ಸುಮಾರು ಹತ್ತಿಪ್ಪತ್ತು ವರ್ಷದಿಂದ ವಿದ್ಯುತ್ ಸಂಪರ್ಕ ಕಾಣದ ಕುಟುಂಬಕ್ಕೆ ವಿದ್ಯುತ್ ಸಂಪರ್ಕ ಅಳವಡಿಸಿ ಮಾನವೀಯತೆ ಮೆರೆದ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕ ಎ ಆರ್ ಕೃಷ್ಣಮೂರ್ತಿ ಹಾಗೂ ಯುವ ಕಾಂಗ್ರೆಸ್ ಕಮಿಟಿ.
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕು ಮದ್ದೂರು ಗ್ರಾಮದ ಪುಟ್ಟಸಿದ್ದಮ್ಮ ಲೇಟ್ ಬಿನ್ ಬಸವಯ್ಯರವರ ಮನೆಯಲ್ಲಿ ಸುಮಾರು 20ವರ್ಷಗಳಿಂದಲ್ಲೂ ವಿದ್ಯುತ್ ದೀಪವಿಲ್ಲದೆ ಪೇಚಯ್ಯ ಬಸವಯ್ಯ ಅವರ ಮಗಳಾದ ಪುಟ್ಟಸಿದ್ದಮ್ಮ ಕೆಂಚಮ್ಮ ಇಬ್ಬರು ಹೆಣ್ಣುಮಕ್ಕಳು ಸೀಮೆಹೆಣ್ಣೆ ದೀಪಹಚ್ಚಿಕೊಂಡು ಜೀವನ ನೆಡೆಸುತ್ತಿದ್ದು ಇವತ್ತಿನ ಜೀವನಶೈಲಿಯಲ್ಲಿ ವಿದ್ಯುತ್ ಬಹು ಮುಖ್ಯವಾದ ಭಾಗವಾಗಿದ್ದು ಮನೆಯಲ್ಲಿ ಬೇಕೇಬೇಕಾದ ಒಂದು ವಸ್ತುವಾಗಿದೆ ಇದು ಇಲ್ಲದೆ ಹೇಗೆ ಇದ್ದರೆ ಎಂದು ಊರಿನ ಕಾರ್ಯಕರ್ತರಿಂದ ಶಿವರಾಜ್ ಸ್ನೇಹಿತರು ಮನಗೊಂಡು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ ಆರ್ ಕೃಷ್ಣ ಮೂರ್ತಿ ರವರಿಗೆ ಮಾಹಿತಿ ನೀಡಿ ಅವರಿದ ಹಾಗೂ ಯೂಥ್ ಕಾಂಗ್ರೆಸ್ ವತಿಯಿಂದ ವಿದ್ಯುತ್ ಸೌಲಭ್ಯವನ್ನು ಕಲ್ಪಿಸಿಕೊಟ್ಟಿದ್ದಾರೆ.
ತಾಲ್ಲೂಕು ಗ್ಯಾರಂಟಿ ಸದ್ಯಸರಾದ ಶಿವರಾಜ್ ಹೆಚ್ ಎಂ ರವರು ಹಾಗೂ ಯೂಥ್ ಕಾಂಗ್ರೆಸ್ ಅವರು ಮತ್ತು ಸ್ನೇಹಿತರಾದ ಕುಮಾರಸ್ವಾಮಿ ನವೀನ ಸಂದೀಪ ಗ್ರಾಮದ ಮುಖಂಡರು ಜೊತೆಗೂಡಿ ಶಾಸಕರ ಮಾತಿನಂತೆ ಅವರಿಗೆ ಭಾಗ್ಯ ಜ್ಯೋತಿ ವಿದ್ಯುತ್ ಸೌಲಭ್ಯವನ್ನು ಕಲ್ಪಿಸಿಕೊಟ್ಟಿದ್ದಾರೆ.
ಪುಟ್ಟ ಸಿದ್ದಮ್ಮ ಕೆಂಚಮ್ಮ ಮಾತನಾಡಿ ನಾವು ಸುಮಾರು 20-25 ವರ್ಷಗಳ ಹಿಂದಿನಿಂದಲೂ ಕರೆಂಟ್ ಇಲ್ಲದೆ ಜೀವನ ನಡೆಸುತ್ತಿದ್ದೆವು ನಮ್ಮ ಗ್ರಾಮದ ಶಿವರಾಜು ಹಾಗೂ ಅವರ ಸ್ನೇಹಿತರು ನಮ್ಮ ಬಗ್ಗೆ ಶಾಸಕರಿಗೆ ತಿಳಿಸಿ ಹಾಗೂ ಯೂಥ್ ಕಾಂಗ್ರೆಸ್ ವತಿಯಿಂದ ನಮ್ಮ ಮನೆಗೆ ಕರೆಂಟ್ ಅನ್ನು ಒದಗಿಸಿ ಕೊಟ್ಟಿದ್ದಾರೆ ನಾನು ಅವರಿಗೆ ಚಿರಋಣಿಯಾಗಿರುತ್ತೇನೆ ನಾವು ಕರೆಂಟ್ ಹಾಕಿಸಿಕೊಳ್ಳಲು ತುಂಬಾ ಕಷ್ಟಗಳನ್ನು ಅನುಭವಿಸಿದ್ದೇವೆ ಒಂದು ಬಡವ ಕುಟುಂಬ ಆಗಿರುವುದರಿಂದ ನಾವು ಹಿಂದೆ ಯಾವುದೇ ಕರೆಂಟನ್ನು ಹಾಕಿಕೊಂಡಿಲ್ಲ ನಮಗೆ ದೇವರ ತರಹ ನಮಗೆ ಬೆಳಕನ್ನು ನೀಡಿದ್ದಾರೆ ಶಾಸಕರು ಎಂದು ತಿಳಿಸಿದರು.
ವರದಿ ಉಸ್ಮಾನ್ ಖಾನ್



















