ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ದಿ.28 ರಂದು ಪಂಚಾಕ್ಷರಿ ಗವಾಯಿಗಳ ಪ್ರತಿಷ್ಠಾನದ ಉದ್ಘಾಟನೆ ಹಾಗೂ”ಸಂಗೀತೋತ್ಸವ” -ಶರಣಬಸವ ಶಾಸ್ತ್ರಿಗಳು

ಬಾಗಲಕೋಟೆ/ಮುಧೋಳ :ಬಾಗಲಕೋಟೆಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬರಲು ಸಿದ್ಧವಾಗಿರುವ ಗಾನಯೋಗಿ ಪಂಡಿತ್ ಪಂಚಾಕ್ಷರಿ ಗವಾಯಿಗಳ ಪ್ರತಿಷ್ಠಾನವು ಇದೇ ರವಿವಾರ ದಿನಾಂಕ 28ರಂದು ಸಂಭ್ರಮದಿಂದ ಸಾಂಸ್ಕೃತಿಕ ಸೇವೆಗೆ ಲೋಕಾರ್ಪಣೆಗೊಳ್ಳಲಿದೆ ಎಂದು ಪ್ರತಿಷ್ಠಾನದ ಉಪಾಧ್ಯಕ್ಷ ಶರಣಬಸವ ಶಾಸ್ತ್ರಿಗಳು ಹೇಳಿದರು. ಅವರು ಪತ್ರಿಕೆಯೊಂದಿಗೆ ಮಾತನಾಡಿ ಬೆಳಿಗ್ಗೆ 8.30 ಕ್ಕೆ ವಿದ್ಯಾಗಿರಿಯ ಇಂಜಿನಿಯರಿಂಗ್ ಕಾಲೇಜು ಕ್ರಾಸ್ ದಿಂದ ಸಾಯಿ ಮಂದಿರದವರೆಗೆ ಡೊಳ್ಳಿನ ವಾಲಗ, ಕರಡಿ ವಾದನ, ಹಲಗೆವಾದನ, ಭಜನಾ ಮಂಡಳಿ ಮುಂತಾದ ಕಲಾವಿದರ ತಂಡದಿಂದ ವೈಭವದೊಂದಿಗೆ ಪಂ.ಪಂಚಾಕ್ಷರಿ ಗವಾಯಿಗಳ .ಪಂ.ಪುಟ್ಟರಾಜ ಗವಾಯಿಗಳ ಹಾನಗಲ್ ಕುಮಾರೇಶ್ವರರ ಭಾವ ಭಾವಚಿತ್ರದ ಉತ್ಸವ ಜರುಗುವುದು. 10 ಗಂಟೆಗೆ ಗುಳೇದಗುಡ್ಡ ಪೂಜ್ಯರಾದ ಒಪ್ಪತ್ತೇಶ್ವರ ಶ್ರೀಗಳ ಬಿಲ್ ಕೆರೂರದ ಸಿದ್ದಲಿಂಗ ಶಿವಾಚಾರ್ಯರ ಸಿದ್ದನಕೊಳ್ಳದ ಶಿವಾನಂದ ಮಹಾಸ್ವಾಮಿಗಳ.ರೋಣದ ಡಾ.ವಿಶ್ವನಾಥ ಶ್ರೀಗಳು.ಗುಳೇದಗುಡ್ಡದ ಅಭಿನವ ಕಾಡಸಿದ್ದೇಶ್ವರ ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ . ಪ್ರತಿಷ್ಠಾನದ ಅಧ್ಯಕ್ಷ ಶ್ರೀಶೈಲ ಕರಿಶಂಕರಿ ಅವರ ಘನ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಸಮಾರಂಭ ಜರುಗುವುದು. ಮುಖ್ಯ ಅತಿಥಿಗಳಾಗಿ ಕುಮಾರೇಶ್ವರ ವಿಶ್ವಧರ್ಮ ಶಾಂತಾಶ್ರಮದ ಅಧ್ಯಕ್ಷ ಜಿ. ಎಂ ಪಾಟೀಲ್ ಪಾಲ್ಗೊಳ್ಳುವರು.ಗದಗದ ಪಂ. ಕಲ್ಲಿನಾಥ ಶಾಸ್ತ್ರಿಗಳು ವಿಶೇಷ ಉಪನ್ಯಾಸವನ್ನು ನೀಡುವರು. ನಂತರ ಪಂಡಿತ್ ಬಸವರಾಜ್ ಭಜಂತ್ರಿ ಅಮರಾವತಿ ಇವರಿಂದ ಶಹನಾಯಿ ವಾದನ. ಪಂ.ಸಿದ್ಧರಾಮಯ್ಯ ಮಠಪತಿ [ಬಾಗಲಕೋಟೆ].ಪಂಡಿತ್ ರವೀಂದ್ರ ಸೋರಗಾಂವಿ[ಬೆಂಗಳೂರು ]ಪಂಡಿತ್ ಸದಾಶಿವ ಐಹೊಳೆ[ಧಾರಾವಾಡ]ಪಂಡಿತ್ ಜೈ ನಿರಂಜನ[ಧಾರಾವಾಡ] ಪಂ.ಅಶೋಕ ಬಡಿಗೇರ.ಬಾಗಲಕೋಟೆ. ಮುಂತಾದ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಜರುಗುವುದು.
ಖ್ಯಾತ ತಬಲಾ ವಾದಕರು.ಹಾರ್ಮೊನಿಯಂ ವಾದಕರು ಪಾಲ್ಗೊಳ್ಳುವರು. ಈ ಸಮಾರಂಭದಲ್ಲಿ ಸಾಹಿತಿಗಳು.ಪ್ರವಚನಕಾರರು.ಸುಗಮ ಸಂಗೀತ ಕಲಾವಿದರು. ಜನಪದ ಕಲಾವಿದರು.ರಂಗಭೂಮಿ ಕಲಾವಿದರು.ಡೊಳ್ಳು ಕಲಾವಿದರು.ಕರಡಿ ವಾದನ.ಹಲಗೆ ವಾದನ ಭಜನಾ ಮಂಡಳಿಗಳು ‌ಮಹಿಳಾ ಭಜನಾ ಮಂಡಳಿ ಸೇರಿದಂತೆ ಅನೇಕ ಕಲಾವಿದರು ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಸಾಧಕರನ್ನು ಸನ್ಮಾನಿಸಲಾಗುವದು ಎಂದ ಅವರು ಸಕಾಲಕ್ಕೆ ಬಂದು ಸೇವೆ ಮಾಡಿದ ಕಲಾವಿದರಿಗೆ ಕಲಾತಂಡಗಳಿಗೆ ಪ್ರಶಸ್ತಿ ಪತ್ರವನ್ನು ನೀಡಲಾಗುವುದು ಎಂದರು. ಕಾರ್ಯದರ್ಶಿ ಎಲ್ ಶಂಕರ. ಉಪಸ್ಥಿತರಿದ್ದರು.

  • ಕರುನಾಡ ಕಂದ ಪತ್ರಿಕೆ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!