಸಮುದಾಯದ ಆರೋಗ್ಯ ಕೇಂದ್ರವನ್ನು ಡಿ ಗ್ರೇಡ್ ಕೆಳ ದರ್ಜೆಗೆ ಇಳಿಸಿರುವ ಆದೇಶವನ್ನು ಹಿಂಪಪಡೆಯಬೇಕು ಎಂದು ಹೊಡೆ ಬೀರನಳ್ಳಿ ಕ್ರಾಸ್ ಹತ್ತಿರ ಸುಮಾರು 6ಗಂಟೆಗಳ ಕಾಲ ಮೆನ್ ರಸ್ತೆ ತಡೆದು ಬೃಹತ್ ಮಟ್ಟದ ಪ್ರತಿಭಟನೆ ಮಾಡಿದರು. ಪ್ರತಿಭಟನೆ ವೇಳೆ ಅನೇಕರು ಮಾತನಾಡಿ ಮಾನ್ಯ ಜಿಲ್ಲಾ ಅಧಿಕಾರಿಗಳಿಗೆ ಕಾಳಗಿ ತಹಶೀಲ್ದಾರ್ ಪೃಥ್ವಿ ರಾಜ್ ಪಾಟೀಲ್ ಅವರ ಮುಖಾಂತರ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗಡಿಕೇಶ್ವರ್, ಕೇರಳ್ಳಿ, ತೇಗಲತಿಪ್ಪಿ, ಹಲಚೇರ, ರಾಯಕೊಡ, ಬೆನಕನಳ್ಳಿ, ಭೂತಪೂರ್, ಚಿಂತಪಳ್ಳಿ, ರುದುನೂರ್, ಭಂಟನಳ್ಳಿ ಹೀಗೆ ಹತ್ತು ಗ್ರಾಮದ ಪುರುಷರು, ಮಹಿಳೆಯರು, ಯುವಕರು ಉಪಸ್ಥಿತರಿದ್ದರು.
ವರದಿ ಚಂದ್ರಶೇಖರ್ ಆರ್. ಪಾಟೀಲ್



















