ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿರುವ ಹಲವು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಿಯೋಜಿತ ವೈದ್ಯರು ನಿಯಮಿತ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ ಎಂಬುದಾಗಿ ಸಾರ್ವಜನಿಕರಿಂದ ನಿರಂತರವಾಗಿ ನಮಗೆ ದೂರವಾಣಿ ಕರೆಗಳು ಕೇಳಿಬರುತ್ತಿವೆ, ವೈದ್ಯರು ಸಮಯಕ್ಕೆ ಲಭ್ಯವಿರದ ಕಾರಣ ಗ್ರಾಮೀಣ ಜನತೆ, ವಿಶೇಷವಾಗಿ ಗರ್ಭಿಣಿಯರು. ವೃದ್ಧರು ಹಾಗೂ ಬಡ ರೋಗಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕೆಲವೊಮ್ಮೆ ದೂರದ ಖಾಸಗಿ ಆಸ್ಪತ್ರೆಗಳಿಗೆ ಹೋಗಬೇಕಾದ ಅನಿವಾರ್ಯತೆ ಎದುರಾಗುತ್ತಿದ್ದು, ಇದರಿಂದ ಆರ್ಥಿಕ ಹಾಗೂ ಆರೋಗ್ಯ ಸಂಬಂಧಿತ ಸಮಸ್ಯೆಗಳು ಉಂಟಾಗುತ್ತಿವೆ, ಸರ್ಕಾರದಿಂದ ಗ್ರಾಮೀಣ ಜನತೆಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಈ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ವೈದ್ಯರು ಕರ್ತವ್ಯ ನಿರ್ಲಕ್ಷ್ಯ ತೋರಿಸುವುದು ಅತ್ಯಂತ ಖಂಡನೀಯ ವಿಷಯವಾಗಿದೆ.
ಆದ್ದರಿಂದ, ದಯವಿಟ್ಟು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಿಸಿದ ವೈದ್ಯರ ಕರ್ತವ್ಯ ಸಮಯವನ್ನು ಕಟ್ಟುನಿಟ್ಟಾಗಿ ಪಾಲಿಸಲು ಕ್ರಮ ಕೈಗೊಳ್ಳುವಂತೆ ಹಾಗೂ ಸಾರ್ವಜನಿಕರಿಗೆ ಸುಸಜ್ಜಿತ ಆರೋಗ್ಯ ಸೇವೆ ಲಭ್ಯವಾಗುವಂತೆ ಸೂಕ್ತ ನಿರ್ದೇಶನ ನೀಡುವಂತೆ ವಿನಂತಿಸಿಕೊಳ್ಳುತ್ತೇವೆ ಒಂದು ವೇಳೆ ಇವರ ಮೇಲೆ ಕ್ರಮಕೈಗೊಳ್ಳದಿದ್ದರೆ ನಾವು ನಿಮ್ಮ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸುತ್ತೇವೆಂದು ಬಿ.ಎಸ್.ಪಿ. ತಾಲೂಕು ಅಧ್ಯಕ್ಷರಾದ ಶಂಕರ ಫುಲೆ ಅವರು ಇಂದು ತಾಲೂಕು ವೈದ್ಯಾಧಿಕಾರಿಗಳಾದ ಅಶೋಕ ಮೈಲಾರಿ ಇವರಿಗೆ ಪತ್ರದ ಮುಖಾಂತರ ಎಚ್ಚರಿಕೆಯ ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ರಮೇಶ ರಾಠೋಡ ತಾಲೂಕ ಅಧ್ಯಕ್ಷರು, ರವಿ ಉದಾತೆ ತಾಲೂಕ ಪ್ರಧಾನ ಕಾರ್ಯದರ್ಶಿಗಳು, ಮಹಾದೇವ ಗಾಯಕವಾಡ ತಾಲೂಕ ಕಾರ್ಯದರ್ಶಿಗಳು, ದಿಲೀಪ ಸಿರೋಳೆ ಹಾರಕೂಡ ಗ್ರಾಮ ಘಟಕ ಅಧ್ಯಕ್ಷರು, ಮಾರುತಿ ಮೇಕಾಲೆ ಹಂದ್ರಾಳ (ಆರ್.) ಗ್ರಾಮ ಘಟಕ ಅಧ್ಯಕ್ಷರು, ಪ್ರಶಾಂತ ಗುಡ್ಡೆ ಹಾರಕೂಡ ಗ್ರಾಮ ಘಟಕ ಉಪಾಧ್ಯಕ್ಷರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ : ಶ್ರೀನಿವಾಸ ಬಿರಾದಾರ



















