ಯಾದಗಿರಿ : ಶಹಾಪುರ ತಾಲೂಕು ಪಂಚಾಯಿತಿ ಕಾರ್ಯಾಲಯ ಕಟ್ಟಡದ ಹೊರಭಾಗದ ಸ್ವಚ್ಛವಾಗಿ ಇಟ್ಟುಕೊಳ್ಳದೆ ಮತ್ತು ಅಂಗವಿಕಲರ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳು.
ತಾಲೂಕ ಕಾರ್ಯನಿರ್ವಾಹಕ ಅಧಿಕಾರಿ ಕಚೇರಿ ಎದುರುಗಡೆ ಗಿಡ ಗಂಟೆಗಳು ಬೆಳೆದು ನಿಂತಿವೆ, ಕಚೇರಿಯ ಮುಂದೆ ಬೋರ್ಡ್ ಹಾಕದ ಈ ಕಚೇರಿಗೆ ಸ್ವಂತ ಕಟ್ಟಡ, ಕುರ್ಚಿಗಳು ಇರುವುದಿಲ್ಲ, ಯಾವುದೇ ರೀತಿ ಮೂಲಭೂತ ಸೌಕರ್ಯ ಇರದ ಕಾರಣ ಕೂಡಲೇ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಮತ್ತು ವಿಕಲಚೇತನರ ಕಾಯಿದೆ 2016 ಉಲ್ಲಂಘನೆಯನ್ನು ಕೂಡಾ ಮಾಡಿರುತ್ತಾರೆ ಅದನ್ನು ಕೂಡಲೆ ಸರಿಪಡಿಸಿ ಅಂಗವಿಕಲರಿಗೆ ಅವರ ಕಚೇರಿಯನ್ನು ಸರಿಯಾದ ರೀತಿಯಲ್ಲಿ ಕಾಪಾಡಿಕೊಂಡು ಹೋಗಲು ಸೂಚಿಸಬೇಕು ಮತ್ತು ಎಲ್ಲಾ ರೀತಿಯ ರಾಂಪುನ್ನು ಮಾಡಬೇಕು, ಕುಡಿಯುವ ನೀರಿನ, ಶೌಚಾಲಯದ ವ್ಯವಸ್ಥೆ ಮತ್ತು ಮೂಲಭೂತ ಸೌಕರ್ಯ ಒದಗಿಸದೆ ಇರುವ ಕಾರಣ ಚೇತನ್ ಕುಮಾರ್ ಹಿರೇಮಠ್ ವಕೀಲರು ಮತ್ತು ಸಾಮಾಜಿಕ ಕಾರ್ಯಕರ್ತರು ಇವರು ಉಪನಿರ್ದೇಶಕರು ಯಾದಗಿರಿ ಜಿಲ್ಲಾ ಮಹಿಳಾ ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಕಲ್ಯಾಣ ಇಲಾಖೆ ಯಾದಗಿರಿ ಅವರಿಗೆ ಮಾಹಿತಿಯನ್ನು ನೀಡಿದರೂ ಯಾವುದೇ ಪ್ರಯೋಜನ ಆಗಿರುವುದಿಲ್ಲ. ಆದ ಕಾರಣ ಮಾನ್ಯ ಜಿಲ್ಲಾಧಿಕಾರಿಗಳಿಗೂ ಪ್ರತಿಯನ್ನು ನೀಡಿ, ಯಾದಗಿರಿ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿಲ್ಲಾ ಪಂಚಾಯಿತಿ ಯಾದಗಿರಿ ಅವರಿಗೂ ಕೂಡ ಮಾಹಿತಿ ನೀಡಲಾಗಿದೆ. ಆದರೂ ಕೂಡ ಇಲ್ಲಿವರೆಗೂ ಯಾವುದೇ ಒಂದು ಕೆಲಸವನ್ನು ಮಾಡದೆ ಇರುವ ಕಾರಣ ಕಲಬುರ್ಗಿ ವಿಭಾಗದ ಪ್ರಾದೇಶಿಕ ಆಯುಕ್ತರ ಕಚೇರಿಗೆ ಮತ್ತು ಇಲಾಖೆ ಸಚಿವರಿಗೂ ಪ್ರತಿಗಳನ್ನು ಕಳಿಸಲಾಗಿದೆ ಎಂದು ಚೇತನ್ ಕುಮಾರ್ ಹಿರೇಮಠ ವಕೀಲರು ಮತ್ತು ಸಾಮಾಜಿಕ ಕಾರ್ಯಕರ್ತರು ಶಹಾಪುರ ಇವರು ಪತ್ರಿಕಾ ಪ್ರಕಟಣೆ ನೀಡಿರುತ್ತಾರೆ.
- ಕರುನಾಡ ಕಂದ



















