ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಪ್ರಪ್ರಥಮ ಬಾರಿಗೆ ಶ್ರೀ ವೆಂಕಟೇಶ ಮೂರ್ತಿ ಅವರ ಸಾರಥ್ಯದಲ್ಲಿ ಶ್ರೀವಾರಿ ಫೌಂಡೇಶನ್ ಮತ್ತು ಬೆಂಗಳೂರು ಆಗಮಿಕರ ವೃಂದ ತಿರುಪತಿ ಇವರ ಸಂಯೋಗದೊಂದಿಗೆ ವಿಜೃಂಭಣೆಯಿಂದ ಜರುಗಿದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮವನ್ನು ಕೊರಟಗೆರೆಯ ಎಂ ಜಿ ಪ್ಯಾಲೆಸ್ ನಲ್ಲಿ ಕನ್ನಿಕಾ ವಿದ್ಯಾಪೀಠ ಹಾಗೂ ಆರ್ಯವೈಶ್ಯ ಮಂಡಳಿಯ ಎಲ್ಲಾ ನಿರ್ದೇಶಕರು ಆಯೋಜಿಸಿದ್ದರು. ಪದ್ಮಾವತಿ ದೇವಿಯ ವಿವಾಹ ಮಹೋತ್ಸವದ ವಿಧಿ-ವಿಧಾನಗಳನ್ನು ಭಕ್ತಿಪೂರ್ವಕವಾಗಿ ಪೂಜೆ, ಸಂಕೀರ್ತನೆ, ಹೋಮ, ಮಂಗಳ ವಾದ್ಯಗಳೊಂದಿಗೆ ವೈಭವಯುತವಾಗಿ ಆಚರಿಸುವ ಧಾರ್ಮಿಕ ಕಾರ್ಯಕ್ರಮ ಶ್ರೀನಿವಾಸ ಕಲ್ಯಾಣೋತ್ಸವವನ್ನು ಕಣ್ತುಂಬಿಕೊಂಡ ಭಕ್ತರು ಗೋವಿಂದ… ಗೋವಿಂದ… ಎನ್ನುವ ಘೋಷಣೆ ಕೂಗಿ ದೇವರನ್ನು ಭಕ್ತಿಯಿಂದ ಆರಾಧಿಸಿದರು. ಭಕ್ತರಿಗೆ ಅಪೂರ್ವ ಆಧ್ಯಾತ್ಮಿಕ ಅನುಭವ ನೀಡುವ ಉದ್ದೇಶದಿಂದ ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ಆರ್ಯವ್ಯಶ್ಯ ಮಂಡಳಿಯ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಹಾಗೂ ಅಪಾರ ಭಕ್ತರು ಭಾಗವಹಿಸಿದ್ದರು.
ವರದಿ :ಪ್ರಸನ್ನಕುಮಾರ್. ಎಸ್ ,ಕೊರಟಗೆರೆ



















