ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶಿವಮೊಗ್ಗದ ರಿಕ್ರಿಯೇಷನ್ ಕ್ಲಬ್‍ಗಳಲ್ಲಿ ಅಂದರ್-ಬಾಹರ್..!!

ಡಿಎಸ್‍ಪಿ ವಿರುದ್ಧ ಲೋಕಾಯುಕ್ತದಲ್ಲಿ ಕೇಸು ದಾಖಲು..!

ಶಿವಮೊಗ್ಗ: ನಗರದಲ್ಲಿ ರಿಕ್ರಿಯೆಷನ್ಸ್ ಕ್ಲಬ್‍ಗಳ ಹೆಸರಿನಲ್ಲಿ ಜೂಜು ಅಡ್ಡೆಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿದ್ದು, ಅವುಗಳನ್ನು ನಿಯಂತ್ರಿಸಿ ನಾಗರೀಕರ ನೆಮ್ಮದಿಯ ಬದುಕಿಗೆ ಅನುಕೂಲ ಮಾಡಿಕೊಡಬೇಕಿದ್ದ ಪೊಲೀಸ್ ಇಲಾಖೆ ತಟಸ್ಥವಾಗಿದೆ.

ಈ ಬಗ್ಗೆ ಹಲವಾರು ಬಾರಿ ಪತ್ರಿಕೆಗಳಲ್ಲಿ ವರದಿಗಳು ಪ್ರಕಟವಾಗಿವೆ. ಅದೇ ರೀತಿ ಹಲವು ಸಂಘಟನೆಗಳವರು ಇಸ್ಪೀಟ್ ಕ್ಲಬ್‍ಗಳನ್ನು ಬಂದ್ ಮಾಡಿಸುವಂತೆ ಮನವಿಯನ್ನೂ ಸಲ್ಲಿಸುತ್ತಲೇ ಬಂದಿವೆ.
ಆದರೆ, ಕ್ಲಬ್‍ಗಳನ್ನು ಬಂದ್ ಮಾಡಿಸುವ ಬದಲು ಪೊಲೀಸ್ ಇಲಾಖೆಯೇ ಕ್ಲಬ್‍ಗಳಿಗೆ ಕಣ್ಗಾವಲಾಗಿ ಕೆಲಸ ಮಾಡುತ್ತಿದ್ದು, ಶಿವಮೊಗ್ಗ ‘ಎ’ ಉಪವಿಭಾಗದ ಡಿಎಸ್‍ಪಿ ಬಾಬು ಅಂಜನಪ್ಪ ನೇರವಾಗಿಯೇ ಈ ಕ್ಲಬ್‍ಗಳನ್ನು ನಡೆಸುತ್ತಿರುವವರಿಂದ ಲಕ್ಷಾಂತರ ರೂಪಾಯಿಗಳ ಮಾಮೂಲಿ ಪಡೆದು ಕ್ಲಬ್ ನಡೆಸಲು ಅನುಕೂಲ ಮಾಡಿಕೊಡುತ್ತಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಬಾಬು ಅಂಜನಪ್ಪ ವಿರುದ್ಧ ಲೋಕಾಯುಕ್ತರಲ್ಲಿ ಕೇಸು ದಾಖಲಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತ, ಪತ್ರಕರ್ತ ಚಿತ್ರಪ್ಪ ಯರಬಾಳ ಎಂಬುವವರು ಡಿ.23ರಂದು ಕರ್ನಾಟಕ ಲೋಕಾಯುಕ್ತರಲ್ಲಿ ಇಸ್ಪೀಟ್ ಕ್ಲಬ್‍ಗಳಿಂದ ಮಾಮೂಲಿ ಪಡೆದು ಭ್ರಷ್ಟಾಚಾರದಲ್ಲಿ ತೊಡಗಿರುವ ಶಿವಮೊಗ್ಗ ‘ಎ’ ಉಪವಿಭಾಗದ ಡಿಎಸ್‍ಪಿ ಬಾಬು ಅಂಜನಪ್ಪ ಅವರ ವಿರುದ್ಧ ಕ್ರಮ ಕೈಗೊಂಡು ಸಾರ್ವಜನಿಕರ ನೆಮ್ಮದಿಯ ಬದುಕಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿ ಕೇಸು ದಾಖಲಿಸಿದ್ದಾರೆ.

ಇನ್ನಾದರೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಶಿವಮೊಗ್ಗ ನಗರದಲ್ಲಿ ಎಲ್ಲೆಂದರಲ್ಲಿ ತಲೆ ಎತ್ತುತ್ತಿರುವ ಜುಗಾರಿ ಅಡ್ಡೆಗಳನ್ನು ಬಂದ್ ಮಾಡಿಸುವರೋ ಕಾದು ನೋಡಬೇಕು.

ವರದಿ: ಕೊಡಕ್ಕಲ್ ಶಿವಪ್ರಸಾದ್.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!