ಕಂಪ್ಲಿ: ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ)ಯ ಕಂಪ್ಲಿ ತಾಲೂಕು ನೂತನ ಅಧ್ಯಕ್ಷರಾಗಿ ಬಳೆ ಮಲ್ಲಿಕಾರ್ಜುನ ನೇಮಕಗೊಂಡಿದ್ದಾರೆ.
ನಾಡು, ನುಡಿ, ನೆಲ, ಜಲ, ರೈತ ಕಾರ್ಮಿಕ ಸೇರಿದಂತೆ ಜನಪರ ಸಂಘಟನೆಗಳಲ್ಲಿ ಅಪಾರ ಕಾಳಜಿ ಉಳ್ಳವರಾಗಿರುವ ಜೊತೆಗೆ ಸಂಘಟನಾ ಸಾಮರ್ಥ್ಯವಿರುವ ಹಾಗೂ ಕನ್ನಡ ಪರ ಹೋರಾಟಗಳಲ್ಲಿ ಸುಮಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಾ, ಕನ್ನಡಪರ ಸೇವೆ ಸಲ್ಲಿಸಿರುವುದನ್ನು ಗುರುತಿಸಿ, ಕಂಪ್ಲಿ ತಾಲೂಕಿನ ನಂ.10 ಮುದ್ದಾಪುರ (ಯಲ್ಲಮ್ಮ ಕ್ಯಾಂಪ್) ಗ್ರಾಮದ ನಿವಾಸಿ ಬಳೇ ಮಲ್ಲಿಕಾರ್ಜುನ ಇವರನ್ನು, ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ್ರು ಇವರ ಮಾರ್ಗದರ್ಶನದ ಮೇರೆಗೆ ಹಾಗೂ ರಾಜ್ಯ ಉಪಾಧ್ಯಕ್ಷ ಚಾನಾಳ್ ಶೇಖರ್ ಇವರ ಸೂಚನೆಯ ಮೇರೆಗೆ ಹಾಗೂ ಜಿಲ್ಲಾಧ್ಯಕ್ಷರಾದ ಅಂಗಡಿ ಶಂಕ್ರಪ್ಪ ಆದೇಶದ ಮೇರೆಗೆ ಕರ್ನಾಟಕ ರಕ್ಷಣಾ ವೇದಿಕೆಯ ಕಂಪ್ಲಿ ವಿಧಾನಸಭಾ ಕ್ಷೇತ್ರದ ಕಂಪ್ಲಿ ನೂತನ ತಾಲ್ಲೂಕು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಆದೇಶ ಹೊರಡಿಸಲಾಗಿದೆ.
ನೂತನ ತಾಲೂಕಾಧ್ಯಕ್ಷ ಬಳೆ ಮಲ್ಲಿಕಾರ್ಜುನ ಮಾತನಾಡಿ, ಕಂಪ್ಲಿ ತಾಲೂಕು ಅಧ್ಯಕ್ಷ ಸ್ಥಾನ ನೀಡಿದ್ದು, ಸಂತಸದ ಜೊತೆಗೆ ಇನ್ನಷ್ಟು ಸೇವೆಗೆ ಅವಕಾಶ ಮಾಡಿಕೊಟ್ಟಿದ್ದು, ಜಿಲ್ಲಾ ಪದಾಧಿಕಾರಿಗಳ, ಸ್ಥಳೀಯ ಹಾಗೂ ಮುಖಂಡರ, ಪದಾಧಿಕಾರಿಗಳ ಸಹಕಾರದೊಂದಿಗೆ ನಮ್ಮ ಕನ್ನಡ ನಾಡು, ನುಡಿ, ಜಲ ಸಂರಕ್ಷಣೆಗೆ ಬದ್ಧವಾಗಿ ದುಡಿಯುತ್ತೇನೆ ಎಂದರು.
ವರದಿ : ಜಿಲಾನಸಾಬ್ ಬಡಿಗೇರ್



















