ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅಂತರಾಷ್ಟ್ರೀಯ ವಿಶ್ವ ವಿದ್ಯಾಲಯದಿಂದ ಮಲ್ಲಯ್ಯ ಸ್ವಾಮಿ ಇವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ

ಬೆಂಗಳೂರು: ಸಿಂಧನೂರು ತಾಲೂಕಿನ ಸಾಲಗುಂದ ಗ್ರಾಮದ ಮಲ್ಲಯ್ಯ ಸ್ವಾಮಿ ಕಂದ ಇವರು ಸಹಕಾರ ಇಲಾಖೆಯಲ್ಲಿ ಸಹಕಾರ ಸಂಘಗಳ ಸಹಾಯಕ ನಿಬಂಧಕರಾಗಿ ಸೇವೆ ಸಲ್ಲಿಸುತ್ತಿದ್ದು ಸಮಾಜಮುಖಿ ಕೆಲಸಗಳನ್ನು ಗುರುತಿಸಿ ಸನ್ ರೈಸ್ ಅಂತರಾಷ್ಟ್ರೀಯ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ ಇವರ ದಿನನಿತ್ಯದ ಕಚೇರಿ ಕರ್ತವ್ಯದೊಂದಿಗೆ ಸಮಾಜಮುಖಿ ಕಾರ್ಯವಾದ ರಕ್ತದಾನ ಸೇವೆಯನ್ನು ನಿರಂತರವಾಗಿ ಮಾಡುತ್ತಿದ್ದಾರೆ.

ಕೆಲಸ , ಮನೆ ಜವಬ್ದಾರಿ ಹೀಗೆ ಇನ್ನಿತರ ಕೆಲಸದ ಒತ್ತಡದ ಜೀವನದಲ್ಲಿ ಸಾಗುವ ಈ ಜಗದಲ್ಲಿ ನಮ್ಮಿಂದ ಒಂದು ಅಳಿಲು ಸೇವೆ ಹಾಗೂ ಮತ್ತೊಬ್ಬರ ಕಷ್ಟದಲ್ಲಿ ಭಾಗಿಯಾಗುವ ಸಂತಸದ ಕ್ಷಣಗಳನ್ನು ಆನಂದಿಸುವ ಈ ಕಾರ್ಯದಲ್ಲಿ ಭಾಗಿಯಾಗುವುದು ನಿಜಕ್ಕೂ ಸಾರ್ಥಕದ ಬದುಕಿಗೆ ಸಾಕ್ಷಿಯಾಗಿದೆ ಎಂದು ತಿಳಿಸಿಕೊಟ್ಟಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ಅನೇಕ ಸಹಕಾರ ಸಂಘಗಳ ಕಾರ್ಯಕಲಾಪಗಳೊಂದಿಗೆ ರಕ್ತದಾನ ಸೇವೆಯನ್ನು ಮಾಡುತ್ತಿದ್ದಾರೆ.

ಜೀವ ನೀಡುವ ಭಾಗ್ಯ ತಾಯಿಯ ಸ್ಥಾನಕ್ಕೆ ಮಾತ್ರ ಉಂಟು ಆದರೆ ತುರ್ತು ಪರಿಸ್ಥಿತಿಯಲ್ಲಿ ಅಂದರೆ ಅಫಘಾತ , ಡೆಲಿವರಿ , ಆಪರೇಷನ್ ಇನ್ನಿತರ ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆಯನ್ನು ನೀಗಿಸುವ ಮೂಲಕ ಜೀವ ನೀಡುವ ಕಾರ್ಯವೇ ಈ ರಕ್ತದಾನ ಸೇವೆ , ತುರ್ತು ಪರಿಸ್ಥಿತಿಯಲ್ಲಿನ ಕರೆಗಳನ್ನು ಸ್ವೀಕರಿಸಿ ಅವರ ರಕ್ತದ ಬೇಡಿಕೆಯನ್ನು ತಮ್ಮ ವ್ಯಾಟ್ಸಪ್ ಮೂಲಕ , ಸ್ಟೇಟಸ್ ಇನ್ನಿತರ ಸ್ನೇಹಿತರಿಗೆ ಹಂಚಿಕೊಳ್ಳುವ ಮೂಲಕ ಒಂದು ಜೀವ ಉಳಿಸಿವ ಕಾರ್ಯದಲ್ಲಿ ಶ್ರೀ ಮಲ್ಲಯ್ಯ ಸಾಲಗುಂದಾ ಅವರು ನಿರಂತರ 15 ವರ್ಷಗಳ ಕಾಲ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.
ಅವರು ನಮ್ಮ ರಾಜ್ಯದ ಜನತೆಗೆ ತುರ್ತು ಪರಿಸ್ಥಿತಿಯಲ್ಲಿ ನಮ್ಮನ್ನು ಸಂಪರ್ಕಿಸಿ ನಮ್ಮಿಂದಾದ ರಕ್ತದಾನ ಸೇವೆಯನ್ನು ಮಾಡೋಣ ಎಂದು ತಮ್ಮ ಸಹಕಾರಿ ಮಿತ್ರರರಿಗೂ ಹಾಗೂ ರಕ್ತದ ಬೇಡಿಕೆ ಕರೆಗಳಿಗೂ ತಮ್ಮ ದೂರವಾಣಿ ಸಂಖ್ಯೆಯನ್ನು ನೀಡಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿದ್ದಾರೆ ಇವರ ಈ ಕೆಲಸಕ್ಕೆ ಸನ್ ರೈಸ್ ಅಂತರಾಷ್ಟ್ರೀಯ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಸಿಕ್ಕಿರುವುದು ಸಂತಸದ ವಿಷಯವಾಗಿದೆ ಎಂದು ಸಮಾನ ಮನಸ್ಕರ ಗೆಳಯರ ಬಳಗದವರು ಹಾಗೂ ಸಾಲಗುಂದಾ ಗ್ರಾಮದ ಅಭಿನಂದನೆಗಳನ್ನು ವ್ಯಕ್ತಪಡಿಸಿ ಮುಂದಿನ ದಿನಮಾನಗಳ್ಲಿ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಡವರಿಗೆ ದಿನದಲಿತರಿಗೆ ನೆರವಾಗುತ್ತಾ ಹಲವಾರು ಅತ್ಯುನ್ನತ ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡು ಬರಲಿ ಎಂದು ಹರಸಿ ಹಾರೈಸಿದ್ದಾರೆ.

ವರದಿ ಹನುಮೇಶ ಭಾವಿಕಟ್ಟಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!