ಬೈಲಹೊಂಗಲ: ಕಳೆದ ಅಧಿವೇಶದ ಸಮಯದಲ್ಲಿ ಲಿಂಗಾಯತ ಪಂಚಮಸಾಲಿ 2ಎ ಮೀಸಲಾತಿಗಾಗಿ ಬೆಳಗಾವಿ ಸುವರ್ಣ ವಿಧಾನಸೌಧದ ಮುಂದೆ ಡಿ. 10 ರಂದು ನಡೆದ ಶಾಂತಿಯುತ ಹೋರಾಟದಲ್ಲಿ ಲಿಂಗಾಯತರ ಮೇಲೆ ಲಾಠಿ ಚಾರ್ಜ್ ಮಾಡಿಸಿದ ಸರ್ಕಾರದ ನಡೆ ಖಂಡಿಸಿ ಡಿ. 10 ಲಿಂಗಾಯತರ ಮೇಲೆ ನಡೆದ ದೌರ್ಜನ್ಯ ದಿನವಾಗಿ ಆಚರಿಸಲಾಗುತ್ತಿದ್ದು ಅಂದು ಲಿಂಗಾಯತ ಪಂಚಮಸಾಲಿಗಳು ಕಪ್ಪುಪಟ್ಟಿ ಹಾಕಿಕೊಂಡು ಕೈಯಲ್ಲಿ ವೀರರಾಣಿ ಚನ್ನಮ್ಮನವರ ಧ್ವಜ ಹಿಡಿದು ಮೌನ ಪಥ ಸಂಚಲನ ಬೆಳಗಾವಿ ನಗರದ ಗಾಂಧಿಭವನದಿಂದ ನಡೆಯಲಿದೆ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪ್ರಥಮ ಜಗದ್ಗುರು ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳು ನಗರದ ಗಣಾಚಾರಿ ಕಾಲೇಜು ಸಭಾಭವನಲ್ಲಿ ಸೇರಿದ ಸಭೆಯಲ್ಲಿ ಪಂಚಮಸಾಲಿಗಳು ಡಿ. 10ರಂದು ಹೆಚ್ಚಿನ ಸಂಖ್ಯೆಯಲ್ಲಿ ಈ ಲಿಂಗಾಯತ ಮೇಲಿನ ದೌರ್ಜನ್ಯ ಸಭೆಯಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿಶಾಸಕ ಡಾ.ವಿ.ಆಯ್.ಪಾಟೀಲ, ಪ್ರಾ. ಡಾ.ಸಿ.ಬಿ.ಗಣಾಚಾರಿ, ನ್ಯಾಯವಾದಿಗಳಾದ ಎಫ್.ಎಸ್.ಸಿದ್ದನಗೌಡರ, ಎಮ್.ವಿ.ಮತ್ತಿಕೊಪ್ಪ, ಚನ್ನಮ್ನವರ ಸ್ಮರಣೋತ್ಸವ ಸಮಿತಿ ಅಧ್ಯಕ್ಷ ಮುರೆಗೆಪ್ಪ ಗೂಂಡ್ಲೂರ, ಸೋ.ಸ.ಖಾ. ಉಪಾಧ್ಯಕ್ಷ ರಾಜು ಕುಡಸೊಮಣ್ಣವರ, ಶ್ರೀಶೈಲಯಡಳ್ಳಿ, ನಿಂಗಪ್ಪ ಚೌಡಣ್ಣವರ, ಆನಂದಗೌಡ ಪಾಟೀಲ, ಬಿ.ಬಿ.ಸಂಗನಗೌಡರ, ಸಿದ್ದಾರೋಢ ಹೊಂಡಪ್ಪನವರ, ಗ್ರಾ. ಪಂ. ಉಪಾಧ್ಯಕ್ಷ ಬಸವರಾಜ ಪೆಂಟೇದ, ಮಲ್ಲಿಕಾರ್ಜುನ ಕರಡಿಗುದ್ದಿ, ಮಡಿವಾಳಪ್ಪ ಕಮತಗಿ, ಮಹಾಂತೇಶ ಅಕ್ಕಿ ಸೇರಿದಂತೆ ಅನೇಕರು ಇದ್ದರು.
ವರದಿ ಮಂಜು. ಎಂ. ಚಿಕ್ಕಣ್ಣವರ



















