ಯಾದಗಿರಿ/ ಗುರುಮಠಕಲ್: ಕರ್ನಾಟಕ ಸರಕಾರ ತನ್ನ ಕ್ಯಾಬಿನೆಟ್ ಸಭೆಯಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ 2020ರ ಸೆಕ್ಷನ್ 8 (4) ಕ್ಕೆ ತಿದ್ದು ಪಡಿಯನ್ನು ಮಾಡುವ ಬಗ್ಗೆ, ವಿಧಾನಸಭೆಯ ಅಧಿವೇಶನದಲ್ಲಿ ನಿರ್ಣಯ ತೆಗೆದುಕೊಂಡಿದೆ ಎಂದು ಮಾಧ್ಯಮದ ಮೂಲಕ ತಿಳಿದು ಬಂದಿದ್ದು ಕರ್ನಾಟಕ ವಿಶ್ವ ಹಿಂದೂ ಪರಿಷದ್ ತೀವ್ರವಾಗಿ ವಿರೋಧಿಸುತ್ತಿದ್ದು ಈ ತಿದ್ದುಪಡಿಯನ್ನು ತಕ್ಷಣ ಕೈಬಿಡಬೇಕೆಂದು ರಾಜ್ಯ ಕಾರ್ಯದರ್ಶಿಗಳಿಗೆ ಗುರುಮಠಕಲ್ ತಹಸೀಲ್ದಾರ್ ಮುಖಾಂತರ ಇಂದು ಮನವಿ ನೀಡಲಾಯಿತು.
ರಾಜ್ಯದಲ್ಲಿ ಗೋವುಗಳು ಅತ್ಯಂತ ಹಿಂಸಾತ್ಮಕವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿರುವ ವಾಹನದ ಮಾಲಕರಿಗೆ ಕಡಿವಾಣ ಹಾಕಿ ಕಟುಕರಿಗೆ ಹಾಗೂ ಅಕ್ರಮ ಗೋ ಕಳ್ಳರಿಗೆ ಸುಲಭವಾಗಿ ಸಾಗಾಟ ಮಾಡಲು ಅನುಕೂಲವಾಗುವಂತೆ ವಶಪಡಿಸಿದ ವಾಹನ ತಾತ್ಕಾಲಿಕ ಹಸ್ತಾಂತರಕ್ಕೆ ಬ್ಯಾಂಕ್ ಗ್ಯಾರಂಟಿ ಕೊಡುವುದನ್ನು ಕೈ ಬಿಡಲು ಈ ಕಾಯ್ದೆಯನ್ನು ತಿದ್ದುಪಡಿ ಮಾಡದಂತೆ ಕ್ರಮ ಕೈಗೊಂಡು ರಾಜ್ಯದಲ್ಲಿ ಕಾನೂನು ರೀತಿಯಲ್ಲಿ ಮಾತ್ರ ಜಾನುವಾರುಗಳನ್ನು ಸಾಗಾಟ ಮಾಡುವಂತೆ ಮನವಿ ನೀಡಿದರು.
ಜಾನುವಾರು ಸಾಗಾಟದ ನಿಯಮಾವಳಿಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮತ್ತು ಹಿಂದೂಗಳಿಗೆ ಗೋವುಗಳ ಕುರಿತಾದ ಪೂಜ್ಯಾನಿಯ ಭಾವನೆಗಳಿಗೆ ದಕ್ಕೆಯಾಗದಂತೆ ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ತಾಲೂಕ ಗೌರವಧ್ಯಕ್ಷ ಸೂರ್ಯ ನಾರಾಯಣ ನೀರೆಟಿ, ಅಧ್ಯಕ್ಷ ಶ್ರೀನಿವಾಸ ಯಾದವ್, ನಗರ ಅಧ್ಯಕ್ಷ ಪಾಪಣ್ಣ ಅಳೆಗಾರ, ಮಹೇಶ್ ಬುದೂರ, ಅನಿಲ್ ಯದ್ಲಾಪುರ, ಲಕ್ಷ್ಮಪ್ಪ, ನವೀನ, ಸೂಗಪ್ಪ ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ



















