ಬಳ್ಳಾರಿ / ಕುರುಗೋಡು: ಪಟ್ಟಣದ ಹಿರಿಯ ಪತ್ರಕರ್ತ, ಸಾಹಿತಿ, ಸಂಶೋಧಕರು ಪ್ರಸ್ತುತ ನಟರಾಗಿ ಖ್ಯಾತಿ ಪಡೆದಿರುವ ಕೆ. ವೀರಭದ್ರ ಗೌಡ ಅವರ ಕೆವಿಜಿ ಬ್ಯಾನರ್‌ನ ಎರಡನೇ ಕಿರು ಚಿತ್ರ ” ಬಾಳೆಕೊಳ್ಳ ” ಇದೆ ಡಿಸೆಂಬರ್ 26 ಸಂಜೆ 6ಕ್ಕೆ ಸಾಮಾಜಿಕ ಮಾಧ್ಯಮದ ಕೆವಿಜಿ ಯುಟ್ಯೂಬ್ ಚಾನೆಲ್ ನಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ತಿಳಿಸಿದೆ.
ಸಂಚಲನ ಸೃಷ್ಟಿಸಿದ “ಬಾಳೆಕೊಳ್ಳ” ಟ್ರೈಲರ್, ನೋಡುಗರ ಕೂತುಹಲ ಮೂಡಿಸಿದೆ. ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ವೀರಭದ್ರಗೌಡ ಅವರ ಪ್ರತಿಭೆ ಅನಾವರಣಕ್ಕೆ ಮೊದಲ ಚಿತ್ರ ಛಲ ಸಾಕ್ಷಿಯಾಗಿತ್ತು. ಕುಟುಂಬ ಮತ್ತು ಸಾಮಾಜಿಕ ಕಳಕಳಿಯ ಕಥೆ ಹಂದರ ಹಾಗೂ ವೀಕ್ಷಕರಿಗೆ ಮನಮುಟ್ಟುವಂತೆ ಪ್ರತಿ ಪ್ರೇಮ್ ವರ್ಕ್ ನಲ್ಲಿ ಪರಿಶ್ರಮ ಹಾಕಿದ್ದರು.
ನಟ ಮತ್ತು ನಿರ್ಮಾಪಕರಾಗಿ ಎರಡನೇ ಪ್ರಯತ್ನ “ಬಾಳೆಕೊಳ್ಳ’ ಸಿನಿಮಾ ಐದಾರು ತಿಂಗಳಿಂದ ಹೊಸ ತಂತ್ರಜ್ಞಾನದ ಕ್ಯಾಮೆರಾ, ಲೈಟಿಂಗ್ ಬಳಸಿ ಪಟ್ಟಣದ ಸುತ್ತಮುತ್ತ ಐತಿಹಾಸಿಕ ಕುರುಹುಗಳು ಹಾಗೂ ದೇವಸ್ಥಾನಗಳಲ್ಲಿ ಚಿತ್ರೀಕರಣ ಮುಗಿಸಿ ಬಳಿಕ ಇಂದು ಡಿ. 26 ರಂದು ದೊಡ್ಡ ಬಸವೇಶ್ವರ ದೇವಾಲಯ ಮುಂಭಾಗ ವೇದಿಕೆಯ ಸ್ಟೀನ್ ಗಳಲ್ಲಿ ಭರ್ಜರಿಯಾಗಿ ತೆರೆ ಕಾಣಲಿದ್ದು ಈ ಮೂಲಕ ಕಲ್ಯಾಣ ಕರ್ನಾಟಕದ ಯುವ ಪ್ರತಿಭೆಯ ಹವಾ ಸಾಮಾಜಿಕ ಮಾಧ್ಯಮಗಳಲ್ಲಿ ಧೂಳು ಎಬ್ಬಿಸುತ್ತದೆ ಎನ್ನುವುದು ಟ್ರೈಲರ್ ನೋಡಿದವರ ಅಭಿಪ್ರಾಯವಾಗಿದೆ.
ಒಟ್ಟಿನಲ್ಲಿ ಯುವ ನಟನ ಆದೃಷ್ಟ ಪರೀಕ್ಷೆ ಹಾಗೂ ಪ್ರೇಕ್ಷಕರ ಫಲಿತಾಂಶಕ್ಕೆ ಕೆವಿಜಿ ಚಿತ್ರ ತಂಡ ಕೂತುಹಲದಿಂದ ಕಾಯುತ್ತಿದೆ. ಕ್ರಿ.ಶ 847 ರಿಂದ 2025 ಎರಡು ಕಾಲಘಟ್ಟದ ಕಥೆ ಪ್ರೇಕ್ಷಕರ ಮನ ಮುಟ್ಟುತ್ತದೆ ಎನ್ನುವುದು ಚಿತ್ರತಂಡದ ಸುಳಿವು.
ಕುರುಗೋಡು ಪಟ್ಟಣ ಇತಿಹಾಸ ಪುಟಗಳಲ್ಲಿ ಸಾಮ್ರಾಜ್ಯವಾಗಿ ಮೆರೆದ ಕುಂತಳ ನಾಡಿದು ಇಲ್ಲಿನ ಪ್ರತಿ ಮಣ್ಣಿನ ಕಣದಲ್ಲಿ ಸಾಹಿತ್ಯ, ಕಲೆ ಸಂಸ್ಕೃತಿ ಅಡಗಿದ್ದು ರಾಜ ಮಹಾರಾಜರ ಶೌರ್ಯದ ಕಥೆ ಹೇಳುವ ಕೋಟೆ ಕೊತ್ತಲು ಐತಿಹಾಸಿಕ ದೇವಾಲಯಗಳು ಇಂದಿಗೂ ಸಾಕ್ಷಿಯಾಗಿ ಕಾಣಸಿಗುತ್ತವೆ ಎನ್ನುವುದು ಚಿತ್ರತಂಡದ ಅನಿಸಿಕೆ.
ಚಿತ್ರಕ್ಕೆ ಸುಭಾನ್ ಎನ್ನುವ ಯುವ ನಿರ್ದೇಶಕ ಆಕ್ಷನ್ ಕಟ್ ಹೇಳಿದ್ದು, ವಿ ರವಿ ಅವರ ಕ್ಯಾಮೆರಾ ವರ್ಕ್ ಚಿತ್ರದ ಸನ್ನಿವೇಶ ಶ್ರೀಮಂತಗೊಳಿಸಿದೆ.
ಅಲ್ಲದೆ ಸ್ಥಳೀಯ ಪ್ರತಿಭೆ ಭೀಮೇಶ್ ಚಿತ್ರದ ಎಡಿಟಿಂಗ್ ಜವಾಬ್ದಾರಿ ನಿರ್ವಹಿಸಿದ್ದು ವಿಶೇಷವಾಗಿ ನವೀನ ತಂತ್ರಜ್ಞಾನ ಎಐ ಮೂಲಕ ಸಾಂಗ್ ಹಾಡಿಸಿ ತಮ್ಮ ಕೆಲಸ ಅಚ್ಚುಕಟ್ಟಾಗಿ ಮಾಡಿದ್ದಾರೆ ಉಳಿದಂತೆ ಮೂವರು ಹೀರೋಯಿನ್ ಗಳು ಚಿತ್ರದಲ್ಲಿ ಕಾಣಿಸಲಿದ್ದು ರಿಲೀಸ್‌ಗೆ ರೆಡಿಯಾಗಿದೆ.
ತಾರಾಗಣದಲ್ಲಿ ನಟ ಕೆ ವೀರಭದ್ರ ಗೌಡ, ಸಹ ನಟಿ ಎಂ ಅಣ್ಣಯ್ಯ ಸ್ವಾಮಿ, ಪೋಷಕ ಪಾತ್ರದಲ್ಲಿ ವೆಂಕಟೇಶ್ ಗೋಣಿಕೆಹಾಳು, ಕೆವಿಜಿ ತಂಡ ಹಾಗೂ ಇತರರು ಚಿತ್ರದಲ್ಲಿ ನಟಿಸಿದ್ದಾರೆ.
ಹೊಸ ತಂತ್ರಜ್ಞಾನದ ಮೂಲಕ ಚಿತ್ರೀಕರಿಸಿದ ನಮ್ಮ ಕಿರು ಚಿತ್ರ ಬಾಳೆಕೊಳ್ಳ ಕೆವಿಜಿ ಯ್ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಆಗುತ್ತಿದ್ದು, ವಿಭಿನ್ನ ಕಥೆ ನೋಡುಗರಿಗೆ ಇಷ್ಟವಾಗುತ್ತದೆ, ಹೆಚ್ಚಿನ ಮಟ್ಟದಲ್ಲಿ ಚಿತ್ರ ವೀಕ್ಷಿಸಿ ನಮ್ಮ ತಂಡವನ್ನು ಪ್ರೋತ್ಸಾಹಿಸಬೇಕು.
- ಕೆ ವೀರಭದ್ರ ಗೌಡ, ಚಿತ್ರದ ನಟ, ನಿರ್ಮಾಪಕರು.
ವರದಿ : ಜಿಲಾನಸಾಬ್ ಬಡಿಗೇರ್



















