ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಗೃಹ ಮಂಡಳಿಯ ವಿಳಂಬದ ವಿರುದ್ಧ ರೈತರ ಆಕ್ರೋಶ

ಯಾದಗಿರಿ/ಗುರುಮಠಕಲ್‌: ಪಟ್ಟಣದ ಹೌಸಿಂಗ್ ಬೋರ್ಡ್‌ಗೆ ಭೂಮಿ ನೀಡಿದರೂ ಆರು ವರ್ಷ ಕಳೆದರೂ ಮುಂಗಡ ಹಣ ನೀಡದೇ ಇರುವ ಬಗ್ಗೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭೂಮಿ ನೀಡಿದ ರೈತ ವಿಷ್ಣುವರ್ಧನರೆಡ್ಡಿ ಕೋಸ್ಗಿ,ಲ್ ಶೀಘ್ರ ಪರಿಹಾರ ಒದಗಿಸುವಂತೆ ಆಗ್ರಹಿಸಿದ್ದಾರೆ.
ಡಿ.28 ರ ಭಾನುವಾರ ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ “ 2019ರಲ್ಲಿ ಪಟ್ಟಣದ ಸ.ನಂ.33, 32/2, 79 ಮತ್ತು 80ರಲ್ಲಿ 43 ಎಕರೆ 25 ಗುಂಟೆ ಭೂಮಿ ಸ್ವಾಧೀನ ಮಾಡಿಕೊಂಡು ಇನ್ನೂ ಮುಂಗಡ ಹಣ ನೀಡಿಲ್ಲ, ” ಷರತ್ತಿನಂತೆ 60% ಗೃಹ ಮಂಡಳಿ ಮತ್ತು 40% ರೈತರಿಗೆ ಎನ್ನುವ ಶೇರು ಪ್ರಮಾಣದ ಒಪ್ಪಂದದಂತೆ ಅಭಿವೃದ್ಧಿಪಡಿಸ ಬೇಕಾಗಿದ್ದರೂ, 6 ವರ್ಷಗಳಾದರೂ ಯಾವುದೇ ಅಭಿವೃದ್ಧಿ ನಡೆದಿಲ್ಲ ಎಂದು ಅವರು ಆರೋಪಿಸಿದರು.

ಪ್ರಮುಖವಾಗಿ ನಾಲೆಗಳು ಮುಚ್ಚಲ್ಪಟ್ಟಿವೆ, ಹದ್ದುಬಸ್ತು ಮತ್ತು ಟೌನ್‌ಪ್ಲಾನ್ ನೀಲನಕ್ಷೆ ಇಲ್ಲದೇ ಬಣದ ಅಭಿವೃದ್ಧಿ ನಡೆದಿರುವುದು ಅಧಿಕಾರಿಗಳ ಕಾರ್ಯ ವೈಖರಿಯ ಬಗ್ಗೆ ಪ್ರಶ್ನೆ ಮೂಡುತ್ತಿದೆ.

ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಪ್ರತಿ ಎಕರೆಗೆ ರೂ.20 ಲಕ್ಷ ಮುಂಗಡ, ಮತ್ತು ವಿಳಂಬಕ್ಕೆ ರೂ.6 ಲಕ್ಷ ಪರಿಹಾರ ನೀಡಿ ನಮ್ಮ ರೈತರಿಗೆ ನ್ಯಾಯ ಮಾಡಬೇಕು. ಇಲ್ಲದಿದ್ದರೆ ಭೂಮಿ ನಮಗೆ ವಾಪಸು ನೀಡಬೇಕು. ವಿಳಂಬ ನೀತಿ ಸೇರಿದಂತೆ ದಾಖಲಾತಿ ಸರಿಪಡಿಸದೇ ಅಪೂರ್ಣ ಮಾಹಿತಿ ನೀಡುತ್ತೀರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿ ಕಚೇರಿಯ ಎದುರು ಧರಣಿ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸುದರ್ಶನರೆಡ್ಡಿ, ರವೀಂದ್ರರೆಡ್ಡಿ, ರಾಮಪ್ಪ, ಉಶಪ್ಪ, ನರಸಪ್ಪ, ಇಂದಿರಮ್ಮ, ಶ್ರೀನಿವಾಸ, ಅನಂತಮ್ಮ ಸೇರಿದಂತೆ ಹಲವಾರು ರೈತರು ಉಪಸ್ಥಿತರಿದ್ದರು.

ವರದಿ: ಜಗದೀಶ್ ಕುಮಾರ್ ಭೂಮಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!