ಬೆಳಗಾವಿ/ ಬೈಲಹೊಂಗಲ ನಗರಸಭೆ ವ್ಯಾಪ್ತಿಯ ವಾರ್ಡ್ ನಂ.16 ರ ಹೊಸ ಓಣಿಯಲ್ಲಿ ಸ್ವಚ್ಛತಾ ಶ್ರಮದಾನ ಮತ್ತು ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ನಂ.03 ರ ಗ್ರೀನ್ ಇಕೋ ಹಾಗೂ ರಾಷ್ಟ್ರೀಯ ಹಸಿರು ಪಡೆಯ ಶಾಲಾ ವಿದ್ಯಾರ್ಥಿಗಳು, ಶಿಕ್ಷಕ ವೃಂದ ಮತ್ತು ಸಾರ್ವಜನಿಕರ ಪಾಲ್ಗೊಂಡು ಅಲ್ಲಿನ ಉದ್ಯಾನವನ ಹಾಗೂ ರಸ್ತೆ ಮತ್ತು ಚರಂಡಿಗಳನ್ನು ಸ್ವಚ್ಛಗೊಳಿಸಲಾಯಿತು.
ನಂತರ ಪೌರಾಯುಕ್ತರಾದ ಶ್ರೀ ವಿರೇಶ ಹಸಬಿ ಮಾತನಾಡಿ ಸ್ವಚ್ಛತೆ ಎನ್ನುವುದು ಯಾರೋ ಒಬ್ಬರ ಜವಾಬ್ದಾರಿಯಲ್ಲ, ಇದು ನಮ್ಮೆಲ್ಲರ ಹೊಣೆಗಾರಿಕೆಯಾಗಿದ್ದು, ವಿದ್ಯಾರ್ಥಿಗಳು ಸ್ವಚ್ಛತೆಯ ತಿಳುವಳಿಕೆಯನ್ನು ಬಾಲ್ಯದಿಂದಲೇ ಕಲಿಯಬೇಕು ಮಕ್ಕಳು ಶಾಲೆಯಲ್ಲಿ ಮತ್ತು ಮನೆಯಲ್ಲಿ ಸ್ವಚ್ಛತೆಯನ್ನು ಪಾಲಿಸಿ ನನ್ನ ಕಸ ನನ್ನ ಜವಾಬ್ದಾರಿ ಎಂಬ ಅರಿವು ಮೂಡಿದಾಗ ಜವಾಬ್ದಾರಿಯುತ ನಾಗರೀಕರಾಗಲು ಸಾಧ್ಯವಿದ್ದು, ಪ್ರತಿ ನಿತ್ಯ ಮನೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ರಸ್ತೆ, ಚರಂಡಿಗಳಲ್ಲಿ ಎಸೆಯದೇ ಹಸಿಕಸ, ಒಣಕಸ, ಗೃಹಿಕ ಅಪಾಯಕಾರಿ ಕಸವನ್ನಾಗಿ ಮೂಲದಲ್ಲಿ ಬೇರ್ಪಡಿಸಿ ನಗರಸಭೆ ವಾಹನಗಳಿಗೆ ನೀಡಲು ಹಾಗೂ ಖುಲ್ಲಾ ನಿವೇಶನಗಳು ಇದ್ದಲ್ಲಿ ಅವುಗಳನ್ನು ನಿಯಮಿತವಾಗಿ ಸ್ವಚ್ಛವಾಗಿಟ್ಟುಕೊಂಡು ನಗರಸಭೆಯೊಂದಿಗೆ ಸಹಕರಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆಯ ಮಾಜಿ ಉಪಾಧ್ಯಕ್ಷರಾದ ಶ್ರೀ ಬುಡ್ಡೇಸಾಬ ಫಕ್ರುಸಾಬ ಶಿರಸಂಗಿ, ಸಮುಧಾಯ ಸಂಘಟನಾಧಿಕಾರಿ ಶ್ರೀ ಆರ್. ಎಸ್. ಹಿಟ್ಟಣಗಿ, ಕಛೇರಿ ವ್ಯವಸ್ಥಾಪಕರಾದ ಶ್ರೀ ಎಮ್. ಆಯ್. ಕುಟ್ರಿ, ಶ್ರೀ ಬಿ. ಆಯ್. ಗುಡಿಮನಿ, ಶ್ರೀ ಎಸ್. ಎನ್. ಪಾಟೀಲ, ಶ್ರೀ ಎಸ್. ಎಸ್. ನರಗುಂದ, ಶ್ರೀ ಅಶೋಕ ಹುಲ್ಲೆನ್ನವರ, ಶ್ರೀ ಸಿದ್ರಾಮ ತಟವಾಟಿ, ಶ್ರೀ ಬಸವರಾಜ ಕುಡಸೋಮಣ್ಣವರ ಹಾಗೂ ಕಮ್ಯೂನಿಟಿ ಮೊಬಲೈಸರ್‌ಗಳಾದ ಶ್ರೀಮತಿ ಮಾಧುರಿ ರಾಮಗುಂಡಿ, ಶ್ರೀಮತಿ ಶಿವಲೀಲಾ ಕರಿಬಾಳೆ, ಶ್ರೀಮತಿ ಸವಿತಾ ಹರಕುಣಿ, ಕು. ಕಾವ್ಯಾ ಪಾಟೀಲ ಹಾಗೂ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ವರದಿ ಮಂಜು .ಎಂ. ಚಿಕ್ಕಣ್ಣವರ




















