ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬಾಂಗ್ಲಾದೇಶದಲ್ಲಿ ಹಿಂದೂ ಯುವಕನ ಮೇಲೆ ನಡೆದ ಅಮಾನವೀಯ ಹತ್ಯೆ ಕೃತ್ಯ ಖಂಡಿಸಿ ಬಜರಂಗದಳ ವತಿಯಿಂದ ಪ್ರತಿಭಟನೆ.

ಬೀದರ್ / ಬಸವಕಲ್ಯಾಣ: ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಪ. ಪೂ. ಡಾ||
ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರರ ನೇತೃತ್ವದಲ್ಲಿ ನಗರದ ಅಂಬೇಡ್ಕರ ವೃತ್ತದಲ್ಲಿ ಇತ್ತೀಚಿಗೆ ಬಾಂಗ್ಲಾದೇಶದಲ್ಲಿ ಹಿಂದೂ ಯುವಕನನ್ನು ಉದ್ದೇಶಪೂರ್ವಕ, ಹೀನಾಯವಾಗಿ ಸದೆಬಡೆದು, ಬೆತ್ತಲೆಗೊಳಿಸಿ, ಎಳೆದಾಡಿ, ಎಳೆದೊಯ್ದು ನೇತುಹಾಕಿ ಮರಕ್ಕೆ ಗಲ್ಲಿಗೇರಿಸಿ ಅತ್ಯಂತ ಕ್ರೂರವಾಗಿ ಅಮಾನವೀಯವಾಗಿ ಅಮಾಯಕ ಹಿಂದೂ ಯುವಕನನ್ನು ಹತ್ಯೆ ಗೈದಿರುವುದನ್ನು ಖಂಡಿಸಿ ಬಾಂಗ್ಲಾದೇಶದ ಮತ್ತು ಅಲ್ಲಿನ ಅಧ್ಯಕ್ಷ ಪ್ರಧಾನಿಗಳ, ವಿರುದ್ಧ ಧಿಕ್ಕಾರ ಕೂಗುತ್ತಾ ಘೋಷಗಳೊಂದಿಗೆ ಜೈ ಶ್ರೀರಾಮ ಎಂದು ನೂರಾರು ಕಾರ್ಯಕರ್ತರು ಹಿಂದೂ ಯುವಕರು ಆರ್ಯ ಸಮಾಜದ ಪ್ರಮುಖರು, ಸುವರ್ಣಕಾರರ ಸಂಘದ ಪದಾಧಿಕಾರಿಗಳು, ಸದಸ್ಯರು, ಹಾಗೂ ಅಕ್ಕ ಪಕ್ಕದ ಅಂಗಡಿ ಮುಂಗಟ್ಟುಗಳ ಮಾಲಿಕರು ಎಲ್ಲರೂ ಸೇರಿ ಬೃಹತ್ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗವಿಮಠದ ಪ. ಪೂ. ಡಾ|| ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರರು ಇಡೀ ಜಗತ್ತಿಗೆ ಶಾಂತಿ ಸಂದೇಶ ನೀಡಿದ ದೇಶ ನನ್ನದು. ಬಾಂಗ್ಲಾದೇಶದ ಹಿಂದೂ ಯುವಕನ ಹತ್ಯೆ ಕ್ರೂರವಾಗಿದ್ದು, ಅದನ್ನು ಖಂಡಿಸಿ ಈ ಕೃತ್ಯವೆಸಗಿದ ಆರೋಪಿಗಳಿಗೆ ಅದೇ ಸ್ಥಳದಲ್ಲಿ ಬಹಿರಂಗವಾಗಿ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕೆಂದು ಕೇಂದ್ರ ಸರ್ಕಾರದ ವಿದೇಶಿ ಮುಖ್ಯಸ್ಥರಿಗೆ ಈ ಮೂಲಕ ವಿನಂತಿಸಲಾಯಿತು.

ಬಜರಂಗದಳದ ತಾಲೂಕ ಅಧ್ಯಕ್ಷ ರವಿ ನಾವದಗೇಕರ ಮಾತನಾಡಿ ಜಾಗತಿಕ ಮಟ್ಟದಲ್ಲಿ ಪದೇ ಪದೇ ಹಿಂದೂಗಳನ್ನು ಕೆಣಕುತ್ತಾ, ದಾಳಿ ಖಂಡಿಸಿ, ಶಾಂತಿ ಸಾರಿದ ಬುದ್ಧನ ದೇಶ ಭಾರತ. ಭಾವೈಕತೆ ಸಾರಾ ನೀಡಿದ ದೇಶ ಭಾರತ ಇದು ನನ್ನ ದೇಶ, ನಮಗೆ ಶಾಂತಿಯು ಗೊತ್ತು ಕ್ರಾಂತಿಯೂ ಗೊತ್ತು, ಹಿಂದೂ ಪಲಾಯನವಲ್ಲ ಪರಾಕ್ರಮಿ ಎಂಬುವುದು ನಮ್ಮ ಭಿಕ್ಷೆಯ ರಾಷ್ಟ್ರ ಬಾಂಗ್ಲಾದೇಶಕ್ಕೆ ಮರೆತು ಹೋಗಿದೆ. ಅಖಂಡ ಭಾರತ ಆಳಿದ ಹಿಂದೂ ಸಾಮ್ರಾಜ್ಯದ ಇತಿಹಾಸ ಮರುಕಳಿಸಬಹುದು ಎಚ್ಚರಿಕೆ, ಈ ಹೀನಾಯ ಕೃತ ಎಸೆದ ಅಪರಾಧಿಗಳಿಗೆ ಬಹಿರಂಗವಾಗಿ ಗಲ್ಲಿಗೇರಿಸಿ ದೀಪು ಚಂದ್ರ ಆತ್ಮಕ್ಕೆ ನ್ಯಾಯ ದೊರಕಿಸಬೇಕು ಇಲ್ಲವಾದಲ್ಲಿ ನಮ್ಮ ಭಾರತದ ರಾಜ್ಯವಾದ ಅಸ್ಸಾಂನ ಕಿರು ಬೆರಳಿಗೂ ಸಮಾನ ಇಲ್ಲ ಈ ನಮ್ಮ ಭಿಕ್ಷೆಯ ರಾಷ್ಟ್ರ ಬಾಂಗ್ಲಾವೆಂದು ಆಕ್ರೋಶ ವ್ಯಕ್ತ ಪಡಿಸಿದರು.

ಶಾಸಕರಾದ ಶರಣು ಸಲಗರ ಮಾತನಾಡಿ ಬಾಂಗ್ಲಾ ದೇಶದಲ್ಲಿ ನಡೆದ ಹಿಂದೂ ಯುವಕನ ಹತ್ಯೆ ಅತ್ಯಂತ ಕ್ರೂರವಾಗಿದ್ದು ಅದನ್ನು ಶಾಸಕನಾಗಿ ಖಂಡಿಸುತ್ತೇನೆ, ಈ ಮಣ್ಣು ಶಾಂತಿ, ಸಮಾನತೆ ಸಾರಿದ ಇಂತಹ ಮಣ್ಣು ಇಂತಹ ಹೀನ ಕೃತ್ಯ ಕೇಳಿ ದುಃಖವಾಯಿತು, ಇಂತಹ ಘಟನೆ ಬಗ್ಗೆ ಕಾಂಗ್ರೆಸ್ ನ ಯಾವ ಒಬ್ಬ ನಾಯಕನು ಮಾತನಾಡದೆ ಇರುವುದು ವಿಷಾದನೀಯ, ಈ ಕೃತ್ಯವೆಸಗಿದ ಅಪರಾಧಗಳಿಗೆ ಅದೇ ಸ್ಥಳದಲ್ಲಿ ಗಲ್ಲಿಗೇರಿಸಿ ನ್ಯಾಯ ದೊರಕಿಸಿ ಕೊಡಬೇಕೆಂದು ನಾನು ಸಹ ಕೇಂದ್ರದ ವಿದೇಶಾಂಗ ಮುಖ್ಯಸ್ಥರಿಗೆ ಪತ್ರದ ಮೂಲಕ ವಿನಂತಿಸುತ್ತೇನೆಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ತಾಲೂಕ ಅಧ್ಯಕ್ಷರಾದ ಶ್ರೀಶೈಲ ವಾತಡೆ ಬಜರಂಗದಳ ತಾಲೂಕ ಅಧ್ಯಕ್ಷರಾದ ರವಿ ನಾವದಗೇಕರ, ಶಾಸಕರಾದ ಶರಣು ಸಲಗರ, ಸಹ ಸಂಯೋಜಕರಾದ ಸಚಿನ್ ಗರುಡಕರ, ಪ್ರಮುಖರಾದ ವಿನೋಧ ಬಡಗೆಕರ, ಸಿದ್ದು ಬಿರಾದರ, ಜ್ಞಾನೇಶ್ವರ ಮೂಳೆ, ಮಾಧವರಾವ ಹಸುರೆ , ಸೂರ್ಯಕಾಂತ ಚಿಲ್ಲಾಬಟ್ಟೆ, ದೀಪಕ್ ಗಾಯಕವಾಡ, ಅರವಿಂದ ಮುತ್ತೆ, ಕೃಷ್ಣ ಗೋಣೆ, ಅಜಯ ಗೌವಳಿ, ರವಿ ಜಾಧವ, ಸಂಜು ಏಕಂಬೆ, ಗುರು ಪವಡೆ, ನಿತಿನ್ ಸೂರ್ಯವಂಶಿ, ಮೇಘನಾಥ ನಾವದಗೆಕರ ಸೇ ನೂರಾರು ಹಿಂದೂ ಯುವಕರು ಭಾಗವಹಿಸಿದರು.

ವರದಿ: ಶ್ರೀನಿವಾಸ ಬಿರಾದಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!