ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪ್ರದರ್ಶನಗೊಂಡ ವೀರ ಅಭಿಮನ್ಯು ಕಾಳಗ ಬಯಲಾಟ : ಬಯಲಾಟಕ್ಕೆ ಚಾಲನೆ ನೀಡದ ಶಾಸಕ ಜೆ. ಎನ್. ಗಣೇಶ

ಕಂಪ್ಲಿ : ಗ್ರಾಮೀಣ ಪ್ರದೇಶದಲ್ಲಿ ನಾಟಕ, ಬಯಲಾಟ ನಡೆಯುತ್ತಿರುವುದರಿಂದ ಗ್ರಾಮೀಣ ಕಲೆಗಳು ಉಳಿಯುತ್ತಿವೆ. ಆದರೆ ಯಾಂತ್ರಿಕ ಯುಗದಲ್ಲಿ ನಾಟಕಗಳು ಕಣ್ಮರೆಯಾಗುತ್ತಿದ್ದು, ಗ್ರಾಮೀಣ ಕಲೆಗಳ ಉಳಿವಿಗೆ ಸರ್ಕಾರ ಆದ್ಯತೆ ನೀಡಬೇಕು ಎಂದು ಶಾಸಕ ಜೆ.ಎನ್.ಗಣೇಶ ಹೇಳಿದರು.
ತಾಲೂಕಿನ ನಂ. 10 ಮುದ್ದಾಪುರ ಗ್ರಾಮದಲ್ಲಿ ಚೌಡಮ್ಮದೇವಿ ಜಾತ್ರೆ ಪ್ರಯುಕ್ತ ಬಸವೇಶ್ವರ ಕೃಪಾಪೋಷಿತ ಕರ್ನಾಟಕ ಬಯಲಾಟ ಮಂಡಳಿ ಹಾಗೂ ಕರ್ನಾಟಕ ಬಯಲಾಟ ಅಕಾಡೆಮಿ ಬಾಗಲಕೋಟೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವೀರ ಅಭಿಮನ್ಯುಕಾಳಗ ಅಥಾತ್ ಸೈಂಧವನ ವದಾ ಎಂಬ ಸುಂದರರವಾದ ಪೌರಾಣಿಕ ಬಯಲು ನಾಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಯುವಕರ ಮೇಲೆ ಸಾಮಾಜಿಕ ಜಾಲತಾಣಗಳು ಹೆಚ್ಚು ಪ್ರಭಾವ ಬೀರಿ ಕಲೆ, ಸಾಹಿತ್ಯದ ಅಭಿರುಚಿ ಕಡಿಮೆಯಾಗುತ್ತಿದೆ ಎಂದು ವಿಷಾದಿಸುವ ಜೊತೆಗೆ ಇಂತಹ ಬಯಲಾಟದ ಮೂಲಕ ಗ್ರಾಮೀಣ ಕಲೆಯನ್ನು ಉಳಿಸಿ, ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕು ಎಂದರು.
ರೈತ ಮುಖಂಡ ಕಟ್ಟೆ ದುರುಗಪ್ಪ ಬಯಲಾಟದ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭದಲ್ಲಿ ಕಟ್ಟೆ ಮಹಾದೇವ, ಎಚ್.ಎಂ.ಬಸವರಾಜಸ್ವಾಮಿ, ಧನಂಜಯ್ಯ, ಎಂ.ಎಸ್.ವಿರುಪಾಕ್ಷಯ್ಯ, ಕಟ್ಟೆ ಶಂಕರ್, ವಿಜಯಮಹಾಂತೇಶ, ತಾಯಣ್ಣ, ಹೆಚ್.ಸೋಮೇಶ್ವರಿ ಪರಶುರಾಮ, ಜಡೆ ಸಾವಿತ್ರಮ್ಮ ಮಹಾದೇವಪ್ಪ, ಬಳೆ ಮಲ್ಲಿಕಾರ್ಜುನ, ವೈ.ಉಮೇಶ, ಬಂಡಾರಿ ನರಸಪ್ಪ, ಕೆ.ಶಿವರಾಮಪ್ಪ, ಹೋಟಲ್ ಕುಮಾರಸ್ವಾಮಿ, ಎ.ವಿರೇಶ, ಬಿ.ಗಂಗಾಧರ, ಡಿ.ರಮೇಶ, ಯು.ಸಣ್ಣ ಬೆಟ್ಟಪ್ಪ, ಕೆ.ಯಂಕಪ್ಪ, ದಾಸರ ನಾಗರಾಜ, ಕೆ.ಅಂಬರೇಶ, ಕೆ.ರಾಘು, ಬಿ.ಲಿಂಗಪ್ಪ, ಡಿ.ರುದ್ರಪ್ಪ, ಕೆ.ನಾಗರಾಜ, ಎಸ್.ರಾಧಾಕೃಷ್ಣ, ಎ.ನಾರಾಯಣ, ಜಿ.ದೇವೇಂದ್ರ, ಕಟ್ಟೆ ವಿರೇಶ, ಸಾಲಿ ಮುದಿಯಪ್ಪ, ಜೆ.ರಮೇಶ, ಕೊಂಡ ಜಡೆಪ್ಪ, ಬಿ.ಉರುಕುಂದಿ, ಕೆ.ಹನುಮೇಸ, ಇಂದ್ರೀಪಿ ಮಂಜುನಾಥ, ವಾಲ್ಮೀಕಿ ಸಣ್ಣ ತಿಪ್ಪಯ್ಯ, ಬಿ.ಉಮ್ಮಣ್ಣ, ಬಿ.ರುದ್ರಪ್ಪ, ಮುದುಕಪ್ಪ, ಈರಣ್ಣ, ವಾಲ್ಮೀಕಿ ಮಾರೆಪ್ಪ ಸೇರಿದಂತೆ ಸ್ಥಳೀಯ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಭಾಗವಹಿಸಿದ್ದರು.

ಪ್ರದರ್ಶನ: ಇಲ್ಲಿನ ಗ್ರಾಮದಲ್ಲಿ ರಾತ್ರಿ ಸಮಯದಲ್ಲಿ ಬಯಲಾಟ ಪ್ರದರ್ಶನ ನೋಡುಗರ ಗಮನ ಸೆಳೆಯುವ ಜೊತೆಗೆ ಜನರ ಕೇಕೆ, ಚಪ್ಪಾಳೆಗೆ ಸಾಕ್ಷಿಯಾಯಿತು. ಉಪ್ಪಾರು ಮನೋಜ್ (ಬಾಲಕೃಷ್ಣ), ವಾಲ್ಮೀಕಿ ದೊಡ್ಡ ತಿಪ್ಪಯ್ಯ (ಧರ್ಮರಾಯ), ಅಂಗಜಾಲರ ಬಿ.ಹನುಮಂತಪ್ಪ (ಅಭಿಮನ್ಯು) ವಾಲ್ಮೀಕಿ ಓಬಳೇಶ (ಭೀಮಸೇನ), ಗೌಳೇರು ಉಮೇಶ (ದುರ್ಯೋಧನ), ದಮ್ಮೂರು ವೆಂಕಟೇಶ (ದ್ರೋಣ), ವಾಲ್ಮೀಕಿ ಸಣ್ಣ ಲಿಂಗಣ್ಣ (ಕರ್ಣ), ಉಪ್ಪಾರು ರಾಜಶೇಖರ (ಸೈಂಧವ), ಹೆಚ್.ರಮೇಶ (ಕೃಷ್ಣ), ಹೆಚ್.ಕುಮಾರಸ್ವಾಮಿ(ಅರ್ಜುನ), ಉಮಾದೇವಿ(ಉತ್ತರೆ), ಭೋವಿ ಪವಿತ್ರ(ಕನಕಾಂಗಿ), ಕಮಲಮ್ಮ ಕೂಡ್ಲಿಗಿ(ದ್ರೌವದಿ ಮತ್ತು ಸುಭದ್ರ) ಇವರು ಪತ್ರಧಾರಿಗಳಾಗಿ ನಾಟಕ ಪ್ರದರ್ಶಿಸಿ, ನೋಡುಗರ ಗಮನ ಸೆಳೆದರು.
ಜೆ.ದೊಡ್ಡಬಸಪ್ಪ, ಉಪ್ಪಾರು ದೊಡ್ಡಬಸಪ್ಪ (ಮುಮ್ಮೇಳ) ಹಾಗೂ ಹೆಚ್.ಶಿವರುದ್ರಪ್ಪ, ತಿಪ್ಪೇಶ್ವಾಮಿ, ಜೀರು ಮಲ್ಲಿಕಾರ್ಜುನ, ಕರಿಬಸವನಗೌಡ(ಹಾರ್ಮೋನಿಯಂ) ನಾಟಕಕ್ಕೆ ಸಾಥ್ ನೀಡಿದರು. ಬಯಲಾಟದ ವ್ಯವಸ್ಥಾಪಕರಾಗಿ ಹೆಚ್.ಲಿಂಗೇಶ, ವಾಲ್ಮೀಕಿ ನಾಗಪ್ಪ, ಗನಮದ್ಲಿ, ಕಟ್ಟೆ ಅಂಬರೇಶ, ದಾಸರ ಹನುಮಂತಪ್ಪ, ದಮ್ಮೂರು ಕೃಷ್ಣಪ್ಪ, ಉಪ್ಪಾರು ಲಿಂಗಪ್ಪ ಕಾರ್ಯ ನಿರ್ವಹಿಸಿದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!