
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕು ಜಿ. ನಾಗೇನಹಳ್ಳಿಯಲ್ಲಿ 76 ನೇ ವರ್ಷದ ಸುಗ್ಗಿ ವೈಭವ ಮತ್ತು ಸಂಕ್ರಾಂತಿ ಆಚರಣೆಯ ಮಹತ್ವ.
ಕರ್ನಾಟಕದಲ್ಲಿ ಮಕರ ಸಂಕ್ರಾಂತಿ ವೈಭವವನ್ನು ಅನುಭವಿಸಿ,ಉತ್ಸವ, ಎಳ್ಳು-ಬೆಲ್ಲದ ಸವಿಯನ್ನು ಅನ್ವೇಷಿಸಿ, ಚಳಿಗಾಲದ ಇಬ್ಬನಿಯ ನಡುವೆ ಸೂರ್ಯನು ತನ್ನ ಪಥವನ್ನು ಬದಲಿಸಿ ಉತ್ತರದ ಕಡೆಗೆ ಚಲಿಸಲು ಆರಂಭಿಸುತ್ತಿದ್ದಂತೆ, ಕರ್ನಾಟಕದಾದ್ಯಂತ ಸಂಭ್ರಮದ ವಾತಾವರಣ ಮನೆಮಾಡುತ್ತದೆ. ನಮ್ಮ ಕರ್ನಾಟಕದಲ್ಲಿ ಇದು “ಮಕರ ಸಂಕ್ರಾಂತಿ” ಅಥವಾ ರೈತರ ಹೆಮ್ಮೆಯ “ಸುಗ್ಗಿ ಹಬ್ಬ”.
ಈ ಹಬ್ಬವು ಕೇವಲ ಸಂಪ್ರದಾಯವಲ್ಲ, ಇದೊಂದು ವಿಜ್ಞಾನ ಮತ್ತು ಸಂಸ್ಕೃತಿಯ ಸಮ್ಮಿಲನ. ಈ ಬಾರಿಯ ಸಂಕ್ರಾಂತಿಯನ್ನು ಜಿ. ನಾಗೇನಹಳ್ಳಿ ಶ್ರೀ ಲಕ್ಷೀ ನರಸಿಂಹಸ್ವಾಮಿ ದೇವಾಲಯ ಮತ್ತು ಮದ್ದಮ್ಮ ದೇವಸ್ಥಾನಗಳಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಎರಡೂ ದೇವಾಲಯಗಳಿಗೆ ಪುಷ್ಪಗಳು, ದೀಪಾಲಂಕಾರ ಜೊತೆಗೆ ಮುತ್ತಿನ ಪಲ್ಲಕ್ಕಿ ಹಾಗೂ ವಿವಿಧ ವಾದ್ಯಗಳೊಂದಿಗೆ ಊರಿನ ಗ್ರಾಮಸ್ಥರು ಅಣ್ಣತಮ್ಮಂದಿರು, ಅಕ್ಕತoಗಿಯರು, ಬಂಧು ಬಳಗ ಎಲ್ಲರೂ ಸೇರಿ ವಿಜೃಂಭಣೆ ಸಡಗರದಿoದ ಆಚರಿಸಿದರು.
ಗ್ರಾಮೀಣ ಭಾಗದಲ್ಲಿ, ಇದು ಕಬ್ಬು, ಅರಿಶಿನ ಮತ್ತು ಭತ್ತದ ಮೊದಲ ಫಸಲನ್ನು ಕಟಾವು ಮಾಡಿದ ರೈತರು, ಭೂಮಿಯ ಮೇಲಿನ ಜೀವಕ್ಕೆ ಶಕ್ತಿ ತುಂಬುವ ಸೂರ್ಯದೇವನಿಗೆ ಈ ಬೆಳೆಗಳನ್ನು ಅರ್ಪಿಸುತ್ತಾರೆ ನಾಗೇನಹಳ್ಳಿಲ್ಲಿ ಮಕರ ಸಂಕ್ರಾಂತಿ ಹಬ್ಬದ ಆಚರಣೆಯು ಒಂದು ಬೃಹತ್ ಸಮುದಾಯದ ಹಬ್ಬವಾಗಿದೆ. ಬೆಂಗಳೂರಿನಂತಹ ನಗರಗಳಲ್ಲಿ “ಎಳ್ಳು ಬೆಲ್ಲ” ಬೀರುವ ಸಂಪ್ರದಾಯದ ವೈಭವವಿದ್ದರೆ, ಗ್ರಾಮೀಣ ಜಿಲ್ಲೆಗಳಲ್ಲಿ ಲಕ್ಷಾಂತರ ಜನರನ್ನು ಆಕರ್ಷಿಸುವ ದಿನ ಪೂರ್ತಿ ನಡೆಯುವ ಜಾತ್ರೆಯಂತೆ ಕಾಣಬಹುದು.
ನಮ್ಮ ಆಹಾರ ಬೆಳೆಯುವ ಕೃಷಿ ಭೂಮಿಗೆ ಪ್ರತಿಯೊಬ್ಬರೂ ಕೃತಜ್ಞರಾಗಿರಬೇಕು ಎಂಬುದು ಈ ಹಬ್ಬದ ಸುಂದರ ಸಂದೇಶ. ಶಾಂತಿ, ಪ್ರೀತಿ ಮತ್ತು ಸೌಹಾರ್ದತೆಯನ್ನು ಹರಡುವುದೇ ಹಬ್ಬದ ಸಾರ. ಸಂಭ್ರಮಾಚರಣೆಗಳು, ಉತ್ತಮ ಊಟ, ಹೊಸ ಬಟ್ಟೆಗಳು, ಸಂತೋಷ ಮತ್ತು ಪರಸ್ಪರ ಸಿಹಿ ವಿನಿಮಯ ಮಾಡಿಕೊಳ್ಳುವುದನ್ನು ಪ್ರತಿಯೊಂದು ಮನೆಯಲ್ಲೂ ಕಾಣಬಹುದು. ಕಾರ್ಯಕ್ರಮದಲ್ಲಿ ಮೂರ್ತಣ್ಣನವರು ಪೂಜಾರ್ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಅಧ್ಯಕ್ಷರು, ಸುರೇಶ ಎನ್, ಯು, ನರಸಿಂಹ ಮೂರ್ತಿ ಎನ್. ಆರ್. ಹಾಗೂ ಜಿ ನಾಗೇನಹಳ್ಳಿ ಮತ್ತು ಗೋಕುಲದ ಎಲ್ಲಾ ಗ್ರಾಮ ಪಂಚಾಯತಿಯ ಅಧ್ಯಕ್ಷರು ಹಾಗೂ ಸದಸ್ಯರು ಸಂಕ್ರಾಂತಿಯ ಶ್ರೀ ರಾಮೋತ್ಸವದಲ್ಲಿ ಭಾಗಿಯಾಗಿದ್ದರು.
ವರದಿ ಪ್ರಸನ್ನಕುಮಾರ್ ಎಸ್.




















