
ಬೆಂಗಳೂರಿನಿಂದ ಶಿವಮೊಗ್ಗ ಮಾರ್ಗವಾಗಿ ಗೋಕರ್ಣಕ್ಕೆ ಬರುತಿದ್ದ ಸೀಬರ್ಡ ಬಸ್ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಸಮೀಪದ ಗೊರ್ಲತ್ತು ಗ್ರಾಮದ ರಾಷ್ಟ್ರೀಯ ಹೆದ್ದಾರಿ 48 ರ ಬಳಿ ಟ್ಯಾಂಕರ್ ಗುದ್ದಿ ಅಪಘಾತಗೊಂಡಿದ್ದು ,ಅಪಘಾತದ ತೀವ್ರತೆಗೆ ಸೀಬರ್ಡ ಬಸ್ ಸಂಪೂರ್ಣ ಸುಟ್ಟುಹೋಗಿದ್ದು 17 ಜನ ಸಜೀವ ದಹನವಾಗಿದ್ದಾರೆ.

ಅಪಘಾತದಲ್ಲಿ ಮೃತಪಟ್ಟವರ ಮೃತದೇಹಗಳನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯ ಶವಗಾರದ ಬಳಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.
ಅಪಘಾತ ಹೇಗಾಗಿದ್ದು ?
ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ 36 ಸೀಟುಗಳ ಖಾಸಗಿ ಬಸ್ (KA 01 AE 5217) ಹಾಗೂ ಎದುರುಗಡೆಯಿಂದ ಬಂದ ಕಂಟೇನರ್ ಲಾರಿ (HR 38 AB 3455) ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.
ರಾತ್ರಿ ಸುಮಾರು 1.30 ರಿಂದ 2 ಗಂಟೆ ವೇಳೆಗೆ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಈ ದುರ್ಘಟನೆ ನಡೆದಿದೆ. ಲಾರಿ ಚಾಲಕ ಡಿವೈಡರ್ ದಾಟಿ ಎದುರುಗಡೆಗೆ ಬಂದ ಪರಿಣಾಮ ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಬಸ್‌ನ ಡೀಸಲ್ ಟ್ಯಾಂಕ್‌ಗೆ ಬೆಂಕಿ ತಗುಲಿ ಬಸ್ ಸಂಪೂರ್ಣವಾಗಿ ಹೊತ್ತಿ ಉರಿದಿದೆ.ಬಸ್‌ನಲ್ಲಿ ಒಟ್ಟು 29 ರಿಂದ 32 ಜನರು ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಇದುವರೆಗೆ 21 ಜನರನ್ನು ಪತ್ತೆಹಚ್ಚಿ ಆಸ್ಪತ್ರೆಗೆ ದಾಖಲಿಸಲಾಗಿದೆ6 ಜನರು ಗಾಯಗೊಂಡಿದ್ದಾರೆ ಇನ್ನೂ 17 ಜನರ ಸಾವಾಗಿದ್ದು – ಪೊಲೀಸ್ ಶೋಧ ಕಾರ್ಯ ಮುಂದುವರಿದಿದೆ.
ಲಾರಿ ಚಾಲಕ ಸಾವು
ಅಪಘಾತ ಪಡಿಸಿದ ಕಂಟೇನರ್ ಲಾರಿ ಚಾಲಕಕುಲದೀಪ್ ಯಾದವ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಹಿರಿಯೂರು, ಶಿರಾ ಮತ್ತು ತುಮಕೂರು ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.ಮೃತದೇಹಗಳನ್ನು ಮಾತ್ರ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಸಾಗಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ
ಎಸ್‌ಪಿ ಪ್ರತಿಕ್ರಿಯೆ
ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರು ಮಾತನಾಡಿ,“ಲಾರಿ ಚಾಲಕನ ಅಜಾಗರೂಕತೆ ಹಾಗೂ ನಿದ್ದೆ ಮಂಪರಿನಿಂದಾಗಿ ಈ ಅಪಘಾತ ಸಂಭವಿಸಿರುವ ಸಾಧ್ಯತೆ ಇದೆ. ಡಿವೈಡರ್ ದಾಟಿ ಬಂದು ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ” ಎಂದು ಹೇಳಿದ್ದಾರೆ.
ಬಸ್ ಕ್ಲೀನರ್ ಸಾಧಿಕ್ ಹೇಳಿದ್ದೇನು?
ಅಪಘಾತದ ಭಯಾನಕ ಕ್ಷಣಗಳನ್ನು ವಿವರಿಸಿದ ಬಸ್ ಕ್ಲೀನರ್ ಸಾಧಿಕ್, ನಾನು ಮಲಗಿದ್ದೆ. ಏಕಾಏಕಿ ಭಾರೀ ಡಿಕ್ಕಿಯ ರಭಸಕ್ಕೆ ಬಸ್‌ನಿಂದ ಹೊರ ಬಿದ್ದೆ. ನೋಡ ನೋಡುತ್ತಿದ್ದಂತೆ ಬಸ್ ಧಗಧಗನೆ ಹೊತ್ತಿ ಉರಿಯಿತು. ಡಿವೇಡರ್ ದಾಟಿ ಬಂದ ಟ್ಯಾಂಕರ್ ಏಕಾಏಕಿ ಬಸ್ ನ ಡಿಸೆಲ್ ಟ್ಯಾಂಕ್ ಗೆ ಗುದ್ದಿದೆ. ನಂತರ ಬೆಂಕಿ ಹೊತ್ತಿಕೊಂಡಿದೆ. ಸ್ಥಳೀಯರು ಸಹಾಯಕ್ಕೆ ಬಂದರು. ಡ್ರೈವರ್‌ಗೂ ಗಂಭೀರ ಗಾಯಗಳಾಗಿವೆ. ಸಾಕಷ್ಟು ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
- ಕರುನಾಡ ಕಂದ ಪತ್ರಿಕೆ.



















