ಲ್
ಬೀದರ್ : ಬೀದರ್ ನಗರದ ಹೊರ ವಲಯದಲ್ಲಿರುವ ಶ್ರೀ ಜಗನ್ನಾಥ ದೇವಸ್ಥಾನದ ಹತ್ತಿರವಿರುವ ಅಶೋದೇವ್ ರೆಸಿಡೆನ್ಸಿಯಲ್ಲಿ ಭಾರತೀಯ ಯುವ ಯೋಧರು ಸೀಸನ್ 1ರ ರಿಯಾಲಿಟಿ ಶೋ ಬೀದರ ಆಡಿಷನ್ ನಡೆಯಿತು.
ಈ ಆಡಿಷನ್ ನಲ್ಲಿ ಯುವಕ ಹಾಗೂ ಯುವತಿಯರ ಪ್ರತಿಭೆ ಹಾಗೂ ಕಾರ್ಯ ಆಧಾರದ ಮೇಲೆ ಮತ್ತು ಬದುಕುಳಿಯುವಿಕೆಯ ವಾಸ್ತವಿಕತೆಯ ಪ್ರದರ್ಶನವನ್ನು ಸಾಬೀತು ಪಡಿಸಿದರು.
ಈ ಆಡಿಷನ್‌ಗಳಲ್ಲಿ ಬಹು ಸಂಖ್ಯೆಯಲ್ಲಿ ಯುವಕರು ಯುವತಿಯರು ಭಾಗವಹಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಆಯೋಜಕರಾದ ಶಶಿ ಕೋಹಲಿ ರವರು ಮಾತನಾಡಿದ ಇವರು ಭಾರತೀಯ ಯುವ ಯೋಧರು
ಸೀಸನ್ 1 ಮುಂದಿನ ಜನವರಿಯಲ್ಲಿ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಆಡಿಷನ್ ಪ್ರದರ್ಶನದಲ್ಲಿ ಯುವಕ ಹಾಗೂ ಯುವಕಿಯರ ವಯಸ್ಸು 18 ವರ್ಷ ಮೇಲ್ಪಟ್ಟಿರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸವಿತಾ ರಾಠೋಡ್, ಮತ್ತು ಸಂತೋಷ್ ಕೊಹ್ಲಿ ಹಾಗೂ ಅವರ ಸಂಗಡಿಗರು ಭಾಗಿಯಾಗಿದ್ದರು.
ವರದಿ : ರೋಹನ್ ವಾಘಮಾರೆ



















