
ಚಾಮರಾಜನಗರ /ಜಿಲ್ಲೆಯ ಹನೂರು ತಾಲೂಕಿನ ಮಣಗಹಳ್ಳಿ ಗ್ರಾಮದಲ್ಲಿ ಇಂದು ನಡೆಯಿತು
ಈ ಸಂಧರ್ಭದಲ್ಲಿ ಕನಕ ದಾಸ ಜಯಂತಿ ಜೊತೆಗೆ ಬೀರೇಶ್ವರ ಉತ್ಸವದ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ನಾನಾ ಭಾಗದ ಜನರು ಮೆರವಣಿಗೆಯಲ್ಲಿ ಪಾಲ್ಗೊಂಡರು.
ದೇವರಿಗೆ ವಿಶೇಷ ಅಲಂಕಾರ, ತೆಂಗಿನ ಕಾಯಿ ಒಡೆಯುವ ಪವಾಡ, ಬಸವನ ಪೂಜೆ, ಗಂಗಾಪೂಜೆ, ವೀರಗಾಸೆ ಕುಣಿತ, ಅಗ್ನಿಕೊಂಡ ಪ್ರವೇಶ, ಭಜನೆ ಮತ್ತು ಕೋಲಾಟಗಳು ನಡೆಯಿತು ಬೀದಿಗಳಲ್ಲಿ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು. ನೂರಾರು ಭಕ್ತರು ಪಾಲ್ಗೊಂಡಿದ್ದರು. ಮಹಾಮಂಗಳಾರಾತಿ, ಪ್ರಸಾದ ವಿನಿಯೋಗ ಮತ್ತು ಅನ್ನದಾಸೋಹವೂ ಆಯೋಜನೆಯಾಗಿತ್ತು. ಇದರ ಜೊತೆಗೆ ಕನಕ ದಾಸರ ಜಯಂತಿಯು ನಡೆಯಿತು. ದಾಸ ಶ್ರೇಷ್ಠ ಕನಕ ದಾಸರ ಭಾವಚಿತ್ರಕ್ಕೆ ಪುಷ್ಪಾಲಂಕಾರ ಮಾಡಿ ಊರಿನಲ್ಲಿ ದೀಪಾಲಂಕಾರ ಮಾಡಿದ್ದು ವಿಶೇಷವಾಗಿತ್ತು.
ನಂತರ ಹನೂರು ಕ್ಷತ್ರದ ಜನಪ್ರಿಯ ಶಾಸಕರಾದ ಎಂ ಆರ್ ಮಂಜುನಾಥ್ ಭಾಗಿಯಾಗಿ ಜಯಂತಿ ಹಾಗೂ ಉತ್ಸವ ಯಶಸ್ವಿಗೊಳಿಸಿದರು.
ಈ ಸಂದರ್ಭದಲ್ಲಿ ಚಂದ್ರಶೇಖರ್, ಕೆ ಮಹದೇವು ಮಣಗಳ್ಳಿ ರಾಜಶೇಖರ್,ತಮ್ಮಯ್ಯ ಗೌಡ, ಕುಮಾರ, ನಾಗೆಗೌಡ , ಕೆ. ಮಾದೇಗೌಡ ಹೆಚ್ ಶಿವರಾಮೇಗೌಡ ,ರಾಜು, ಕನಕ ಸೇವಾ ಬಳಗ ಮಣಗಳ್ಳಿ ಗುರುಮೂರ್ತಿ ಫೋಟೋಗ್ರಾಫರ್ ಮಣಗಹಳ್ಳಿ ಇನ್ನಿತರರು ಇದ್ದರು.
ವರದಿ :ಉಸ್ಮಾನ್ ಖಾನ್.



















