ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನರೇಂದ್ರಾಚಾರ್ಯರ ಸಂಯೋಗದಲ್ಲಿ ರಕ್ತದಾನ ಶಿಬಿರ

ಬೀದರ್ ಜಿಲ್ಲೆ ಬಸವಕಲ್ಯಾಣ ನಗರದ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಂದು ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಶ್ರೀ ನರೇಂದ್ರಾಚಾರ್ಯ ದಕ್ಷಿಣಪೀಠ ನಾಣೀಜಧಾಮ ಮಹಾರಾಷ್ಟ್ರ ರವರ ಸಂಯೋಗದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.


“ನೀವು ಬಾಳಿ ಇನ್ನೊಬರನ್ನು ಬಾಳಿಸಿ” ಎನ್ನುವ ಸಂದೇಶವನ್ನು ಜಗದ್ಗುರು ಶ್ರೀಮದ್‌ ರಾಮಾನಂದಾಚಾರ್ಯ ನರೇಂದ್ರಾಚಾರ್ಯ ರವರು ಜಗತ್ತಿಗೆ ಸಾರಿದ್ದಾರೆ. ಮತ್ತು ಈ ರಕ್ತದಾನ ದಾನ ಪ್ರತಿ ವರ್ಷ 15 ದಿನಗಳ ಕಾಲ ನಡೆಯುತ್ತದೆ ಈ ಮಹಾಕುಂಭದ ಸಂಸ್ಥಾನದಿಂದ ರೋಗಿಗಳಿಗೆ ಉಚಿತವಾಗಿ ರಕ್ತ ಲಭ್ಯವಾಗುವಂತೆ ಮಾಡುವ ಮಹಾನ್ ಉಪಕ್ರಮವನ್ನು ನಡೆಸಲಾಗುತ್ತಿದೆ.
ಮಾನವ ಜೀವನದಲ್ಲಿ ದಾನದ ಮಹತ್ವ ಅಮೂಲ್ಯವಾದುದು ಆದರೆ ಯಾವ ದಾನದಿಂದ ಒಬ್ಬರ ಆಯಸ್ಸು ಉಳಿಯುತ್ತದೆಯೋ, ಅಂತಹ ರಕ್ತದಾನವೇ ಸರ್ವಶ್ರೇಷ್ಟ ಪುಣ್ಯ ಎನಿಸುತ್ತದೆ. ರಕ್ತದಾನ ಮಾಡಿ ಸರ್ವಶ್ರೇಷ್ಠ ದಾನದ ಪಾಲುದಾರರಾಗಿ ಎಂದು ಈ ಒಂದು ಶಿಬಿರ ನಡೆಸಲಾಗುತ್ತಿದೆ. ಈ ರಕ್ತದಾನ ಶಿಬಿರವನ್ನು ಕಾಂಗ್ರೇಸ್ ಪಕ್ಷದ ಮಾಜಿ ವಿಧಾನ ಪರಿಷತ್‌ ಸದಸ್ಯರಾದ ಶ್ರೀ ವಿಜಯಸಿಂಗ್‌ ರವರು ಉದ್ಘಾಟಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಅತಿಥಿಗಳಾಗಿ ಮಹೇಶ ಪಾಟೀಲ ಉಜಳಂಬ, ಕಾಳಿದಾಸ ವಾಡೇಕರ, ಸಂಭಾಜಿ ಜಾಧವ ಹಾಗೂ ಶಿಬಿರದ ಆಯೋಜಕರುಗಳಾದ ವಿಠಲ ಮಾಳೆ, ಜಿಲ್ಲಾ ನಿರೀಕ್ಷಕರು, ಬಸವಕಲ್ಯಾಣ ಅಧ್ಯಕ್ಷರಾದ ಲಕ್ಷ್ಮಣ ಚಿಟ್ಟಂಪಲ್ಲೆ, ಮಹಿಳಾ ಘಟಕದ ಅಧ್ಯಕ್ಷರಾದ ವಂದನಾ ತಾಯಿ, ಸಂಜೀವಿ ಪ್ರಮುಖ ಬಾಲಾಜಿ ಮಲಗೀರೆ, ಸಾಮಾಜಿಕ ಪ್ರಮುಖ ನಾಗಶೆಟ್ಟಿ ಬಿರಾದಾರ, ಸಾಮಾಜಿಕ ಉಪಕ್ರಮ ಕಿಶನರಾವ ಗಾಯಕವಾಡ, ಮೇಜರ್‌ ಮಹಾದೇವ ಪಂಚಾಳ, ಪ್ರಸಿದ್ದಿ ಪ್ರಮುಖ ದಿಲೀಪ ವಾಲೆ, ಭಕಿ ಕೇಂದ್ರದ ಅಧ್ಯಕ್ಷರು ರೋಹಿದಾಸ ವತಾರೆ ಹುಲಸೂರ, ಜನಗಣನಾ ಪ್ರಮುಖ ಸುರೇಶ ಮೋರೆ, ಸಂಜೀವಿನಿ ಪ್ರಮುಖ ಸಂಗೀತಾ ಮೋರೆ, ಸೇವಾ ಕೇಂದ್ರದ ಅಧ್ಯಕ್ಷರು ಸೋನಾಲಿ ಬಿರಾದಾರ, ದೇಣಿಗೆ ಪ್ರಮುಖರು ಅನಿತಾ ಮೇತ್ರೆ, ಪ್ರವಚನಕಾರರು ಸವಿತಾ ಸಂಗನೂರೆ, ಭಕ್ತ ಜೋಡನೆ ಅಂಜಲಿ ಜಾಧವ, ತಾಲೂಕು ದೇಣಿಗೆ ಪ್ರಮುಖರು ಸ್ವಾತಿ ರೆಡ್ಡಿ, ಸತ್ಸಂಗ ಜೋಡಣೆ ಗೀತಾ ಗಣೇಶ, ತಾಲೂಕು ವ್ಯವಸ್ಥಾಪಕರು ಗುಂಡಪ್ಪ ಕುಂಬಾರ, ಸೇವಾ ಪ್ರಮುಖರು ರಾಜೇದ್ರ ಮಾರುತಿ ಮಾಣೆ, ತಾಲೂಕು ಯುವ ಪ್ರಮುಖರು ರಾಮ ಮೋರಖಂಡಿ, ತಾಲೂಕು ರಕ್ತದಾನ ಶಿಬಿರ ಪ್ರಮುಖರು ಅಭಿಷೇಕ ಕಿಶನ ಜಾಧವ, ಸಮಾಜ ಸೇವಕರು ಅಜೀತ ಸೂರ್ಯವಂಶಿ, ಜಗನ್ನಾಥ ಸ್ವಾಮಿ ಅರ್ಜುನ ಮತ್ತು ಸರಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾ. ಯುವರಾಜ ಬಿರಾದಾರ, ರಕ್ತ ಸಂಗ್ರಹ ಘಟಕದಿಂದ ಬಂದಂತಹ ವೈದ್ಯಾಧಿಕಾರಿಗಳು ಹಾಗೂ ರಕ್ತದಾನ ಮಾಡಲು ಬಂದಂತಹ 50 ಕ್ಕಿಂತ ಹೆಚ್ಚು ರಕ್ತದಾನಿಗಳು ಈ ರಕ್ತದಾನ ಶಿಬಿರದಲ್ಲಿ ಭಾಗಿಯಾಗಿದ್ದರು.

ವರದಿ : ಶ್ರೀನಿವಾಸ ಬಿರಾದಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!