ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಗ್ರಾಮದ ಹಿರಿಯ ನಾಗರಿಕರಿಗಾಗಿ ಆರೋಗ್ಯ ತಪಾಸಣೆ ಶಿಬಿರ

ಕೊಪ್ಪಳ / ಕುಷ್ಟಗಿ :ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಯುಷ್ಯ ಇಲಾಖೆ, ಕಲಿಕೆ ಟಾಟಾ ಟ್ರಸ್ಟ್ ಮತ್ತು ಗ್ರಾಮ ಪಂಚಾಯತ್ ಕಾರ್ಯಾಲಯ ಕ್ಯಾದಿಗುಪ್ಪ ಇವರ ಸಹಯೋಗದಲ್ಲಿ
ಗ್ರಾಮದ ಹಿರಿಯ ನಾಗರಿಕರಿಗಾಗಿ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಕ್ಯಾದಿಗುಪ್ಪ ಗ್ರಾಮ ಪಂಚಾಯಿತಿ ಕಾರ್ಯಾಲಯ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು.


ಈ ಕಾರ್ಯಕ್ರಮಕ್ಕೆ ಅಧ್ಯಕ್ಷರು ಮತ್ತು ಉದ್ಘಾಟಕರಾಗಿ ಶ್ರೀ ಮುತ್ತಪ್ಪ ಕಳಕಪ್ಪ ಬೂದಿಹಾಳ ಭಾಗವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಶ್ರೀಮತಿ ವಿದ್ಯಾಶ್ರೀ,
ಆಯುಷ್ ಇಲಾಖೆಯಿಂದ ಶ್ರೀಮತಿ ದೀಪಾ ಉಲ್ಸೂರ್,
ಶ್ರೀಮತಿ ವಿಜಯಲಕ್ಷ್ಮಿ,
ಸಮುದಾಯ ಆರೋಗ್ಯ ಕೇಂದ್ರ ದೋಟಿಹಾಳ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು
ಶ್ರೀ ರವೀಂದ್ರ ನಂದಿಹಾಳ್,
ಸಿಎಚ್ಒ ದೇವರಾಜ್ ಪೂಜಾರಿ,
ಪಿ.ಎಚ್.ಸಿ.ಓ ಶ್ರೀಮತಿ ಭುವನೇಶ್ವರಿ ಬಳಿಗಾರ
ಫಾರ್ಮಸಿ ಅಧಿಕಾರಿ ಶ್ರೀ ಸುಧಾಕರ್,
ಐಸಿಡಿಸಿ ಆಪ್ತ ಸಮಾಲೋಚಕರು ಕುಷ್ಟಗಿ ಚನ್ನಬಸಪ್ಪ, ಹನುಮನಾಳ ಕಲಿಕೆ ಟಾಟಾ ಟ್ರಸ್ಟ್ ತಾಲೂಕು ಸಂಯೋಜಕರು ಶ್ರೀ ಸಿದ್ದಲಿಂಗ ರೆಡ್ಡಿ ,
ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರು ಶ್ರೀ ಅಲ್ಲಾಸಾಬ್ ನದಾಫ್ ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು ಮತ್ತು ಕಲಿಕೆ ಟಾಟಾ ಟ್ರಸ್ಟ್ ಪ್ರೇರಕರು ಶ್ರೀಮತಿ ವಿಜಯಲಕ್ಷ್ಮಿ ಕಂಬಾರ, ಶ್ರೀಮತಿ ರುಕ್ಮಿಣಿ, ಶ್ರೀ ಮುತ್ತಪ್ಪ ಗುಡಿಮನಿ ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಆಯುಷ್ ಆರೋಗ್ಯ ಅಧಿಕಾರಿಗಳು ಶ್ರೀಮತಿ ವಿಜಯಲಕ್ಷ್ಮಿ ಅವರು ಮಾತನಾಡಿ ಹಿರಿಯರ ಆರೋಗ್ಯ ಮತ್ತು ಯೋಗಕ್ಷೇಮದ ಕುರಿತು ಮತ್ತು ಕಲಿಕೆ ಟಾಟಾ ಟ್ರಸ್ಟ್ ಸಂಸ್ಥೆಯು ಮಹತ್ವದ ಕಾರ್ಯವನ್ನು ಮಾಡುತ್ತಿದೆ ಪ್ರತಿ ದಿನಾಲೂ ಹಿರಿಯರು ಗ್ರಾಮ ಹಿರಿಯರ ಕೇಂದ್ರಕ್ಕೆ ಹೋಗಿ ಹಿರಿಯರು ಸಂಸ್ಥೆ ನೀಡಿದ ಉಪಕರಣ ಬಳಕೆ ಮಾಡಿಕೊಂಡು ಚಟುವಟಿಕೆ ಮಾಡಿದರೆ ಹಿರಿಯರು ದಿನವಿಡೀ ಉತ್ಸಾಹದಿಂದ ಇರುವಿರಿ ಮತ್ತು ನಿಮ್ಮ ಸಮಸ್ಯೆಗಳಿಗೆ ಅಲ್ಪ ವಿರಾಮ ಸಿಕ್ಕಂತೆ ಆಗುತ್ತದೆ ಜೊತೆಗೆ ಈ ತರಹ ಆರೋಗ್ಯ ತಪಾಸಾಣೆ ಕಾರ್ಯಕ್ರಮ ಮಾಡಿ ಹಿರಿಯರ ಏಳಿಗೆಗೆ ಅನುಕೂಲ ಮಾಡಿಕೊಡುವರು ಎಂದು ಮಾಹಿತಿ ಹಂಚಿಕೊಂಡರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ವಿದ್ಯಾಶ್ರೀ ಅವರು ಮಾತನಾಡಿ ಹಿರಿಯರ ಆರೋಗ್ಯ ತಪಾಸಣೆ ಕಾರ್ಯಕ್ರಮ ಕುರಿತು ಬಹಳ ಸಂತೋಷವಾಗಿದೆ ಇದೇ ತರ ಬೇರೆ ಗ್ರಾಮಗಳಲ್ಲಿ ಕೂಡ ಮಾಡಬೇಕು, ನಮ್ಮ ಪಂಚಾಯಿತಿ ವತಿಯಿಂದ ಸದಾ ಬೆಂಬಲವಿರುತ್ತದೆ ಎಂದು ಹೇಳಿ, ಕಲಿಕೆ ಟಾಟಾ ಸಂಸ್ಥೆಯು ಮಾಡುತ್ತಿರುವ ಚಟುವಟಿಕೆಗಳ ಕುರಿತು ಶ್ಲಾಘನೆ ಮಾಡಿದರು.

ಶ್ರೀ ಸಿದ್ದಲಿಂಗ ರೆಡ್ಡಿ ಕಲಿಕೆ ಟಾಟಾ ಟ್ರಸ್ಟ್ ಸಂಯೋಜಕರು ಮಾತನಾಡಿ ಗ್ರಂಥಾಲಯ ಹರಿವು ಕೇಂದ್ರದಲ್ಲಿ ವಾರದಲ್ಲಿ ನಾಲ್ಕು ದಿನ ಚಟುವಟಿಕೆಗಳನ್ನು ಮಾಡಲಾಗುತ್ತಿದ್ದು ಹಿರಿಯರು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ಮತ್ತು ಕಲಿಕೆ ಟಾಟಾ ಟ್ರಸ್ಟ್ ಸಂಸ್ಥೆಯಿಂದ ನೀಡಿದ ಉಪಕರಣಗಳ ಬಗ್ಗೆ ಕಾಳಜಿಯಿಂದ ಅವುಗಳನ್ನು ಬಳಸಿಕೊಂಡು ಹಿರಿಯರ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಮನವಿ ಮಾಡಿಕೊಂಡರು.

ಐಸಿಡಿಸಿ ಆಪ್ತ ಸಮಾಲೋಚಕರು ಶ್ರೀ ಚನ್ನಬಸಪ್ಪ ಹನುಮನ ಮಾತನಾಡಿ ಹಿರಿಯರಿಗೆ ಎಚ್ಐವಿ ಮತ್ತು ಪಿಪಿ ಕುರಿತು ಮಾಹಿತಿ ಹಂಚಿಕೊಂಡರು.

  • ಕರುನಾಡ ಕಂದ ಪತ್ರಿಕೆ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!