ಗುಂಡ್ಲುಪೇಟೆ :ಕರ್ನಾಟಕ ಕಾವಲು ಪಡೆ ವತಿಯಿಂದ ಇಂದು ಗುಂಡ್ಲುಪೇಟೆ ಪಟ್ಟಣದ ಹೊಸೂರಿನಲ್ಲಿ ವಾಸವಾಗಿರುವ ಮಧುರವರ ಸುಪುತ್ರಿಯಾದ ಎಂ.ಮೋನಿಷಾ ಎಂಬ 6ನೇ ತರಗತಿ ವಿದ್ಯಾರ್ಥಿನಿಯು ರಾಷ್ಟ್ರೀಯ ಮಟ್ಟದ ವೂಶೋ ಚಾಂಪಿಯನ್ ಕ್ರೀಡೆಯಲ್ಲಿ ಚಿನ್ನದ ಪದಕ ವಿಜೇತರಾಗಿದ್ದು ಇವರಿಗೆ ಸಂಘಟನೆ ವತಿಯಿಂದ ಶುಭ ಹಾರೈಸಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕಾವಲು ಪಡೆಯ ತಾಲ್ಲೂಕು ಅಧ್ಯಕ್ಷರಾದ ಎ.ಅಬ್ದುಲ್ ಮಾಲಿಕ್ ಮಾತನಾಡಿ ಇಂತಹ ಪ್ರತಿಭೆಗಳನ್ನು ಹುಡುಕಿ ಅವರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಕನ್ನಡಪರ ಹಿರಿಯ ಹೋರಾಟಗಾರರಾದ ಬ್ರಹ್ಮಾನಂದ್ ಮಾತನಾಡಿ ವಿದ್ಯಾರ್ಥಿನಿಗೆ ಶುಭಕೋರಿದರು ಮಾನವ ಬಂಧತ್ವ ವೇದಿಕೆ ಜಿಲ್ಲಾ ಸಂಚಾಲಕರಾದ ಮಾಡ್ರಹಳ್ಳಿ ಸುಭಾಷ್ ಮಾತನಾಡಿ ಕಾವಲು ಪಡೆಯ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ ಆರ್.ಡಿ.ಉಲ್ಲಾಸ್, ಶಿಕ್ಷಕರಾದ ಪ್ರಸನ್ನ, ಕಾವಲು ಪಡೆಯ ಜಿಲ್ಲಾ ಕಾರ್ಯಾಧ್ಯಕ್ಷರಾದ ಅಬ್ದುಲ್ ರಷೀದ್, ತಾಲ್ಲೂಕು ಕಾರ್ಯದರ್ಶಿಗಳಾದ ಎಸ್.ಮುಬಾರಕ್, ಟೌನ್ ಉಪಾಧ್ಯಕ್ಷರಾದ ಸಾದಿಕ್ ಪಾಷ, ಟೌನ್ ಗೌರವಾಧ್ಯಕ್ಷರಾದ ಶಕೀಲ್, ಟೌನ್ ಸಂಚಾಲಕರಾದ ಮುಂಟೀಪುರ ಮಾದಯ್ಯ ಸೇರಿದಂತೆ ವಿದ್ಯಾರ್ಥಿನಿಯ ಪೋಷಕರು ಹಾಗೂ ಶಿಕ್ಷಕಿಯರು ಹಾಜರಿದ್ದರು.
ವರದಿ ಕುಮಾರ್ ಗುಂಡ್ಲುಪೇಟೆ




















