
ತುಮಕೂರು ಜಿಲ್ಲೆಯ ಕೊರಟಗೆರೆ : ಕರ್ನಾಟಕದ ಹಿರಿಯ ರೆಬಲ್ ರಾಜಕಾರಣಿಯಾಗಿದ್ದ ದಿವಂಗತ R L ಜಾಲಪ್ಪರವರ ಮಾರ್ಗದರ್ಶನದಲ್ಲಿ ನೇರ, ನಿಷ್ಠಾವಂತ, ಸಹಕಾರ ಮನೋಭಾವ, ರೈತಪರ ಕಾಳಜಿ ಬಗ್ಗೆ ಕಲಿತ ಪಿ ಎನ್ ಕೆ. ಯವರನ್ನು ಮುಂದೆ ರಾಜಕೀಯದಲ್ಲಿ ಬೃಹತ್ ಶಕ್ತಿಯಾಗಿ ಬೆಳೆಯಬೇಕೆಂದು ಬಯಸಿದ ಜಾಲಪ್ಪನವರು.
2008ರಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಪಿ ಎನ್ ಕೃಷ್ಣಮೂರ್ತಿಯವರು ಮೀಸಲಾತಿ ಬಗ್ಗೆ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿ ನಿರಂತರವಾಗಿ ಒoದೇ ವರ್ಗಕ್ಕೆ ಮೀಸಲಾತಿ ನೀಡಬಾರದು ಎಂದು ಹೋರಾಡಿದರು.
ನಂತರ R R ನಗರ, ದಾಸರಹಳ್ಳಿಯಲ್ಲಿ ವಿಧಾನ ಸಭಾ ಅಭ್ಯರ್ಥಿಯಾಗಿ ಸ್ಪರ್ಧಿಸಿ ರಾಜಕೀಯ ಕುತಂತ್ರ, ಶಡ್ಯoತ್ರಗಳಿoದ ಸೋಲು ಕಂಡರು. ಅವರ ಜನಪರ ಕಾರ್ಯಗಳು, ಉಚಿತ ಆರೋಗ್ಯ ಶಿಬಿರ, ಆಟೋ ಚಾಲಕರಿಗೆ ಸಹಾಯ, ಹೆಣ್ಣು ಮಕ್ಕಳಿಗೆ ಪ್ರತಿ ವರ್ಷ ಬಾಗಿನ, ಕರೋನಾ ಸಂದರ್ಭದಲ್ಲಿ ಉಚಿತ ಆಹಾರ ಕಿಟ್ ಎಲ್ಲಾ ರೀತಿಯ ಸಹಾಯ ಪಡೆದ ಮತದಾರ ಬಂಧುಗಳು ಸೋಲಿನ ಹಾದಿಯನ್ನು ಪಿ. ಎನ್ ಕೆ ಗೆ ನೀಡಿದರು.
ಕೊರಟಗೆರೆಗೆ ಸ್ಥಳೀಯನಾಗಿ ಕ್ಷೇತ್ರದ ಜನತೆಯೊಂದಿಗೆ 30 ವರ್ಷದ ಅವಿನಾಭಾವ ಸಂಬಂಧವಿದ್ದು ಮತ್ತೆ ಅವರು 2028ಕ್ಕೆ ಮೀಸಲಾತಿ ತೆರವಾಗಿ ಸಾಮಾನ್ಯ ಕ್ಷೇತ್ರವಾದರೆ ಕೊರಟಗೆರೆಯಿಂದ ಸ್ಪರ್ಧಿಸಿ ಶಾಸಕರಾಗುವ ಕನಸನ್ನು ನನಸು ಮಾಡುವುದು ಕೊರಟಗೆರೆಯ ಜನತೆಯ ಮೇಲಿದೆ. ಇಂದು 27/12/2025 ಅವರ 59ನೇ ಜನ್ಮದಿನೋತ್ಸವ ಪ್ರಯುಕ್ತ ಕಟ್ಟೆ ಗಣಪತಿಗೆ ಪೂಜೆ ಸಲ್ಲಿಸಿ, ಸರ್ಕಾರಿ ಆಸ್ಪತ್ರೆಗೆ ಭೇಟಿ ಕೊಟ್ಟು ರೋಗಿಗಳಿಗೆ ಬ್ರೆಡ್, ಹಣ್ಣು, ಹಂಪಲು ನೀಡಿ, ಪಟ್ಟಣ ಪಂಚಾಯತ್ ಮುಂಭಾಗ ಕೇಕ್ ಕತ್ತರಿಸಿ ಪೌರ ಕಾರ್ಮಿಕರಿಗೆ ಜರ್ಕಿನ್ ನೀಡಿದರು. ಐ. ಕೆ. ಕಾಲೋನಿ ಯಲ್ಲಿ ಪಿ. ಎನ್. ಕೆ ಅಭಿಮಾನಿಗಳಿoದ ಅನ್ನ ಸಂತರ್ಪಣೆ, ಸಿಹಿ ಹಂಚುವ ಮೂಲಕ ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಪಿ ಎನ್ ಕೆ ,ಅಭಿಮಾನಿಗಳು, ಪಕ್ಷತೀತವಾಗಿ ಎಲ್ಲಾ ಪಂಚಾಯತ್ ಸದಸ್ಯರು, ಪಟ್ಟಣ ಪಂಚಾಯತ್ ಸದಸ್ಯರು, ಪತ್ರಕರ್ತರು, ಕರ್ನಾಟಕ ರಕ್ಷಣೆ ವೇದಿಕೆ ಸದಸ್ಯರು, ಸಮಸ್ತ ನಾಗರೀಕರು ತಾಲೂಕಿನ ಎಲ್ಲಾ ಗ್ರಾಮಸ್ಥರು ಭಾಗವಹಿಸಿದ್ದರು.
ವರದಿ : ಪ್ರಸನ್ನಕುಮಾರ್. ಎಸ್. ಕೊರಟಗೆರೆ.



















