ಯಾದಗಿರಿ/ಗುರುಮಠಕಲ್ : ಕರ್ನಾಟಕ ರಾಜ್ಯ ವಿಕಲಚೇತನರ ಆರ್ಡಿಪಿ ಟಾಸ್ಕ್ ಫೋರ್ಸ್ನ ನೇತೃತ್ವದಲ್ಲಿ “ವಿಕಲಚೇತನರ ರಾಜ್ಯ ಮಟ್ಟದ ಹೋರಾಟ”ದ ಭಾಗವಾಗಿ ಆರೈಕೆದಾರ ಹಾಗೂ ವಿಕಲಚೇತನರ ಪ್ರಮುಖ ಹಕ್ಕೊತ್ತಾಯ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಡಿ.14 ರಂದು ಗುರುಮಠಕಲ್ ತಾಲೂಕಿನ ಆರ್. ಪಿ. ಡಿ ಟಾಸ್ಕ್ ಪೋರ್ಸ್ ಸದಸ್ಯರು ಪಟ್ಟಣದ ಶ್ರೀ ಮಹಾತ್ಮಾ ಬಸವೇಶ್ವರ ವೃತ್ತದಲ್ಲಿ ಮಹಾತ್ಮಾ ಬಸವೇಶ್ವರ ಭಾವಚಿತ್ರ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಬೆಳಗಾವಿಗೆ ಪ್ರಯಾಣ ಬೆಳೆಸಿದರು.
ವಿಕಲಚೇತನರು ಹಾಗೂ ಅವರ ಆರೈಕೆದಾರರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ವಿವಿಧ ಕಲ್ಯಾಣ ಯೋಜನೆ, ಹಕ್ಕೊತ್ತಾಯಗಳ ಬೇಡಿಕೆಗಾಗಿ ಪ್ರತಿಭಟನೆ ಜರುಗಲಿದೆ.
ಬೆಳಗಾವಿ ಚಲೋ ಪ್ರತಿಭಟನೆಗೆ ಹೊರಟಿರುವ ಅರ್.ಪಿ.ಡಿ ತಾಲೂಕ ಅಧ್ಯಕ್ಷ ಸಿದ್ದನ ಗೌಡ ನಜರಾಪುರ ಸದಸ್ಯರಾದ ಹಣಮಂತ, ರಾಜಲಿಂಗಪ್ಪ ಸಜ್ಜನ, ಶರಣಪ್ಪ, ರಾಮುಲು ಎಂ.ಟಿ ಪಲ್ಲಿ, ಗೋಪಾಲ ರೆಡ್ಡಿ ಸಾಂಬ್ರಾ, ಮಲ್ಲೇಶ್ ಸಾಂಬ್ರಾ ಇವರಿಗೆ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರಾದ ಶಿವಾನಂದ ಬೂದಿ, ತಾಲೂಕ ದಲಿತ ಸಂಘರ್ಷ ಸಮಿತಿ ಅಧ್ಯಕ್ಷರಾದ ಲಾಲಪ್ಪ ತಲಾರಿ ರಾಜ್ಯ ಸರಕಾರ ವಿಕಲಚೇತನರ ಬೇಡಿಕೆಗಳನ್ನು ಆದಷ್ಟು ಬೇಗ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಿ ವಿವಿಧ ಬೇಡಿಕೆ ಈಡೇರಲಿ ಎಂದು ಶುಭ ಕೋರಿದರು.
ವರದಿ: ಜಗದೀಶ್ ಕುಮಾರ್ ಭೂಮಾ



















