ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಮಾಜ ಸೇವೆ ಮಾಡಬೇಕೆನ್ನುವ ಮನೋಭಾವವಿರಬೇಕು

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸುಗೂರ ಎನ್ ಗ್ರಾಮದಲ್ಲಿರುವ ಪವಾಡ ಪುರುಷ ಸದ್ಗುರು ಶ್ರೀ ಭೋಜಲಿಂಗೇಶ್ವರ ಮಠದ ಪೀಠಾದಿಪತಿಗಳಾದ ಪರಮ ಪೂಜ್ಯ ಶ್ರೀ ಹಿರಗಪ್ಪ ತಾತನವರ ಅಪ್ಪಣೆಯಂತೆ ಶ್ರೀಮಠದ ಕಿರಿಯ ಪೀಠಾಧಿಪತಿಗಳಾದ ಅಭಿನವ ಡಾ.ಕುಮಾರ ಭೋಜರಾಜರ 30ನೇ ವರ್ಷದ ಜನ್ಮ ದಿನದ ಪ್ರಯುಕ್ತವಾಗಿ ಶ್ರೀ ಭೋಜಲಿಂಗೇಶ್ವರ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯಲ್ಲಿನ 1೦4 ಶಾಲಾ‌ ಮಕ್ಕಳಿಗೆ ಉಚಿತವಾಗಿ ಕ್ಷೌರ ಸೇವೆ ಸಲ್ಲಿಸಿ ಪ್ರತಿಯೊಬ್ಬ ಮನುಷ್ಯರಿಗೂ ತಾವು ಯಾವುದೇ ಹುದ್ದೆಯಲ್ಲಿ ಇದ್ದರೂ ಸಮಾಜ ಸೇವೆ ಮಾಡಬೇಕೆನ್ನುವ ಮನೋಭಾವವಿರಬೇಕು ಅಂದಾಗ ಮಾತ್ರ ನಾವು ಹುಟ್ಟಿದ್ದು ಸಾರ್ಥವಾಗುತ್ತದೆ ಎಂದು ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹಾಗೂ ಸಮಾಜ ಸೇವಕ ಶ್ರೀ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ಹೇಳಿದರು. ‌ ತಾಲೂಕಿನ ನಾಲವಾರ ಪಕ್ಕದಲ್ಲಿ ಇರುವ ಶ್ರೀ ಭೋಜಲಿಂಗೇಶ್ವರ ಮಠದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳಿಗೆ ಶಾಲಾ ಮುಂಭಾಗದಲ್ಲಿ ಇರುವ ಅಂಗಳದಲ್ಲಿ ಉಚಿತ ಕ್ಷೌರ ಸೇವೆ ಹಮ್ಮಿಕೊಂಡಿದ್ದು 104 ಜನ ವಿಧ್ಯಾರ್ಥಿಗಳಿಗೆ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜದ ವತಿಯಿಂದ ಸೇವೆ ಮಾಡಿದರು ಎಂದು ಶಿಕ್ಷಕರಾದ ನಾಗೇಶ ವಿಶ್ವಕರ್ಮ ಅವರು ಮಾತನಾಡಿದರು. ‌ ‌ ‌ಸ್ವಾರ್ಥ ತುಂಬಿದ ಪ್ರಪಂಚದಲ್ಲಿ ಬೇರೆಯವರಿಗೆ ಸಹಾಯ ಮಾಡುವ ಒಳ್ಳೆಯ ಮನಸ್ಸಗಳ ವ್ಯಕ್ತಿಗಳು ಸಿಕುವುದೇ ಕಡಿಮೆ. ಆದರೆ ಕೆಲವು ತಾವು ಮಾಡುವ ಒಳ್ಳೆಯ ಕೆಲಸದಿಂದಲೆ ನಿಜ ಜೀವನದಲ್ಲಿ ಹೀರೊಗಳು ಆಗುತ್ತಾರೆ. ಇದಕ್ಕೆ ನೈಜ ಉದಾಹರಣೆ ಎಂದರೆ ಈ ಹಡಪದ ಅಪ್ಪಣ್ಣ ಸಮಾಜದ ನಿಸ್ವಾರ್ಥ ಸಮಾಜದ ಯುವಕ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಇವರು ತಮ್ಮ ಕಾಯಕದಿಂದ ಇಲ್ಲಿಯವರೆಗೆ ಒಟ್ಟು ೧೬ ವಿವಿಧ ಕಡೆಯಲ್ಲೂ ಸೇರಿ 1770 ಜನ ಅನಾಥರಿಗೆ ಉಚಿತವಾಗಿ ಕ್ಷೌರ ಸೇವೆ ಸಲ್ಲಿಸಿ ಮಾನವೀಯತೆ ಮೆರೆದಿದ್ದಾರೆ ಎಂದು ಶ್ರೀ ಭೋಜಲಿಂಗೇಶ್ವರ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಶಿಕ್ಷಕರಾದ ಬಸವರಾಜ ಕುಂಬಾರ ಹೇಳಿದರು.
ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ಸಮಾಜಕ್ಕೆ ಅಲ್ಪಸ್ವಲ್ಪ ಕೊಡುಗೆ ನೀಡಬೇಕೆಂದು ಈ ಶಾಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸೇವೆ ಆಗಿರುವುದು ಶ್ಲಾಘನೀಯ. ಆದರೆ ಇವರು ಶಾಲಾ ಮಕ್ಕಳಿಗೆ ತಮ್ಮ ಸಮುದಾಯದಿಂದ ಉಚಿತವಾಗಿ ಕ್ಷೌರ ಸೇವೆ ನೀಡುತ್ತಿದ್ದಾರೆ. ನಾವೆಲ್ಲರೂ ಮೆಚ್ಚುವಂತದ್ದು ಎಂದು ಸಿದ್ರಾಮರೆಡ್ಡಿ ಗೌಡ ಕುರಾಳ ಸುಗೂರ ಎನ್ ಮತದಾಳದ ಮಾತನಾಡಿದರು. ‌ಸಂಘ ಸಂಸ್ಥೆ ಹುಟ್ಟು ಹಾಕುವುದು ದೊಡ್ಡ ವಿಷಯವಲ್ಲ ಆದರೆ ಇದನ್ನು ಉಳಿಸಿ ಬೆಳಸುವುದೇ ದೊಡ್ಡದು. ಇನ್ನೊಬ್ಬರಿಗೆ ಕಷ್ಟ ಬಂದಾಗ ಸಹಾಯ ಮಾಡಬೇಕು.ಹೊರತು ಕೇಡು ಮಾಡುವ ಭಾವನೆ ಇರಬಾರದು ವಿದ್ಯಾರ್ಥಿಗಳಿಗೆ ನಾವು ಮಾಡಿದ ಸೇವೆ ನನಗೆ ತೃಪ್ತಿ ತಂದಿದೆ ಎಂದು ರಾಜ್ಯ ಹಡಪದ ಅಪ್ಪಣ್ಣ ಸಮಾಜದ ಮಾಜಿ ಸಂಘಟನಾ ಕಾರ್ಯದರ್ಶಿ ಬಸವರಾಜ ಸಿ ಹಳ್ಳಿ ಶಹಾಬಾದ ತಿಳಿಸಿದರು.
ಈ ಸಂಧರ್ಭದಲ್ಲಿ ಶರಣು ಹಡಪದ ಕೊಲ್ಲೂರು, ಹಾಗೂ ಸಂಗಮೇಶ ಹಡಪದ ಮಾರಡಗಿ, ಸೇರಿದಂತೆ ಗಣೇಶ ಹಡಪದ ಶಹಾಬಾದ ಭಾಗವಹಿಸಿದ್ದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!